ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹತ್ವದ ಬದಲಾವಣೆಯೊಂದನ್ನು ಮಾಡಿದ್ದು, ಇದುವರೆಗೂ 18004251663 ನಂಬರ್‌ಗೆ ಪ್ರಯಾಣಿಕರು ಕರೆ ಮಾಡಿ ದೂರು ಕೊಡಬಹುದಿತ್ತು. ಆದರೆ ಇನ್ನು ಮುಂದೆ 080-22483777 ಸಂಖ್ಯೆಗೆ ಕರೆ ಮಾಡಬೇಕು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಂಟಿಸಿ ಜನರಿಂದ ದೂರು, ಸಲಹೆಗಳನ್ನು ಪಡೆಯಲು ಈ ಸಹಾಯವಾಣಿಯನ್ನು ಸ್ಥಾಪನೆ ಮಾಡಿದೆ. ಪ್ರಸ್ತುತ ಸಹಾಯವಾಣಿ ಸಂಖ್ಯೆ ಬದಲಾವಣೆ ಆಗಿದ್ದು ಇನ್ನು ಮುಂದೆ ಸಲಹೆ ಸಹ ನೀಡಲು ಈ ಹೊಸ ಸಂಖ್ಯೆ ಬಳಸಬೇಕು ಎಂದು ತಿಳಿಸಿದೆ.
ಉದ್ಯಾನ ನಗರಿ ಬೆಂಗಳೂರಿನ ಬಸ್‌ನಲ್ಲಿ ಸಂಚರಿಸುವ ಜನರಿಗೆ ಅಗತ್ಯ ಮಾಹಿತಿ ಇದಾಗಿದ್ದು, ಪ್ರಯಾಣಿಕರು ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10ರ ತನಕ ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ನಂತರ ಬರುವ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದೆ.
ಬಸ್ ಸಂಚಾರ, ಪಾಸ್‌ಗಳು ಮುಂತಾದ ಮಾಹಿತಿಗಳನ್ನು ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿದೆ. ಬಿಎಂಟಿಸಿ ಬಸ್ ಸೇವೆಯ ಬಗ್ಗೆ ದೂರುಗಳಿದ್ದಲ್ಲಿ ಇದೇ ನಂಬರ್‌ಗೆ ಕರೆ ಮಾಡಿ ನೀಡಬಹುದಾಗಿದೆ. ಬಿಎಂಟಿಸಿಯ ದಿನ, ಮಾಸಿಕ ಪಾಸ್‌ಗಳ ಬಗ್ಗೆ ಮಾಹಿತಿ ಪಡೆಯಲು ಜನರು ನಮ್ಮ ಬಿಎಂಟಿಸಿ ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು ಎಂದು ತಿಳಿಸಿದೆ.