NEWSನಮ್ಮರಾಜ್ಯ

ನೀರಿನಲ್ಲಿ ಮುಳುಗಿ ಮೃತಪಟ್ಟ ಮಂಡ್ಯದ 7 ಮಂದಿಗೆ ಸಿಎಂ ನಿಧಿಯಿಂದ ಪರಿಹಾರ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಜಿಲ್ಲೆಯಲ್ಲಿ ಮೂರು ದಿನದ ಹಿಂದೆ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಲಸಮಾಧಿಯಾದ 7 ಮಂದಿಯ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 22 ಲಕ್ಷ ರೂ. ಪರಿಹಾರವನ್ನು ಸಿಎಂ ಬಿ.ಎಸ್‌.ಯಡಿಯೂರಪ್ಪ ಕೊಟ್ಟಿದ್ದಾರೆ.

ಜೂನ್ 14 ರಂದು ನಾಗಮಂಗಲ ತಾಲೂಕು ಬೀರನಹಳ್ಳಿಯ ಗೀತಾ, ಸವಿತಾ ಹಾಗೂ  ಸೌಮ್ಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಶೀಘ್ರದಲ್ಲೇ ವಿತರಿಸಲು ಸೂಚನೆ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಇದೇ ತಾಲೂಕಿನ ಚೋಳಸಂದ್ರದ ರಶ್ಮಿ ಮತ್ತು ಇಂಚರಾ, ಇನ್ನೊಂದು ಪ್ರಕರಣದಲ್ಲಿ ಕೆ ಆರ್ ಪೇಟೆ ತಾಲೂಕಿನ ಹುಳಿ ಗಂಗನಹಳ್ಳಿಯ ಮಾಸ್ಟರ್ ಅಭಿಷೇಕ್ ಮತ್ತು ಆದಿಹಳ್ಳಿಯ ಕುಮಾರ್ ಅವರು ಮೃತಪಟ್ಟಿದ್ದರು.  ಅವರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳನ್ನು ಪರಿಹಾರ ನಿಧಿಯಿಂದ ತುರ್ತಾಗಿ ನೀಡಲು ಅಧಿಕಾರಿಗಳಿಗೆ  ಆದೇಶ ಹೊರಡಿಸಿದ್ದಾರೆ.

Leave a Reply