ಬೆಂಗಳೂರು: ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ಘಾಟು ಸ್ಯಾಂಡಲ್ವುಡ್ನಲ್ಲಿ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ.
ನಿನ್ನೆ (ಸೆ.7) ತಾನೆ ನಟಿ ರಾಗಿಣಿಯನ್ನು ಕೋರ್ಟ್ ಗೆ ಹಾಜರು ಪಡಿಸಿದ ಸಿಸಿಬಿ ಪೊಲೀಸರು ಮತ್ತೆ 5 ದಿನ ಕಸ್ಟಡಿ ಪಡೆಯಲು ಯಶಸ್ವಿಯಾಗಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇರಲಿದ್ದಾರೆ.
ಈ ನಡುವೆ ಸಂಜನಾ ಅವರನ್ನು ಪೊಲೀಸರು ಬಂಧಿಸಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆ ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿಯ ಸುತ್ತ ಬಿಗಿ ಭದ್ರತೆಯನ್ನು ಮಾಡಿಕೊಳ್ಳಲಾಗಿದೆ.
ಜತೆಗೆ ಸಂಜನ ಅವರ ಜತೆಗೆ ಹಲವು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಅನುಮಾನ ಪೊಲೀಸರಲ್ಲಿ ವ್ಯಕ್ತವಾಗಿದ್ದು, ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳನ್ನು ಖೆಡ್ಡಕ್ಕೆ ಕೆಡವಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇನ್ನು ಈ ನಮ್ಮ ಬಗ್ಗೆ ಎಲ್ಲಿ ಸಂಜನಾ ಬಾಯಿ ಬಿಡುತ್ತಾರೋ ಎಂಬ ಭಯದಿಂದ ಅಧಿಕಾರಿಗಳ ಎದೆಯಲ್ಲಿ ಢವಢವ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಅಧಿಕಾರಿಗಳು ಯಾರು ಎಂಬುವುದು ಇನ್ನಷ್ಟೆ ಹೊರಬರಬೇಕಿದೆ.
Hora barali bidu