ಬೆಂಗಳೂರು: ರಾಜ್ಯದಲ್ಲಿ ಸಂಭವಿಸುತ್ತಿರುವ ಕೊರೊನಾ ಮಹಾಸ್ಫೋಟಕ್ಕೆ ತತ್ತರಿಸಿರುವ ರಾಜ್ಯದ ರಾಜಧಾನಿಗೆ ಬಂದಿದ್ದ ಗ್ರಾಮೀಣ ಪ್ರದೇಶದ ಜನರು ಬಾಡಿಗೆ ಮನೆಯನ್ನು ತೊರೆದು ತಮ್ಮ ಸ್ವಂತ ಊರಿಗೆ ತೆರಳುತ್ತಿದ್ದಾರೆ.
ಇದರಿಂದ ಮೈಸೂರು ಮತ್ತು ನೆಲಮಂಗಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದೆ.
ಇನ್ನು ಬೆಂಗಳೂರನ್ನು ತೊರೆಯುತ್ತಿರುವ ಜನರನ್ನು ಕೇಳಿದರೆ ನಮಗೆ ಈ ಮಹಾನಗರದ ಸಹವಾಸವೇ ಬೇಡ ಎಂದು ಹೇಳುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಇನ್ನು ಕೆಲ ಕಾರ್ಖಾನೆಗಳು ತೆರೆದಿಲ್ಲ. ಮತ್ತೊಂದೆಡೆ ಕೆಲಸವಿಲ್ಲದೆ ಜೀವನ ದುಸ್ತರವಾಗುತ್ತಿದೆ. ಈ ಎಲ್ಲಾ ಕಾರಣದಿಂದ ತಮ್ಮ ಗ್ರಾಮಗಳತ್ತ ಮುಖಮಾಡಿರುವುದಾಗಿ ಹೇಳುತ್ತಿದ್ದಾರೆ.