NEWSಶಿಕ್ಷಣ-

ಅನುಮತಿ ಇಲ್ಲದೇ ಶಾಲೆ ಪ್ರಾರಂಭಿಸಿದರೆ ಕೇಸು ದಾಖಲು

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಇಲಾಖಾ ಅನುಮತಿ ಇಲ್ಲದೇ ಆಡಳಿತ ಮಂಡಳಿ 2020-21 ನೇ ಸಾಲಿಗೆ ಹೊಸ ಶಾಲೆ ಪ್ರಾರಂಭಿಸುವುದಾಗಲಿ ಇಲ್ಲವೇ ಪ್ರಚಾರ ಮಾಡುವುದಾಗಲಿ ಅಥವಾ 1 ರಿಂದ 5ನೇ ತರಗತಿ ಅನುಮತಿ ಪಡೆದು ಇಲಾಖೆ ಅನುಮತಿ ಇಲ್ಲದೇ 6 ರಿಂದ 8ನೇ ವರೆಗೆ ಹೆಚ್ಚಿನ ತರಗತಿ ಪ್ರಾರಂಭಿಸುವುದಾಗಲಿ ಮಾಡಿದ್ದಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆಯೆಂದು ಪರಿಗಣಿಸಿ ಕರ್ನಾಟಕ  ಶಿಕ್ಷಣ ಕಾಯಿದೆ-1983 ರಂತೆ ಕ್ರಿಮಿನಲ್ ದಾವೆ ಹೂಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

2020-21ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ಹೊಸ ಶಾಲೆ ಅನುಮತಿ ಕೋರಿ ಆಡಳಿತ ಮಂಡಳಿ ಈಗಾಗಲೆ ಇಲಾಖೆ ನಿಗದಿ ಪಡಿಸಿರುವುದರ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದು, ಆಡಳಿತ ಮಂಡಳಿ  ಪ್ರಸ್ತಾವನೆ ಸಲ್ಲಿಸಿರುವ ಮಾತ್ರಕ್ಕೆ ಅನುಮತಿ ದೊರೆತಿದೆ  ಎಂದು ಭಾವಿಸಿ ಶಾಲೆ ಪ್ರಾರಂಭಿಸುವುದಾಗಲಿ ಅಥವಾ ದಾಖಲಾತಿ ಮಾಡುವಂತೆ ಕೋರಿ ಪ್ರಚಾರ ಮಾಡುವುದಾಗಲಿ ಮಾಡುವಂತಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ.

ಪೋಷಕರಲ್ಲಿ ಮನವಿ
 ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಖಾಸಗಿ ಶಾಲೆಯಲ್ಲಿ ದಾಖಲಾತಿ ಮಾಡಿಸುವ ಪೂರ್ವದಲ್ಲಿ ಸಂಬಂಧಿಸಿದ ಶಾಲೆಯು ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಪ್ರಸ್ತುತ ಸಾಲಿನವರೆಗೆ ಮಾನ್ಯತೆ ಪಡೆದಿರುವ ಬಗ್ಗೆ ಹಾಗೂ ಶಾಲೆ ಯಾವ ಮಾಧ್ಯಮದಲ್ಲಿ ಅನುಮತಿ ಪಡೆಯಲಾಗಿದೆ ಎಂಬುದರ  ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಮಕ್ಕಳಿಗೆ ದಾಖಲಾತಿ ಮಾಡಿಸಲು ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಸೂಚನಾ ಫಲಕದಲ್ಲಿ ಪ್ರಕಟಿಸಿ
 ಇಲಾಖೆಯಿಂದ ಅನುಮತಿ ಪಡೆದ ಶಿಕ್ಷಣ ಸಂಸ್ಥೆಯವರು ತಮ್ಮ ಶಾಲೆಯ ಅನುಮತಿ ಪತ್ರ, ಮಾನ್ಯತೆ ನವೀಕರಣ ಶಾಲಾ ಶುಲ್ಕದ ವಿವರಗಳನ್ನು ಪೋಷಕರಿಗೆ ಮನವರಿಕೆಯಾಗುವಂತೆ ಕಡ್ಡಾಯವಾಗಿ ಆಯಾ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply