ಬೆಂಗಳೂರು: ಮಹಾರಾಷ್ಟ್ರದ ನಂಜು ಕರ್ನಾಟಕವನ್ನು ದಿನೇದಿನೆ ಬಾಧಿಸುತ್ತಿದೆ. ನಾಲ್ಕು ದಿನಗಳಿಂದಲೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ದಾಟುತ್ತಿದ್ದು ಇಂದು ಅತಿಹೆಚ್ಚು ಅದಂರೆ 196 ಪ್ರಕರಣಗಳು ಮತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ.
196 ಪ್ರಕರಣದಲ್ಲಿ 184 ಪ್ರರಕಣಗಳು ಮುಂಬೈನಿಂದ ವಲಸೆ ಬಂದಿರುವ ಕಾರ್ಮಿಕರಲ್ಲಿ ಪತ್ತೆಯಾಗಿದೆ. ಇಂದು ಪತ್ತೆಯಾಗಿರುವುದರಲ್ಲಿ ಅತಿಹೆಚ್ಚು ಯಾದಗಿರಿ ಜಿಲ್ಲೆಯಲ್ಲಿ 72, ರಾಯಚೂರು 38, ಮಂಡ್ಯ 28, ಚಿಕ್ಕಬಳ್ಳಾಪುರ 20, ಗದಗ 15, ಬೆಂಗಳೂರು 4, ಕೋಲಾರ 2, ದಕ್ಷಿಣ ಕನ್ನಡ 2, ಉತ್ತರ ಕನ್ನಡ 3, ಉಡುಪಿ, ಧಾರವಾಡ, ಬೆಳಗಾವಿ, ಕಲಬುರಗಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ರಾಜ್ಯದಲ್ಲಿ ಒಟ್ಟಾರೆ 1939 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ 598 ಮಂದಿ ಗುಣಮುಖರಾಗಿದ್ದಾರೆ. 1297 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಮಹಾಮಾರಿಗೆ 42 ಮಂದಿ ಬಲಿಯಾಗಿದ್ದಾರೆ.
ದೇಶದಲ್ಲಿ 125,149 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 125,149 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 3,728ಮಂದಿ ಮೃತಪಟ್ಟಿದ್ದಾರೆ. 51,824 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 5,318,050 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 340,230 ಜನರು ಮೃತಪಟ್ಟಿದ್ದಾರೆ2,169,139 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail