NEWSದೇಶ-ವಿದೇಶ

ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ನೆರವಿಗೆ ಬಂದ ಕೇಂದ್ರ, ರಾಜ್ಯ ಸರ್ಕಾರಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಗರೋತ್ತರ ದೇಶಗಳಲ್ಲಿ ನೆಲೆಸಿ ಬದುಕನ್ನು ಕಟ್ಟಿಕೊಂಡಿರುವ ಅನಿವಾಸಿ ಕನ್ನಡಿಗರು ಕೊರೊನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಆಲಿಸುವ ದೃಷ್ಟಿಯಿಂದ ಮೇ 2 ರಂದು ಅನಿವಾಸಿ ಕನ್ನಡಿಗರೊಂದಿಗೆ ಆನ್‍ಲೈನ್ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ (ಗೃಹ ಕ್ವಾರೆಂಟೈನ್‍ನಿಂದ) ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ ನಡೆಸಿದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಈ ಸಂವಾದ ಕಾರ್ಯಕ್ರಮದಲ್ಲಿ 34 ದೇಶಗಳಲ್ಲಿನ 55 ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕೋವಿಡ್-19 ಹಿನ್ನೆಲೆಯಲ್ಲಿ ಆ ದೇಶದಲ್ಲಿನ ಪರಿಸ್ಥಿತಿಯನ್ನು ಹಂಚಿಕೊಂಡಿದ್ದು ಕೋವಿಡ್-19ರ ಪರಿಣಾಮದಿಂದ ಸಂಕಷ್ಟದಲ್ಲಿರುವವರ ನೆರವಿಗೆ ವಿದೇಶದಲ್ಲಿರುವ ಅಕ್ಷಯ ಪಾತ್ರೆ ಮತ್ತಿತರ ಕನ್ನಡಪರ ಸಂಘಟನೆಗಳು ಆಹಾರಕಿಟ್ ವಿತರಣೆಯಿಂದ ಹಿಡಿದು, ಪ್ರಧಾನ ಮಂತ್ರಿ/ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಸಹಾ ಸಹಾಯ ಮಾಡಿರುವುದನ್ನು ಸಂವಾದದಲ್ಲಿ ಸ್ಮರಿಸಿದ್ದಾರೆ.  ವಿದೇಶದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿರುವವರು ಪ್ರಮುಖವಾಗಿ ಈ ಕೆಳಕಂಡ ವಿಷಯಗಳನ್ನು ಪ್ರಸ್ತಾಪಿಸಿರುತ್ತಾರೆ.

  1. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಅದರಲ್ಲೂ ನಿರ್ದಿಷ್ಟವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಬಹುತೇಕ ಬಡ ಕೂಲಿ ಕಾರ್ಮಿಕರು ಯು.ಎ.ಇ, ಸೌದಿ ಅರೇಬಿಯಾ, ಕುವೈತ್, ಓಮನ್, ಬಹರೈನ್ ಮತ್ತು ಖತಾರ್ ದೇಶಗಳಲ್ಲಿ ಕಟ್ಟಡ ನಿರ್ಮಾಣ, ಧಾರ್ಮಿಕ ಕೇಂದ್ರಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳಲ್ಲಿ ಬಹು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್-19 ದುಷ್ಪರಿಣಾಮದಿಂದ ಬಹುಸಂಖ್ಯೆಯ ಕಾರ್ಮಿಕರು ಕೆಲಸ ಕಳೆದುಕೊಂಡಿರುತ್ತಾರೆ.
    ಪ್ರವಾಸಿ ವೀಸಾದಲ್ಲಿ ಬಂದು ವೀಸಾ ಅವಧಿ ಮುಗಿದವರು, ಹಿರಿಯ ನಾಗರೀಕರು, ಮಹಿಳೆಯರು, ಗರ್ಭಿಣಿಯರು ಸಂಬಳರಹಿತ  ರಜೆಯಲ್ಲಿರುವ ಕಾರ್ಮಿಕರು ಊಟ ವಸತಿಗೆ ಪರದಾಡುತ್ತಿದ್ದು, ದುಬಾರಿ ವೈದ್ಯಕೀಯ ವೆಚ್ಚ ಅನಿವಾಸಿ ಕನ್ನಡಿಗರಲ್ಲಿ ಭಯ ಮತ್ತು ಆತಂಕ ಆತಂಕವನ್ನು ಹೆಚ್ಚು ಮಾಡಿದೆ. ಪ್ರಯಾಣ ನಿರ್ಭಂಧ ಜಾರಿಯಲ್ಲಿರುವುದರಿಂದ ತಮ್ಮ ಪೋಷಕರನ್ನು ಕರೆಸಿಕೊಂಡಿರುವವರಲ್ಲಿ ಹಲವರ ವೀಸಾ ಅವಧಿ ಮುಗಿದಿದೆ. ಆದ್ದರಿಂದ ವೀಸಾ ಅವಧಿಯನ್ನು ಲಾಕ್‍ಡೌನ್ ಅಂತ್ಯಗೊಳ್ಳುವವರೆಗೆ ಹಾಗೂ ಭಾರತೀಯ ವಿದೇಶಾಂಗ ಮಂತ್ರಾಲಯ ಅಂತರರಾಷ್ಟ್ರೀಯ ಸಂಚಾರವನ್ನು ಮುಕ್ತಗೊಳಿಸುವವರೆಗೆ ವಿಸ್ತರಿಸಲು ಸಂಬಂಧಪಟ್ಟ ದೇಶಗಳನ್ನು ಕೋರುವಂತೆ ಹಾಗೂ ಸ್ವದೇಶಕ್ಕೆ ಮರಳಲು ಅನಿವಾಸಿ ಕನ್ನಡಿಗರಿಗೆ ಕಡಿಮೆದರದಲ್ಲಿ ಪ್ರಯಾಣ ವೆಚ್ಚ ನಿಗಧಿಗೊಳಿಸುವಂತೆ  ಕೋರಿರುತ್ತಾರೆ.
  2. ಯುರೋಪಿಯನ್ ಒಕ್ಕೂಟ, ಆಸ್ಟ್ರೇಲಿಯಾ, ಆಫ್ರಿಕಾ, ಇಂಗ್ಲೆಂಡ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕೋವಿಡ್-19ರಿಂದ ಸಂಕಷ್ಟಕ್ಕೀಡಾಗಿದ್ದು, ಬಹಳಷ್ಟು ಜನರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಉದ್ಯೋಗದಲ್ಲಿರುವ ತಮ್ಮ ಮಕ್ಕಳ ಮನೆಗೆ ತೆರಳಿರುವ  ಪೋಷಕರು, ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಹಿರಿಯ ನಾಗರೀಕರು ಸ್ವದೇಶಕ್ಕೆ ಮರಳುವ ದಾವಂತದಲ್ಲಿದ್ದು, ತಮ್ಮ ಮಕ್ಕಳಿಗೆ ಕರ್ನಾಟಕದಲ್ಲಿಯೇ ವ್ಯಾಸಂಗ ಮುಂದುವರಿಸಲು ಹಾಗೂ ಅಲ್ಲಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ವ್ಯವಸ್ಥೆಗೊಳಿಸಲು ಕೋರಿರುತ್ತಾರೆ.
  3. ಧಾರವಾಡ ಜಿಲ್ಲೆಯ ಶಿವರಾಜ್ ಪಾಟೀಲ್‍ರವರು ಲಂಡನಲ್ಲಿಯೇ ಮರಣ ಹೊಂದಿದ್ದು, ಅವರ ಕುಟುಂಬ ಸದಸ್ಯರು ಶವಸಂಸ್ಕಾರಕ್ಕೆ ಮೃತದೇಹವನ್ನು ಭಾರತಕ್ಕೆತರಲು ಪ್ರಯತ್ನಿಸುತ್ತಿದ್ದಾರೆ. ಅವರ ಪತ್ನಿ ಶಿವಲೀಲಾ ಪಾಟೀಲ್ ಮಗ ಶಿವಾಂಗ್ ವಿಮಾನಯಾನದ ಸಮಸ್ಯೆಯಿಂದಾಗಿ ಮೃತದೇಹವು ಶವಾಗಾರದಲ್ಲಿದ್ದು, ಸ್ವದೇಶಕ್ಕೆ ತರಲು ವಿಮಾನಯಾನ ಸೌಲಭ್ಯಕಲ್ಪಿಸುವಂತೆಕೋರಿದ್ದಾರೆ.
  4. ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ವಿದ್ಯಾರ್ಥಿಗಳು ತೊಂದರೆಗೊಳಗಾಗಿರುವ ಬಗ್ಗೆ ಸತೀಶ್ ಎಂಬುವವರು ಮಾತನಾಡಿ ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದ್ದು ಇವರು ಮತ್ತೆ ಹೊಸದಾಗಿ ವೀಸಾ ಮಾಡಿಸುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ. ಹೊಸದಾಗಿ ವೀಸಾ ಮಾಡಿಸುವುದು ವಿದ್ಯಾರ್ಥಿಗಳಿಗೆ ದುಬಾರಿ ವೆಚ್ಚವಾಗುತ್ತದೆ ಇದರಿಂದ ವಿದ್ಯಾಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಹಿಂದೆ ಪಾರ್ಟ್‍ಟೈಮ್ ಕೆಲಸ ನಿರ್ವಹಿಸಿ ಜೀವನ ನಿರ್ವಹಿಸುತ್ತಿದ್ದು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈಗ ಪಡೆದಿರುವ ವೀಸಾವನ್ನೇ ಶೈಕ್ಷಣಿಕ ಅವಧಿ ಮುಗಿಯುವವರೆಗೆ ವಿಸ್ತರಿಸುವಂತೆ ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿರುತ್ತಾರೆ.
  5. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸ್ವದೇಶಕ್ಕೆ ಮರಳಲು ಸಾಧ್ಯವಾಗುವಂತೆ ಭಾರತೀಯ ರಾಯಭಾರಿ ಕಛೇರಿಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ಕಡಿಮೆ ಸಂಖ್ಯೆಯ ಅನಿವಾಸಿ ಕನ್ನಡಿಗರು ನೆಲೆಸಿರುವ ಯುರೋಪಿಯನ್ ದೇಶಗಳಾದ ಇಟಲಿ, ಫ್ರಾನ್ಸ್, ಜರ್ಮನಿ, ಐರ್ಲೆಂಡ್ ಮುಂತಾದ ದೇಶಗಳ ಹಾಗೂ ಆಫ್ರಿಕಾ ದೇಶದ ಕೀನ್ಯಾ, ಉಗಾಂಡಾ, ಥಾಂಝೇನಿಯಾ, ಜಾಂಬಿಯಾ ದೇಶಗಳ ಜನರು ರಾಯಭಾರಿ ಕಛೇರಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರಾರಂಭವಾಗಬೇಕಾಗಿದೆ.  ಆದುದರಿಂದ ಸಮಬಂಧಪಟ್ಟ ರಾಯಭಾರಿ ಕಛೇರಿಗಳಿಗೆ ಸ್ವದೇಶಕ್ಕೆ ಮರಳುವವರ ನೋಂದಣಿ ಪ್ರಾರಂಭಿಸುವಂತೆ ಮನವಿ ಮಾಡಿರುತ್ತಾರೆ. ಸದರಿಯವರಿಗೆ ಈಗಾಗಲೇ ರಾಜ್ಯ ಸರ್ಕಾರ ಕೋವಿಡ್-19 ಸಂಬಂಧ ಪ್ರತ್ಯೇಕ ಜಾಲತಾಣ‘ಸೇವಾಸಿಂಧು’ ಪ್ರಾರಂಭಿಸಿದ್ದು,  ಅದರಲ್ಲಿ ಹೆಸರು ನೋಂದಾಯಿಸಲು ತಿಳಿಸಲಾಗಿದೆ.
    ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ