ಬೆಂಗಳೂರು: ನಗರದಲ್ಲಿ ಪ್ರವಾಹದಿಂದಾಗುವ ಹಾನಿಯನ್ನು ತಗ್ಗಿಸಲು ಜನಸಾಮಾನ್ಯರಿಗೆ ಅಗತ್ಯ ಮಾಹಿತಿ ಹಾಗೂ ಮುನ್ನೆಚ್ಚರಿಕೆ ನೀಡಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ(IISc) ಜಂಟಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ “ಬೆಂಗಳೂರು ಮೇಘ ಸಂದೇಶ” ಮೊಬೈಲ್ ಆಪ್ ಮತ್ತು “ವರುಣ ಮಿತ್ರ” ಅಂತರ್ಜಾಲ ತಾಣವನ್ನು ಕಂದಾಯ ಸಚಿವ ಆರ್.ಅಶೋಕ್ ಇಂದು ಬಿಡುಗಡೆ ಮಾಡಿದರು.
ಯಲಹಂಕದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಲೋಕಾರ್ಪಣೆ ಮಾಡಿದ ಅಶೋಕ್ ಮಾತನಾಡಿ, ಮಳೆಯ ಬಗ್ಗೆ ನಾಗರಿಕರಿಗೆ ಅಗತ್ಯ ಮಾಹಿತಿಯನ್ನು ನೀಡುವ ಉದ್ದೇಶದಿಂದ “ಬೆಂಗಳೂರು ಮೇಘ ಸಂದೇಶ” ಮೊಬೈಲ್ ಆಪ್ ಬಿಡುಗಡೆ ಗೊಳಿಸಲಾಗಿದೆ. ಅಪ್ಲಿಕೇಷನ್‌ನಲ್ಲಿ ಪ್ರಸ್ತುತ ಹವಾಮಾನ, ಮುನ್ಸೂಚನೆ, ನಕ್ಷೆಗಳು, ಮಳೆ, ಗಾಳಿ ವೇಗ ಎಷ್ಟು, ಸಿಡಿಲು-ಗುಡುಗು ಸಹಿತ ಮಳೆ, ಹವಾಮಾನ ಮುನ್ಸೂಚನೆ, ಸುರಕ್ಷಿತ ಸಂಚಾರ ಮಾರ್ಗಗಳ ಕುರಿತು ಮಾಹಿತಿ ಸಿಗಲಿದ್ದು, ಸಾರ್ವಜನಿಕರಿಗೆ ಈ ಆಪ್ ಹೆಚ್ಚು ಅನುಕೂಲಕಾರಿಯಾಗಿದ್ದು, ಲಿಂಕ್‌ಗೆ ಭೇಟಿ ನೀಡಿ https://play.google.com/store/apps/details?id=com.moserptech.meghasandesha&hl=en ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ(KSNDMC) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (IISc) ವತಿಯಿಂದ “ವರುಣಮಿತ್ರ” ಅಂತರ್ಜಾಲ ತಾಣವನ್ನು ಹೊರತಂದಿದ್ದು, ಮಳೆಗಾಲದ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗುವ ಪ್ರವಾಹವನ್ನು ತಡೆಲು ವಲಯವಾರು ನಕ್ಷೆ, ಮಳೆ ಮುನ್ಸೂಚನೆ, ಪ್ರವಾಹ ಮುನ್ಸೂಚನೆ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪಡೆಯಬಹುದಾಗಿದೆ. ಅಗತ್ಯ ಮಾಹಿತಿಗಾಗಿ ಅಂತರ್ಜಾಲ ತಾಣ ( http://varunamitra.karnataka.gov.in ) ಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಪಾಲಿಕೆ ಆಯುಕ್ತರು ಬಿ.ಎಚ್.ಅನಿಲ್ ಕುಮಾರ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಆಯುಕ್ತರು ಶ್ರೀ ಮನೋಜ್ ರಾಜನ್, KSNDMC ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ, ಪಾಲಿಕೆ ವಿಶೇಷ ಆಯುಕ್ತರಾದ ಡಿ.ರಂದೀಪ್, ಅನ್ಬುಕುಮಾರ್, ಡಾ. ರವಿಕುಮಾರ್ ಸುರಪುರ, ಮಂಜುನಾಥ್, ವಲಯ ಜಂಟಿ ಆಯುಕ್ತರು, ವಲಯ ಮುಖ್ಯ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail