ಬೆಂಗಳೂರು: ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7 ಲಕ್ಷ ಗಡಿ ದಾಟಿದೆ. ಈ ನಡುವೆ, ರಾಜ್ಯದ ಸಕ್ರಿಯ ಪ್ರಕರಣಗಳು 1.20 ಲಕ್ಷ ತಲುಪಿವೆ. ಕಳೆದ 24 ಗಂಟೆಗಳಲ್ಲಿ 10,517 ಹೊಸ ಪ್ರಕರಣ ಪತ್ತೆಯಾಗಿವೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 7,00,786 ಆಗಿದೆ.
ಕೊರೊನಾದಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 102 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9,910ಕ್ಕೆ (ಅನ್ಯ ಕಾರಣಕ್ಕೆ 19 ಮಂದಿ ಮೃತಪಟ್ಟಿರುವುದು ಸೇರಿ) ಏರಿಕೆಯಾಗಿದೆ.
ಇಂದಿನ 10/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/NbEpCLlZGd pic.twitter.com/f1gsGcwU1s
— K'taka Health Dept (@DHFWKA) October 10, 2020
ಯಾವ ಜಿಲ್ಲೆಯಲ್ಲಿ ಅ.10ರಂದು ಕೊರೊನಾ ಸೋಂಕಿಗೆ ಎಷ್ಟು ಜನ ಒಳಗಾಗಿದ್ದಾಋಎ ಮತ್ತು ಬಲಿಯಾಗಿದ್ದಾರೆ ಎಂದು ಬಾಕ್ಸ್ ಒಳಗೆ ಕೊಟ್ಟಿರುವುದರಲ್ಲಿ ನೋಡಿ…
ಇಂದು ಬೆಂಗಳೂರು ನಗರವೊಂದರಲ್ಲೇ ಅತಿ ಹೆಚ್ಚು ಅಂದರೆ 4,563 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 2,76,934ಕ್ಕೆ ಏರಿಕೆಯಾಗಿದೆ. ಇಂದು 30 ಮಂದಿ ಮೃತಪಟ್ಟಿದ್ದಾರೆ.
ಇಂದು 8,337ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 5,69,947ಕ್ಕೆ ಏರಿಕೆಯಾಗಿದೆ. 1,20,929 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 892ಮಂದಿ ಐಸಿಯುನಲ್ಲಿದ್ದಾರೆ.