ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾಘಾತವಾಗಿದ್ದು ಒಂದೇದಿನದಲ್ಲಿ 45 ಹೊಸ ಸೋಂಕಿತರು ಮತ್ತೆಯಾಗುವ ಮೂಲಕ ರಾಜ್ಯದ ಜನರಲ್ಲಿ ಆತಂಕ ಹೆಚ್ಚಿಸಿದ್ದಾರೆ.
ಇಂದು ಅತಿ ಹೆಚ್ಚು ಎಂದರೆ ದಾವಣಗೆರೆಯಲ್ಲಿ 14 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಜತೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಐದು ತಿಂಗಳ ಒಂದು ಹೆಣ್ಣು ಮತ್ತು ಮೂರು ವರ್ಷದ ಮತ್ತೊಂದು ಹೆಣ್ಣು ಮಗು ಸೇರಿ 12 ಮಂದಿಗೆ ಸೋಂಕು ತಗುಳಿದೆ. ಇನ್ನು ಬೆಳಗಾವಿಯಲ್ಲಿ 11, ಬೆಂಗಳೂರಿನಲ್ಲಿ ಏಳು ಮತ್ತು ಬಳ್ಳಾರಿಯಲ್ಲಿ ಒಂದು ಕೇಸು ಪತ್ತೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಒಟ್ಟಾರೆ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಎದೆ ಬಡಿತವನ್ನು ಹೆಚ್ಚು ಮಾಡಿವೆ.
ಇದುವರೆಗೆ ಕರ್ನಾಟಕದಲ್ಲಿ 30 ಮಂದಿ ಮೃತಪಟ್ಟಿದ್ದು ಜತೆಗೆ ಇಂದು 45 ಹೊಸ ಕೊರೊನಾ ಪಾಲಿಸಿಟಿವ್ ಸೇರಿ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಅದರಲ್ಲಿ 371 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದರೆ, ಇನ್ನೂ 349 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಯಾವುದೇ ಪಾಸಿಟಿವ್‌ಪ್ರಕರಣ ವರದಿಯಾಗಿಲ್ಲ.
ದೇಶದಲ್ಲಿ 56,409 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 56,409 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 1,890 ಮಂದಿ ಮೃತಪಟ್ಟಿದ್ದಾರೆ. 16,790 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 39,18,678 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 2,70,765 ಜನರು ಮೃತಪಟ್ಟಿದ್ದಾರೆ. 13,44,597 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail