NEWSನಮ್ಮಜಿಲ್ಲೆ

ಅಹಮದಾಬಾದ್‌ನಿಂದ ಗದಗಕ್ಕೆ ಬಂದ ನಾಲ್ವರಿಗೆ ಕೊರೊನಾ ಪಾಸಿಟಿವ್‌

ವಿಜಯಪಥ ಸಮಗ್ರ ಸುದ್ದಿ

ಗದಗ: ಬೆಟಗೇರಿಯ 9 ಮಂದಿ ಮೇ 12 ರಂದು ಗುಜರಾತಿನ ಅಹಮದಾಬಾದ್‌ನಿಂದ  ಜಿಲ್ಲೆಗೆ  ಆಗಮಿಸಿದ್ದ 9 ಜನರ ಪೈಕಿ 4 ಜನರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಅಹಮದಾಬಾದ್‌ನಿಂದ ಬಂದ ತಕ್ಷಣವೇ ಅವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಿ ನಿಗಾದಲ್ಲಿರಿಸಿ ಅವರ ಗಂಟಲು ದ್ರವ್ಯವನ್ನು ಕೊವಿಡ್-19 ಸೋಂಕು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅವರಲ್ಲಿ ಪಿ- 979, 62 ವಯಸ್ಸಿನ ಪುರುಷ,  ಪಿ-971, 47  ವಯಸ್ಸಿನ ಪುರುಷ, ಪಿ- 972, 44 ವಯಸ್ಸಿನ ಪುರುಷ ಹಾಗೂ ಪಿ-973, 28 ವಯಸ್ಸಿನ  ಪುರುಷನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಸದ್ಯ ಅವರನ್ನು ಈಗ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು  ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಗುಜರಾತಿನಿಂದ ಆಗಮಿಸಿದ್ದ 16ರ ಪೈಕಿ ಒರ್ವರಿಗೆ ಪಿ-913,  ಪಿ-514 ಪ್ರಕರಣದ ದ್ವಿತೀಯ ಸಂರ್ಪಕದ ಸೋಂಕು ದೃಢಪಟ್ಟ ಪಿ-912, ಪಿ-913 ಸೇರಿದಂತೆ ಒಟ್ಟು 7 ಸಕ್ರಿಯ ಪ್ರಕರಣಗಳಿಗೆ ಗದಗ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ  ಚಿಕಿತ್ಸೆ  ನೀಡಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಪಾಸಿಟಿವ್ ಹೊಂದಿರುವ 12 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಒಬ್ಬರು ಮೃತಪಟ್ಟಿದ್ದು  ನಾಲ್ವರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply