NEWSನಮ್ಮರಾಜ್ಯ

ಮಾಸ್ಕ್‌ ಡೇ ಪಾದಯಾತ್ರೆಗೆ ಸಿಎಂ ಬಿಎಸ್‌ವೈ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ    ಬಿ.ಎಸ್‌. ಯಡಿಯೂರಪ್ಪ  ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮಾಸ್ಕ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು.

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಜಾಗೃತಿ ಮೂಡಿಸಲು ಗುರುವಾರ ರಾಜ್ಯಾದ್ಯಂತ ‘ಮಾಸ್ಕ್‌ ದಿನ’ ಆಚರಿಸಲಾಗುತ್ತಿದೆ. ಇದನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊರೊನಾ ಮುಕ್ತ ರಾಜ್ಯಕ್ಕೆ ಶ್ರಮಿಸಬೇಕು ಎಂದು ನಾಡಿ ಜನತೆಯಲ್ಲಿ ಸಿಎಂ ಬಿಎಸ್‌ವೈ ಮನವಿ ಮಾಡಿದರು.

ನಟ ಪುನೀತ್‌ರಾಜ್‌ ಕುಮಾರ್‌ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply