ಬೆಂಗಳೂರು: ಕಳೆದ ಮೂರು ದಿನದಿಂದ ಖಾಸಗಿ ಕ್ಲಿನಿಕ್ಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಖಾಸಗಿ ಕ್ಲಿನಿಕ್ ವೈದ್ಯ ಮತ್ತು ನರ್ಸ್ಅನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ನಗರದ ಮಂಗಮ್ಮನಪಾಳ್ಯದ ನಿವಾಸಿ ಮದೀನನಗರದ ಖಾಸಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತ ಕೂಲಿ ಕಾರ್ಮಿಕನಾಗಿದ್ದು, ಸೈಕಲ್ನಲ್ಲಿ ಹಲವೆಡೆ ಸುತ್ತಾಡಿದ್ದಾನೆ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದ ಜ್ವರ ಬಂದು ಕ್ಲಿನಿಕ್ಗೆ ಹೋಗಿದ್ದ ಆದರೂ ಜ್ವರ ನಿಯಂತ್ರಣಕ್ಕೆ ಬಾರದಿದ್ದಕ್ಕೆ ಮತ್ತೊಂದು ಕ್ಲಿನಿಕ್ಗೂ ಹೋಗಿ ಚಿಕಿತ್ಸೆ ಪಡೆದಿದ್ದಾನೆ ಎಂದು ಹೇಳಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸದ್ಯ ಆತನ ಗಂಟಲು ದ್ರವ ಮತ್ತು ರಕ್ತವನ್ನು ಪರೀಕ್ಷೆ ಕಳುಹಿಸಲಾಗಿದ್ದು, ಈಗಿನ ಮಾಹಿತಿ ಪ್ರಕಾರ ಆತನಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಆತನ ಮನೆಯಲ್ಲಿ ಮತ್ತೊಬ್ಬರಿಗೂ ಕೊರೊನಾ ಪಾಸಿಟಿವ್ ಇರುವುದಾಗಿ ಹೇಳಲಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail