ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ನಿಷೇಧಾಜ್ಞೆ ಹೇರಲಾಗಿದೆ. ಆದರೂ ಅದನ್ನು ಲೆಕ್ಕಿಸದೆ ಹೊರಬರುವವರಿಗೆ ಪೊಲೀಸರು ಲಾಠಿರುಚಿ ತೋರಿಸಿದ್ದಾರೆ.
ರಾಯಚೂರಿನಲ್ಲಿ ಅನಾವಶ್ಯಕವಾಗಿ ಮನೆಯಿಂದ ಹೊರಬಂದು ಓಡಾಡುತ್ತಿದ್ದವರಿಗೆ ಮಫ್ತಿಯಲ್ಲಿದ್ದ ಇಲ್ಲಿನ ಪೊಲೀಸರು ಲಾಠಿರುಚಿ ತೋರಿಸಿದ್ದಾರೆ. ಅದನ್ನು ಕಂಡ ಇನ್ನು ಕೆಲ ವಾಹನ ಸವಾರರು ನಿಂತಲ್ಲೇ ವಾಹನವನ್ನು ತಿರುಗಿಸಿಕೊಂಡು ಪೇರಿಕಿತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಚಿಕ್ಕಬಳ್ಳಾಪುರದಲ್ಲಿ ವಾಹನಗಳನ್ನು ಸೀಜ್ ಮಾಡಲಾಗಿದೆ. ಈ ಮೂಲಕ ಪೊಲೀಸರು ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರಿಗೆ ಬಿಸಿಮುಟ್ಟಿಸಿದ್ದಾರೆ. ಮೈಸೂರಿನಲ್ಲಿ ಬೆಳಗ್ಗೆ ಸೈಕಲ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆಯು ನಡೆದಿದೆ. ಆತ ಮಾಸ್ಕ್ ಕೂಡ ಹಾಕದೆ ಹೋಗುತ್ತಿದ್ದನ್ನು ಪ್ರಶ್ನಿಸಿದ ಪೊಲೀಸರ ಜತೆ ಗಲಾಟೆಗೆ ಇಳಿದಿದ್ದ.
ಇನ್ನು ಗದಗದಲ್ಲಿ ಮಟನ್ ಕೊಳ್ಳಲು ಜನರು ಮುಗಿಬಿದ್ದಿದ್ದರಿಂದ ಸಾಮಾಜಿಕ ಅಂರರವೇ ಅಲ್ಲಿ ಇಲ್ಲದಂತ್ತಾಗಿತ್ತು. ಆದರೂ ಅದನ್ನು ಕೇಳಲು ಯಾರು ಮುಂದಾಗಲಿಲ್ಲ ಬದಲಿಗೆ ಮಾಂಸ ಕೊಳ್ಳುವ ಆತುರವನ್ನು ತೋರಿಸುತ್ತಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಬೆಂಗಳೂರಿನ ಶಿವಾಜಿ ನಗರದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಮತ್ತೊಂದೆಡೆ ಮೇಲು ಸೇತುವೆ ಮೇಲೆ ಜಾಗಿಂಗ್ ಮಾಡುತ್ತಿದ್ದರು. ಪಾರ್ಕ್ಗಳಲ್ಲೂ ಪ್ರವೇಶ ಇಲ್ಲದ್ದರಿಂದ ಕೆಲವರು ರಸ್ತೆಯೇ ಖಾಲಿಖಾಲಿಯಾಗಿ ಇದೆಯಲ್ಲ ಎಂದು ರಸ್ತೆಯನ್ನೇ ಪಾರ್ಕ್ ರೀತಿ ಬಳಸಿಕೊಂಡರು.
ಪೊಲೀಸಪ್ಪ ತಾವೇ ಹಾಕಿರುವ ಬ್ಯಾರಿಕೇಡ್ ಸರಿಸಿ ತನ್ನ ಬೈಕ್ ತೆಗೆದುಕೊಂಡು ಹೋದ ಘಟನೆಯೂ ನಡೆಯಿತು. ಅದನ್ನು ಕೇಳಿದ್ದಕ್ಕೆ ನನಗೆ ಮುಖ್ಯವಾದ ಕೆಲಸವಿದೆ ಹಾಗಾಗಿ ಹೋಗುತ್ತಿದ್ದೇನೆ ಎಂದು ಹೇಳಿದರು. ಇನ್ನೊಂದೆಡೆ ಬೈಕ್ ಸಾವಾರರು ಬ್ಯಾರಿಕೇಡ್ಗಳನ್ನು ಸರಿಸಿ ಹೋಗುತ್ತಿದ್ದ ದೃಶ್ಯವು ಕಂಡುಬಂತು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail