NEWSನಮ್ಮರಾಜ್ಯ

ರಾಜ್ಯದಲ್ಲಿ ಜುಲೈ 1ರಂದು ಕೊರೊನಾ ಸ್ಫೋಟ: 1272 ಮಂದಿಗೆ ಪಾಸಿಟಿವ್‌, 7 ಜನರ ಬಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಹಾಮಾರಿ ಕೊರೊನಾ ಮಹಾಸ್ಫೋಟ ಇಂದು ಕೂಡ ರಾಜ್ಯದಲ್ಲಿ ಆಗಿದ್ದು, 1272 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.  ಈ ಮೂಲಕ ಸೋಂಕಿತರ ಸಂಖ್ಯೆ  ರಾಜ್ಯದಲ್ಲಿ 16514  ಕ್ಕೆ ಏರಿಕೆಯಾಗಿದೆ.

ಕೊರೊನಾಗೆ ಇಂದು 7 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 257ಕ್ಕೆ  (ಅನ್ಯಕಾರಣಕ್ಕೆ 4 ಮಂದಿ ಸೇರಿ) ಏರಿಕೆಯಾಗಿದೆ. ಬೆಂಗಳೂರು, ಬೀದರ್ ನಲ್ಲಿ ತಲಾ 2, ದಕ್ಷಿಣ ಕನ್ನಡ, ಹಾಸನ, ಬೆಳಗಾವಿಯಲ್ಲಿ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಉತ್ತಮವಾಗಿದ್ದು, ಬುಧವಾರ 145 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಈವರೆಗೆ 8063 ಮಂದಿ ಮುಣಮುಖರಾಗಿ ಮನಗೆ ಮರಳಿದ್ದಾರೆ.  ಒಟ್ಟು 8194 ಸಕ್ರಿಯ ಪ್ರಕರಣಗಳಿದ್ದು, 292 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಇಂದು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ 735,  ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ 28, ಹಾಸನ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ಕಲಬುರಗಿ 14, ರಾಮನಗರ 14, ಕೊಪ್ಪಳ 13, ರಾಯಚೂರು 12, ಚಿತ್ರದುರ್ಗ 12, ಯಾದಗಿರಿ, ಬೀದರ್, ಬೆಳಗಾವಿ ತಲಾ 8, ಕೊಡಗು 7, ಕೋಲಾರ, ಮಂಡ್ಯ ತಲಾ 5, ಶಿವಮೊಗ್ಗ 3, ಗದಗ 2 ಮತ್ತು ಚಿಕ್ಕಮಗಳೂರಿನಲ್ಲಿ 1 ಪ್ರಕರಣ ವರದಿಯಾಗಿದೆ.

1 Comment

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು