NEWSನಮ್ಮರಾಜ್ಯ

ಇಂದು ಕೊರೊನಾಗೆ ರಾಜಧಾನಿಯಲ್ಲಿ ಇಬ್ಬರು ಬಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಮಹಾಮಾರಿ ಕರ್ನಾಟಕದ ರಾಜಧಾನಿಯಲ್ಲಿ ತನ್ನ ರೌದ್ರನರ್ತನವನ್ನು ಮುಂದುವರಿಸಿದ್ದು, ಇಂದೂ ಕೂಡ ಇಬ್ಬರನ್ನು ಬಲಿಪಡೆದಿದೆ.

ನಗರದ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದ 74 ಮತ್ತು 64 ವರ್ಷದ ಇಬ್ಬರು ವೃದ್ಧರು ಕೊರೊನಾದಿಂದ ಅಸುನೀಗಿದ್ದು, ನಾಗರಿಕರ ನಿದ್ದೆಗೆಡಿಸಿದೆ.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮತ್ತು ಜನರು ಕಾಳಜಿ ವಹಿಸುತ್ತಿದ್ದಾರೆ. ಆದರೂ ಇದರ ನಿಯಂತ್ರಣ ಕಷ್ಟಸಾಧ್ಯವಾಗುತ್ತಿರುವುದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.

ಇನ್ನು ರಾಜಧಾನಿಯಲ್ಲಿ ಬಿಎಂಟಿಸಿ ಬಸ್‌ಗಳ ಓಡಾಟವಿದ್ದರು ಕೊರೊನಾ ಭಯದಿಂದ ಜನರು ಬಸ್‌ನಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಿಎಂಟಿಸಿಗೆ ಕೋಟ್ಯಂತರು ನಷ್ಟವೂ ಉಂಟಾಗುತ್ತಿದೆ.

ಈ ನಡುವೆ ಕೊರೊನಾ ಸೋಂಕಿಗೆ ರಾಜಧಾನಿಯಲ್ಲಿ ನಿತ್ಯ ಅಸುನಿಗುವವರ ಸಂಖ್ಯೆ ಏರುತ್ತಿರುವುದು ವೈದ್ಯರಲ್ಲೂ ಆತಂಕಕ್ಕೆ ಕಾರಣವಾಗಿದೆ.

Leave a Reply