CrimeNEWSನಮ್ಮರಾಜ್ಯ

ವೈದ್ಯನ ಹನಿ ಹನಿಟ್ರ್ಯಾಪ್‌ಗೆ ಬೀಸಿದ ಯುವತಿ ಸೇರಿ ಮೂವರ ಸೆರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೈದ್ಯನನ್ನು ಹನಿಟ್ರ್ಯಾಪ್‌ಗೆ ಕೆಡವಿದ ಯುವತಿ ಸೇರಿ ಮೂವರು ಖತರ್‌ನಾಕ್‌ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಹೊಂಗಸಂದ್ರ, ಮೈಕೋ ಲೇಔಟ್‌ ನಿವಾಸಿ ಚಾಂದಿನಿ (22), ಲಾಲ್‌ಬಹದ್ದೂರ್ ಶಾಸ್ತ್ರಿನಗರ, ಅಂಜನಾಪುರ ನಿವಾಸಿ ಪ್ರಜ್ವಲ್ (26) ಹಾಗೂ ಸಿಂಗಸಂದ್ರ, ಜಿ.ಕೆ.ಲೇಔಟ್‌ನ ನಿವಾಸಿ ಅನಿರುದ್ಧ (23) ಬಂಧಿತರು.

ಚಾಂದಿನಿ ಹಾಗೂ ಅನಿರುದ್ಧ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಚಾಂದಿನಿ ಸಾಗರ ತಾಲೂಕಿನ ಕಾರ್ಗಲ್‌ ನ ಜಾಲಿಗದ್ದೆ ಗ್ರಾಮದ ಚಾನಲ್ ಹತ್ತಿರ ನಿವಾಸಿಯಾಗಿದ್ದರೆ, ಅನಿರುದ್ಧ ಕೂಡ ಸಾಗರದ ಜೋಗ ರಸ್ತೆಯ ಪಿಶ್ ಮಾರ್ಕೆಟ್‌ ಹತ್ತಿರದ ಕಾರ್ಗಲ್ ನಿವಾಸಿಯಾಗಿದ್ದಾನೆ.

ಆನ್‌ಲೈನ್‌ನಲ್ಲಿ ಪರಿಚಿತಳಾದ  ಚಾಂದಿನಿ
ಜೂನ್ 14ರಂದು ಯಲಹಂಕ ಪೊಲೀಸ್ ಠಾಣೆಗೆ ಬಂದ ವೈದ್ಯರೊಬ್ಬರು ತಾವು ಮೋಸಹೋದ ಹನಿಟ್ರ್ಯಾಪ್‌ ಬಗ್ಗೆ ದೂರು ನೀಡಿದ್ದರು. ತಮಗೆ ಆನ್‌ಲೈನ್‌ನಲ್ಲಿ ಚಾಂದಿನಿ ಬಿ. ಎಂಬವಳು ಪರಿಚಿತಳಾಗಿದ್ದು, ಇಬ್ಬರು ಸ್ನೇಹಿತರಾದೆವು. ಜೂನ್ 13ರಂದು ಏರ್‌ ಪೋರ್ಟ್ ರಸ್ತೆಯ ಹೋಟೆಲ್‌ ಒಂದರಲ್ಲಿ ಊಟ ಮಾಡಿಕೊಂಡು ರಾತ್ರಿ ಸುಮಾರು 11 ಗಂಟೆಗೆ ನಾನು ಮತ್ತು ಚಾಂದಿನಿ ನಮ್ಮದೇ ಆದ ಯಲಹಂಕ ಪ್ರಕೃತಿ ನಗರದ ಬಾಡಿಗೆ ಮನೆಗೆ ಬಂದೆವು.

ನಾವಿಬ್ಬರೂ ಮನೆಯ ಒಳಗಡೆ ಹೋದಾಗ ಏಕಾಏಕಿ ಇಬ್ಬರು ನಮ್ಮ ಮನೆಯ ಒಳಗೆ ಅತಿಕ್ರಮಣ ಪ್ರವೇಶ ಮಾಡಿ ನಾವು ಟಿವಿಯವರು ಹಾಗೂ ಇಂಟಿಲಿಜೆಂಟ್ಸ್ ಪೊಲೀಸರು ಎಂದು ಹೇಳಿದರು. ನೀವಿಬ್ಬರು ಒಟ್ಟಿಗೆ ಇರುವ ಖಾಸಗಿ ದೃಶ್ಯಗಳು ನಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದೇವೆ ಎಂದು ಹೇಳಿ ನಮಗೆ 10 ಲಕ್ಷ ರೂ. ಕೊಡದಿದ್ದರೆ ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಚಾಂದಿನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಮುರುಗನ್, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, ಯಹಲಂಕ ಉಪ ವಿಭಾಗದ ಎಸಿಪಿ ಎಂ.ಎಸ್. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಯಹಲಂಕ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಬಿ.ರಾಮಕೃಷ್ಣ ರೆಡ್ಡಿ ಅವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಗಂಗರುದ್ರಯ್ಯ, ಸುಭಾಷ್ ಚಂದ್ರಪಟ್ಟಣ, ಶಿವಕುಮಾರ್ ಬದ್ನೂರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್