CrimeNEWSಆರೋಗ್ಯ

ವಿಷಾನಿಲ ಸೋರಿಕೆಯಿಂದ ಎಂಟು ಮಂದಿ ಮೃತ

ವಿಜಯಪಥ ಸಮಗ್ರ ಸುದ್ದಿ

ವಿಶಾಖಪಟ್ಟಣಂ: ವಿಷಾನಿಲ ಸೋರಿಕೆಯಾಗಿ ಇಬ್ಬರು ಮಹಿಳೆಯರು ಮತ್ತು ಒಂದು ಮಗೂ ಸೇರಿದಂತೆ ಎಂಟು ಜನರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ LG ಪಾಲಿಮರ್ಸ್‌ ಕೆಮಿಕಲ್‌ ಪ್ಲ್ಯಾಂಟ್‌ನಲ್ಲಿ ಸಂಭವಿಸಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಗುರುವಾರ ಬೆಳಗಿನ ಜಾವ 2.30ರಲ್ಲಿ ದುರಂತ ಸಂಭವಿಸಿದ್ದು, ವಿಷಾನಿಲ ಸುಮಾರು 3 ಕಿಲೋ ಮೀಟರ್‌ ವ್ಯಾಪ್ತಿವರೆಗೂ ಹರಡಿದ್ದರಿಂದ ಈಗಾಗಲೇ 8 ಮಂದಿ ಅಸುನೀಗಿದ್ದು, ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ರಸ್ತೆಯಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ಹೆಗಲ ಮೇಲೆ ಆಂಬುಲೆನ್ಸ್‌ ಇರುವ ಸ್ಥಳಕ್ಕೆ ಹೊತ್ತೋಯ್ದುಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಹಲವರನ್ನು ಸ್ಥಳಾಂತರ ಮಾಡಲಾಗಿದೆ. ಸಾವಿನ ಪ್ರಮಾಣ ಇನ್ನು ಹೆಚಾಗುವ ಆತಂಕದಲ್ಲಿ ಜನರು ಇದ್ದಾರೆ ಎಂದು ಸ್ಥಳೀಯ ವರದಿಯಿಂದ ತಿಳಿದು ಬಂದಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

Leave a Reply