ಬೆಂಗಳೂರು: ವಿಶ್ವ ಮಹಾಮಾರಿ ಕೊರೊನಾ ಇಂದು ರಾಜ್ಯದಲ್ಲಿ ಈವರೆಗೆ ಇದ್ದ ದಾಖಲೆಯನ್ನು ಮುರಿದಿದ್ದು, ಬರೋಬ್ಬರಿ 7178 ಮಂದಿಗೆ ವಕ್ಕರಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 172102 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಮರಣ ಮೃದಂಗವನ್ನು ತೀವ್ರಗೊಳಿಸಿದ್ದು ಇಂದು 93 ಮಂದಿಯನ್ನು ಬಲಿಪಡೆದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3096 ಕ್ಕೆ (ಅನ್ಯ ಕಾರಣಕ್ಕೆ 8ಸೇರಿ) ಏರಿಕೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈ ನಡುವೆ, ಇಂದು ರಾಜ್ಯದಲ್ಲಿ 5006 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 89238 ಕ್ಕೇರಿದಂತಾಗಿದೆ. ಇನ್ನು 79765ಸಕ್ರಿಯ ಪ್ರಕರಣಗಳಿವೆ.
ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 2665 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 72237ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ಇಂದು 18 ಮಂದಿ ಬಲಿಯಾಗಿದ್ದಾರೆ.
#ಕೋವಿಡ್19Report : 08-08-2020.#CovidInKarnataka
ಸಕ್ರಿಯ ಪ್ರಕರಣ: 79765
ಇಂದು ಮೃತಪಟ್ಟವರು: 93
ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ
ಕೊರೋನ ಸೋಂಕಿತ ರೋಗಿಗಳು: 683
ಬೆಂಗಳೂರಿನಲ್ಲಿನ ಸಕ್ರಿಯ ಪ್ರಕರಣ:33726#KarnatakaFightsCorona pic.twitter.com/kfpxX2xdya— DD Chandana News (@DDChandanaNews) August 8, 2020
ಭಾರತ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳ ಕೊರೊನಾ ಸೋಂಕಿತರ ಅಂಕಿ ಅಂಶಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ view by country