ಬೆಂಗಳೂರು: ಅಂದುಕೊಂಡಂತೆ ಇಂದು ಮುಂಗಾರು ಮಳೆ ಕೇರಳ ಪ್ರವೇಶಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಬೀರಿದೆ.
ದೇಶದ ಮಳೆ ಪ್ರಮಾಣದಲ್ಲಿ ಶೇ.75 ಭಾಗವನ್ನು ಆಕ್ರಮಿಸಿಕೊಳ್ಳುವ ಮುಂಗಾರು ಕೇರಳದಲ್ಲಿ ಇಂದು ಕಾಣಿಸಿಕೊಂಡಿದ್ದು ದೇಶದ ಮಟ್ಟಿಗೆ ಉತ್ತಮ ಮುನ್ಸೂಚನೆ ನೀಡಿದಂತ್ತಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ದೇಶದ ಕೃಷಿ ಚಟುವಟಿಕೆ ಮುಂಗಾರು ಆಗಮದ ಮೇಲೆ ಅವಲಂಬಿತವಾಗಿರುವುದರಿಂದ ಅಂದುಕೊಂಡ ಸಮಯಕ್ಕೆ ಮುಂಗಾರು ಮಾರುತ ಬೀಸಲಾರಂಭಿಸಿದೆ.
ಈ ವರ್ಷದಲ್ಲಿ ಹೆಚ್ಚು ಆರ್ಭಟವೂ ಇಲ್ಲದೆ ಮತ್ತೆ ಮಂದಗತಿಯಲ್ಲೂ ಸಾಗದೇ ಸಾಧಾರಣವಾಗಿಯೇ ಇರಲಿದೆ. ಇದು ಸದ್ಯದ ಮಟ್ಟಿಗೆ ಉತ್ತಮ ಮುನ್ಸೂಚನೆ ಎಂದು ಹವಾಮಾನ ಇಲಾಖೆ ಈ ಹೀದೆಯೇ ಹೇಳಿತ್ತು.
ಈಗಾಗಲೇ ರಾಜ್ಯದಲ್ಲಿ ಮೆಳೆ ಬರುತ್ತಿದ್ದು, ಜತೆಗೆ ಇಂದು ಮುಂಗಾರು ಮಾರುತಗಳು ಪ್ರವೇಶ ಮಾಡಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಖುಷಿಯಿಂದಲೇ ಆರಂಭಿಸಬಹುದು ಎಂಬ ಸೂಚನೆಯನ್ನು ನೀಡಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail