ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಮೂರನೇ ಅಲೆ ತಡೆಯಲು ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು, ಪ್ರೊ.ಗಗನ್ ದೀಪ್ ಅವರನ್ನು ವ್ಯಾಕ್ಸಿನ್ ಕಾರ್ಯತಂತ್ರ ಸಲಹೆಗಾರರನ್ನಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಜಂಟಿ ಸುದ್ದಿಗೋಷ್ಠಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ 25ರ ವರೆಗೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮೇ 5 ರಿಂದ ಗರಿಷ್ಠ ಪ್ರಕರಣ ಪತ್ತೆ ಆಗಿತ್ತು. ಈಗ ಎಲ್ಲಾ ಕಡಿಮೆ ಆಗುತ್ತಿದೆ. ಇದು ಕಠಿಣ ಕ್ರಮದಿಂದ ಸಾಧ್ಯ ಆಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 20 ಸಾವಿರ ಇದ್ದ ಕೇಸ್ ಈಗ ಈಗ 16 ಸಾವಿರ ಇದೆ ಬೆಂಗಳೂರು, ಕಲ್ಬುರ್ಗಿ ನಲ್ಲಿ ಪಾಸಿಟಿವ್ ಕಡಿಮೆ ಆಗುತ್ತಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 650 ವೆಂಟಿಲೇಟರ್ ಬೆಡ್ ಸೌಲಭ್ಯ ಇತ್ತು. ಇದನ್ನು ಹೆಚ್ಚಿಗೆ ಮಾಡಲಾಗಿದೆ. 24 ಸಾವಿರ ಆಕ್ಸಿಜನೇಟೆಡ್ ಬೆಡ್ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಇವತ್ತು ಕೋವಿಡ್ ನಿಯಂತ್ರಣ ಕುರಿತು ಏನ್ ಕ್ರಮ ಕೈಗೊಂಡಿದ್ದೇವೆ ಎಂಬುದು ಪ್ರಮುಖ ಉದ್ದೇಶವಾಗಿದೆ. ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಬೆಡ್, ಜೊತೆಗೆ ಆಕ್ಸಿಜನ್ ಉತ್ಪಾದನೆ ಮಾಡಲು ಉತ್ತೇಜನ ನೀಡುತ್ತಿದ್ದೇವೆ. ರಾಜ್ಯದಲ್ಲಿ ಆಮ್ಲಜನಕ ಹೆಚ್ಚಿಗೆ ಮಾಡಲು ಲಿಕ್ವಿಡ್ ಜನರೇಟರ್, ಆಕ್ಸಿಜನ್ ಕಾನ್ಸಂಟ್ರೇಶನ್ ಹೆಚ್ಚಿಗೆ ಮಾಡುವುದು, ರಾಜ್ಯಕ್ಕೆ ಆಮ್ಲಜನಕ 750 ಮೆ.ಟನ್ ದೊರೆಯುತ್ತಿದೆ. 160 ಟನ್ ಒಡಿಶಾ, 150 ವಿಶಾಖಟ್ಟಣಂ ನಿಂದ ಸಿಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 9 ಸಾವಿರಕ್ಕೆ ಹೆಚ್ಚಿಗೆ ಮಾಡಲಾಗಿದೆ. ಆಸ್ಪತ್ರೆಗಳಿಗೆ ಹೆಚ್ಚು ವೆಂಟಿಲೇಟರ್ ಸೇರ್ಪಡೆ ಆಗುತ್ತಿವೆ ಎಂದು ತಿಳಿಸಿದರು.
ಬಹ್ರೈನ್, ಕುವೈತ್ ಗಳಿಂದ ಆಮ್ಲಜನಕ ಬರುತ್ತಿದೆ. ರಾಜ್ಯದಲ್ಲಿ 120 ಆಮ್ಲಜನಕ ಘಟಕ ಸ್ಥಾಪನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ 24 ಹಾಗೂ ಎರಡು ಘಟಕ ವಿದೇಶದವರು ಸ್ಥಾಪನೆ ಮಾಡುತ್ತಿದ್ದಾರೆ. ಸಂಚಾರಿ ಆಕ್ಸಿಜನ್ ವ್ಯವಸ್ಥೆ ಮಾಡುವ, ಆಕ್ಸಿ ಬಸ್ ಬಿಡಲಾಗಿದ್ದು ಬೆಡ್ ಸಿಗದವರಿಗೆ ತುರ್ತು ಆಕ್ಸಿಜನ್ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು 18+ ಲಸಿಕೆ ಪಡೆಯುವುದನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಈ ನಡುವೆ 10 ಸಾವಿರ ಆಕ್ಸಿಜನ್ ಸಿಲಿಂಡರ್ ಬಳಸಲು ನಿರ್ಧಾರ ಮಾಡಿದ್ದೇವೆ. 350 ವಿದೇಶದಿಂದ ತರಿಸಲಾಗಿದೆ. ಇವುಗಳನ್ನು ರಾಜ್ಯದಲ್ಲಿ ಹಂಚಿಕೆ ಮಾಡಲಾಗಿದೆ. ಸಿಎಸ್ ಆರ್ ನಲ್ಲಿ ಇವುಗಳನ್ನು ಹಂಚಿಕೆ ಮಾಡಲಾಗುವುದು. ಕೋವಿಶೀಲ್ಡ್ ಫಲಾನುಭವಿಗಳು ಇದ್ದಾರೆ. ಕೋವಿಶೀಲ್ಡ್ 19 ಲಕ್ಷ ಜನ ಎರಡನೇ ಡೋಸ್ ಪಡೆಯಲು ತಯಾರಿದ್ದಾರೆ ಎಂದರು.
45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ರಾಜ್ಯ 18 ವರ್ಷ ಮೇಲ್ಪಟ್ಟಿದ್ದವರಿಗೆ ನೀಡಲು ಮೂರು ಕೋಟಿ ಡೋಸ್ ಲಸಿಕೆ ಆರ್ಡರ್ ಮಾಡಲಾಗಿದೆ. ಎರಡು ಕೋಟಿ ಡೋಸ್ ಗೆ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದರು.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 24 ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅಲ್ಲದೆ. ಮೇ 10 ರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಮೇ 5 ರಂದು ಗರಿಷ್ಠ 50,112 ಪ್ರಕರಣಗಳು ವರದಿಯಾಗಿದ್ದು, ಕಠಿಣ ಕ್ರಮದಿಂದ 39,900ಕ್ಕೆ ಇಳಿದಿದೆ. ಇದು ಸಮಾಧಾನದ ಸಂಗತಿ ಮತ್ತು ನಿರ್ಬಂಧಗಳಿಂದ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣವಾಗಿದೆ ಎಂದರು.
ಆದರೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ರಾಜ್ಯಾದ ಬಡವರು ಹಾಗೂ ಮಧ್ಯಮ ವರ್ಗದ ಜನರು ಎದುರು ನೋಡುತ್ತಿದ್ದರು. ಆದರೆ, ಅಂತಹ ಯಾವುದೇ ಯೋಜನೆಯನ್ನು ಸಿಎಂ ಘೋಷಿಸದೆ ಹಳೇ ಹೇಳಿಕೆಯನ್ನೇ ಕಿತ್ತೋದ ಟೇಪ್‌ರೆಕಾರ್ಡ್ ತರ ರಿಪೀಟ್ ಮಾಡಿ. ಇದೇ ನಾನು ಮಾಡಿರುವ ಸಾಧನೆ ಎಂದು ಬಿಂಬಿಸಿಕೊಳ್ಳುವ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ ಸರ್ಕಾರ ಹಿರಿಹಿರಿ ಹಿಗ್ಗಿತು