ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಇಂದಿನಿಂದ ಜನವರಿ 2 ರ ವರೆಗೆ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಇರುತ್ತೆ. ರಾತ್ರಿ ಪಾಳಿಯಲ್ಲಿ ಯಾರಿರುತ್ತಾರೋ ಅವರು ಕೋವಿಡ್ ಪ್ರೋಟೋಕಾಲ್ ಅನುಸರಿಸಬೇಕು. ಕೆಲಸ ಮಾಡುವವರ ಬಳಿ ಐಡಿ ಕಾರ್ಡ್ ಕಡ್ಡಾಯವಾಗಿರಬೇಕೆಂದು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂಥ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಜನವರಿ 2ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆ ವೇಳೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಬಿಗಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಬೆಂಗಳೂರಿನ ಜನರಲ್ಲಿ ಮನವಿ ಮಾಡ್ತೀವಿ ಎಲ್ಲರೂ ಸಹಕರಿಸಬೇಕು. ಯಾರೂ ರಾತ್ರಿ 11 ಗಂಟೆ ಮೇಲೆ ಹೊರ ಬರುವಂತಿಲ್ಲ. ತಪಾಸಣೆ ಇರುತ್ತೆ, ಬ್ಯಾರಿಕೇಡ್ ಇರುತ್ತೆ. ರಾತ್ರಿ ಚಟುಚಟಿಕೆಗಳಿಗೆ ಅವಕಾಶ ಇರಲ್ಲ ಎಂದು ತಿಳಿಸಿದರು.
ಆದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ನಿಬಂಧನೆಗಳು ಇಲ್ಲ. ಟ್ಯಾಕ್ಸಿ ವ್ಯವಸ್ಥೆ ಇರುತ್ತೆ. ಸ್ಥಳೀಯ ಪೊಲೀಸರು ನಾಕಾಬಂಧಿ ಹಾಕಲಿದ್ದು, ಪರಿಶೀಲನೆ ನಡೆಸುತ್ತಾರೆ. ಕ್ರಿಸ್ ಮಸ್ಗೆ ವಿನಾಯಿತಿ ಇರಲಿದೆ ಎಂದು ವಿವರಿಸಿದರು.
ಎಲ್ಲಾ ಡಿಸಿಪಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಹೋಟೆಲ್, ಪಬ್, ರೆಸ್ಟೋರೆಂಟ್, ಬಾರ್ ಮಾಲೀಕರಿಗೆ ಸೂಚನೆ ಕೊಟ್ಟಿದ್ದಾರೆ. 11 ಗಂಟೆ ಬಳಿಕ ಯಾರೂ ಇರುವಂತಿಲ್ಲ ಅಂತ ಹೇಳಲಾಗಿದೆ. ಫ್ಲೈ ಓವರ್ಸ್ ಕ್ಲೋಸ್ ಮಾಡ್ತೀವಿ, ಎಲ್ಲೆಲ್ಲಿ ಓಡಾಟ ಹೆಚ್ಚಿರುತ್ತೆ ಅಲ್ಲಿ ನಾಕಾಬಂಧಿ ಹಾಕ್ತೀವಿ. ಇಡೀ ಸಿಟಿ ಸುತ್ತಾಡಿ ಅನಾವಶ್ಯಕವಾಗಿ ಓಡಾಡುವರಿಗೆ ಬಿಸಿ ಮುಟ್ಟಿಸುತ್ತೇವೆ. ಹೊಸ ವರ್ಷ ಆಚರಣೆ ಬಗ್ಗೆ ಸರ್ಕಾರದ ಆದೇಶ ಈಗಾಗಲೇ ಬಂದಿದೆ. ಈಗ ಏನೇ ಇರಲಿ 11 ಗಂಟೆ ಮೇಲೆ ಜನರು ಹೊಸ ವರ್ಷಾಚರಣೆಗೆ ಎಲ್ಲಿಯೂ ಸೇರುವಂತಿಲ್ಲಎಂದು ಹೇಳಿದರು.
ಹೊಸ ವರ್ಷದ ಹಿನ್ನೆಲೆ ಯಾವುದಕ್ಕೂ ಅವಕಾಶ ಇಲ್ಲ. 11 ಗಂಟೆ ಬಳಿಕ ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಬಳಿ ಯಾರೂ ಇರುವಂತಿಲ್ಲ. ಒಂದು ವೇಳೆ ಯಾರಾದರೂ ಕಂಡುಬಂದ್ರೆ, ಅಂತವರನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.