ಬೆಂಗಳೂರು: ಕೆಎಸ್ ಆರ್ ಟಿ ಸಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಪಾರ್ಸಲ್ ಮತ್ತು ಕೊರಿಯರ್ ಸೇವೆಯನ್ನು ರಾಜ್ಯ ಹಾಗೂ ಅಂತರರಾಜ್ಯ ಕೆಎಸ್ ಆರ್ ಟಿಸಿಯ ಮಾರ್ಗಗಳಲ್ಲಿ ಪ್ರಾರಂಭಿಸುತ್ತಿದೆ ಎಂದು ಕೆಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.
ಕೆಎಸ್ ಆರ್ ಟಿಸಿಯು ಸದಾ ಪ್ರಯಾಣಿಕರು ನಮ್ಮ ಪ್ರಯಾಣದ ಪಾಲುದಾರರೆಂದು ಭಾವಿಸಿದ್ದು, ನಮ್ಮ ಯಾವುದೇ ಹೊಸ ಬಸ್‌ಗಳ ಸೇರ್ಪಡೆ ಅಥವಾ ಯೋಜನೆಗೆ ಪ್ರಯಾಣಿಕರಿಂದ ಸಲಹೆ , ಅಭಿಪ್ರಾಯಗಳನ್ನು ಪಡೆಯುತ್ತದೆ. ಇದರ ಮುಂದುವರಿದ ಭಾಗವಾಗಿ, ಈ ಪಾರ್ಸಲ್ ಮತ್ತು ಕೊರಿಯರ್ ಸೇವೆಗೆ ” ಬ್ರಾಂಡ್ ಹೆಸರನ್ನು ” ಆಹ್ವಾನಿಸಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ “ಬ್ರಾಂಡ್ ಹೆಸರು ” ಆಯ್ಕೆ ಯಾದ ಓರ್ವ ಪ್ರಯಾಣಿಕರಿಗೆ ಕೆಎಸ್ಆರ್ ಟಿಸಿಯ ಯಾವುದೇ ಮಾದರಿಯ ಬಸ್‌ನಲ್ಲಿ, ತಮ್ಮ ಇಚ್ಚೆಯ ಒಂದು ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು (ಹೋಗಿ/ಬರುವ) ಟಿಕೆಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದಿನಾಂಕ: 15/08/20020 ಸಂಜೆ 5 ಗಂಟಿಯೊಳಗೆ ಸಲ್ಲಿಸಲು ಕೋರಿದೆ.
Twitter: KSRTC_JourneysFacebook: KSRTC.Karnataka
Email: pro@ https://t.co/tL1qc1RSxm
…3— KSRTC (@KSRTC_Journeys) August 12, 2020