NEWSಉದ್ಯೋಗದೇಶ-ವಿದೇಶರಾಜಕೀಯ

ಲಾಕ್‌ಡೌನ್‌ನಲ್ಲಿಉದ್ಯೋಗ ಕಳೆದುಕೊಂಡ 5 ಕೋಟಿ ಜನ

ಕೇಂದ್ರ ಸರ್ಕಾರದ ವಿರುದ್ಧ ಕೆಪಿಎಂಸಿ ಪ್ರಧಾನ ಕಾರ್ಯದರ್ಶಿ  ಗಾಯತ್ರಿ ಪತ್ತಾರ್ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಲಾಕ್ ಡೌನ್ ಆದ ಮೊದಲ ತಿಂಗಳಲ್ಲಿ 5 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣಬ್ ಸೇನ್ ಅಂದಾಜಿಸಿದ್ದಾರೆ ಎಂದು ಕೆಪಿಎಂಸಿ ಪ್ರಧಾನ ಕಾರ್ಯದರ್ಶಿ  ಗಾಯತ್ರಿ ಪತ್ತಾರ್  ತಿಳಿಸಿದ್ದಾರೆ.

ಲಾಕ್ ಡೌನ್ ಅವಧಿಯ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡಿದ್ದು,  ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯ ಯುವ ಕಾಂಗ್ರೆಸ್‌ ಘಟಕದ ಮೂಲಕ ಟ್ವೀಟ್‌ ಮಾಡಿ ಆಗ್ರಹಿಸಿದ್ದಾರೆ.

ಬಿಜೆಪಿ ಯೋಧರ ಹೆಸರಲ್ಲಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಮೂಲಭೂತ ಸೌಕರ್ಯಗಳನ್ನು, ಉದ್ಯೋಗವನ್ನು ಹೆಚ್ಚಿಸುವ ಕಡೆಗೆ ಗಮನ ನೀಡಬೇಕು. ಭಾಷಣಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದ್ದಾರೆ.

ದೇಶಿ ಟೆಲಿಕಾಂ ಬಿ.ಎಸ್.ಎನ್.ಎಲ್ ನ ಕೇಂದ್ರ ಸರ್ಕಾರ ಅದರಲ್ಲೂ ಮೋದಿ ಖುದ್ದಾಗಿ ಹಳ್ಳ ಹಿಡಿಸಿ 54000 ಉದ್ಯೋಗಿಗಳನ್ನ ಮನೆಗೆ ಕಳಿಸಿದ್ದಾರೆ. ಮೋದಿ ಸರ್ಕಾರ ಜನರ ಉದ್ಯೋಗ ಕಿತ್ತುಕೊಂಡಿದೆ ಎಂದು ದೂರಿದ್ದಾರೆ.

ಭ್ರಷ್ಟಾಚಾರ, ಸುಳ್ಳು, ಕೋಮುವಾದ, ದುಂದುವೆಚ್ಚದಲ್ಲಿ ತೊಡಗಿಕೊಂಡಿರುವ ಬಿಜೆಪಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಉಳಿಸುವತ್ತ ಗಮನ ನೀಡಿ ಉತ್ತೇಜಕಗಳನ್ನು ನೀಡಿ ಕಾರ್ಮಿಕರ ಉದ್ಯೋಗ ಉಳಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ದೇಶದ ನಿಜವಾದ ಸಮಸ್ಯೆಗಳಮನ್ನು ವಿಪಕ್ಷ ಜನತೆಯ ಮುಂದಿಟ್ಟ ತಕ್ಷಣ ಬಿಜೆಪಿ ಜನರ ಗಮನ ಬೇರತ್ತ ಸೆಳೆಯಲು ಆರ್ ಎಸ್ ಎಸ್ ಅಜೆಂಡಾಗಳನ್ನು ಬಳಸಿಕೊಳ್ಳುತ್ತದೆ. ಅಲ್ಲಿನ ದೇಶದ ಜನರ ಸಮಸ್ಯೆಗಳು ಹಾಗೆ ಉಳಿಯುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.

ವಲಸೆ ಕೂಲಿ ಕಾರ್ಮಿಕರಿಗೆ ಕಾಂಗ್ರೆಸ್ ತಂದ ನರೇಗಾ ಯೋಜನೆ ಕೂಲಿಯನ್ನು ಒದಗಿಸಿತೆ ಹೊರತು ಬಿಜೆಪಿಯ ಯಾವ ಯೋಜನೆಯು ಜನರ ಸಂಕಷ್ಟದ ಸಮಯಕ್ಕೆ ಆಗಲಿಲ್ಲ. ಈಗಲಾದರೂ ಬಿಜೆಪಿ ದೇಶದ ಭವಿಷ್ಯದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲಿ. ಭಾಷಣದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.

ನಿರುದ್ಯೋಗವನ್ನು ತಿಳಿಸುವ ವಿವಿಧ ಕಾಲಮಾನದ ಕಾರ್ಮಿಕ ಶಕ್ತಿಯ ಸಮೀಕ್ಷೆ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ವರದಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿತ್ತು. ಇದರಿಂದ ಇಬ್ಬರು ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಬಿಜೆಪಿ ಅಂಕಿ-ಅಂಶ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಮೋದಿ ಸರ್ಕಾರ ಹಣ ಅಪಮೌಲ್ಯೀಕರಣದಿಂದ ನಿರುದ್ಯೋಗ ಸೃಷ್ಟಿಸುವ ಕೆಲಸ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುಪಿಎ ಅಧಿಕಾರದಲ್ಲಿದ್ದಾಗ ನಿರುದ್ಯೋಗ ದರ ಕೇವಲ ಶೇ.2.2ರಷ್ಟು ಇತ್ತು ಆದರೆ ಬಿಜೆಪಿ ಅವಧಿಯಲ್ಲಿ 2017-18 ನೇ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ 6.1 ರಷ್ಟಿತ್ತು ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ವರದಿ ಮಾಡಿದೆ. ಪ್ರಸ್ತುತ ಸನ್ನಿವೇಶ ಬಿಜೆಪಿ ವಿಫಲ ಆಡಳಿತಕ್ಕೆ ಕೈಗನ್ನಡಿ ಎಂದಿದ್ದಾರೆ.

ಡಾ.ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರನ್ನು ಬಿಜೆಪಿ ಮೌನಿ ಪ್ರಧಾನಿ ಎಂದು ಹಂಗಿಸಿದ್ದಷ್ಟೆ ಬಂತು ಹೊರತು ಅವರಿಗಿಂತ ಉತ್ತಮ ಆಡಳಿತ ನೀಡಲು ಎಂದಿಗೂ ಸಾಧ್ಯವಿಲ್ಲ. ಈಗಿನ ಜಿಡಿಪಿ ಮತ್ತು ನಿರುದ್ಯೋಗ ಪ್ರಮಾಣ ಇದಕ್ಕೆ ಉದಾಹರಣೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾದಂತಹ ಯೋಜನೆಗಳು ಮೋದಿಯ ಚುನಾವಣಾ ಭಾಷಣದಲ್ಲಿ ಉಳಿದವೆ ಹೊರತು ಯಾವ ಫಲವನ್ನು ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್