CrimeNEWSಸಿನಿಪಥ

20ಮಂದಿ ಡ್ರಗ್ಸ್ ದಂಧೆಕೋರರ ಹೆಡೆಮುರಿ ಕಟ್ಟಿದ ಸಿಸಿಬಿ

ದಾಳಿ ಮುಂದುವರಿಸಿರುವ ಸಿಸಿಬಿ ಪೊಲೀಸರು I ಎಲೆಕ್ಟ್ರಾನಿಕ್ ಸಿಟಿ ಸೇರಿ ಹಲವೆಡೆ ಇಂದು ರೈಡ್ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ ಎರಡು ದಿನಗಳಿಂದ 20 ಮಂದಿ ಡ್ರಗ್ಸ್ ದಂಧೆಕೋರರನ್ನು ಬೆಂಗಳೂರು ಕ್ರೈಂ ಬ್ರಾಂಚ್‌ ಪೊಲೀಸರು (ಸಿಸಿಬಿ) ಅರೆಸ್ಟ್ ಮಾಡಿದ್ದಾರೆ. ಈಮೂಲಕ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ.
ಇನ್ನು ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, 20 ಡ್ರಗ್ಸ್ ಪೆಡ್ಲರ್ಸ್ ಗಳನ್ನು ಬಂಧಿಸಿದ್ದಾರೆ. ಜತೆಗೆ ಎರಡು ದಿನದಲ್ಲಿಯೇ 25 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ದಿನಗಳಿಂದ ಸಿಸಿಬಿ ಪೊಲೀಸರು ನಗರದ ವಿವಿಧೆಡೆ ದಾಳಿ ಕೂಡ ನಡೆಸಿದ್ದಾರೆ.

ಸ್ಯಾಂಡಲ್ ವುಡ್‌ಗೆ ಡ್ರಗ್ ಪೂರೈಕೆ ಮಾಡಿದ್ದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಸಿಸಿಬಿ, ಇದೀಗ ಪೆಡ್ಲರ್‌ಗಳಿಗೆ ಬಲೆ ಬೀಸಿದೆ. ಇದೇ ವೇಳೆ ಪೆಡ್ಲರ್ ಗಳು ರಾಗಿಣಿ ಆಪ್ತ ರವಿಶಂಕರ್‌ಗೆ ಡ್ರಗ್ಸ್ ಪೂರೈಸಿದ್ದಾಗಿ ಹೇಳಿಕೆ ನೀಡಿದ್ದಾರೆ.

ಗುರುವಾರ ಕೂಡ ದಾಳಿ ಮುಂದುವರಿಸಿರುವ ಸಿಸಿಬಿ ಪೊಲೀಸರು, ಎಲೆಕ್ಟ್ರಾನಿಕ್ ಸಿಟಿ, ಹೂಸೂರು ರೋಡ್, ಪರಪ್ಪನ ಅಗ್ರಹಾರ ದಲ್ಲಿ ರೈಡ್ ಮಾಡಲಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ನಟ ನಟಿಯರು ಜಾಲದಲ್ಲಿ ಸಿಲುಕಿರುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಇನ್ನು ಮಾಹಿತಿಗಳನ್ನು ಕಲೆಹಾಕಿ ಸ್ಯಾಂಡಲ್ ವುಡ್‌ ತಾರಾಬಳಗದ ಕಲೆವರನ್ನು ಬಂಧಿಸಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ. ಇದರಿಂದ ಮಾಫಿಯಾ ಜಾಲದಲ್ಲಿ ಸಿಲುಕಿರುವ ಕಲಾವಿದರ ಎದೆಯಲ್ಲಿ ಢವಢವ ಶುರುವಾಗಿದೆ. ಸರಿಯಾದ ನಿದ್ರೆಯೂ ಬಾರದೆ ರಾತ್ರಿಯಲ್ಲ ಜಾಗರಣೆಯನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲವರು ತಮ್ಮ ಹೆಸರು ಬಾರದಂತೆ ನೋಡಿಕೊಳ್ಳಲು ರಾಜಕೀಯವಾಗಿ ಮತ್ತು ಅಧಿಕಾರಯುತವಾಗಿ ಒಳಸಂಚು ನಡೆಸುವ ಕೆಲ ಕಿರಾತಕರ ಭೇಟಿ ಮಾಡಲು ಮುಂದಾಗುತ್ತಿದ್ದು, ದಂಧೆಯ ನಂಟು ಹೊಂದಿರುವ ಕೆಲ ನಟಿಯರು ತಮ್ಮ ಹೆಸರು ಬಾರದಿರುವಂತೆ ನೋಡಿಕೊಳ್ಳಲು ಏನನ್ನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂಬ ಸ್ಫೋಟಕ ಮಾಹಿತಿಯೂ ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ.

ಇನ್ನು ದಂಧೆ ಮಾಯಾಜಾಲದಲ್ಲಿ ತಿಳಿದೋ ತಿಳಿಯದೋ ಸಿಲುಕಿರುವ  ಸ್ಯಾಂಡಲ್ ವುಡ್‌ ನಟರು ತಮ್ಮ ಹೆಸರು ಬಾರದಂತೆ ನೋಡಿಕೊಳ್ಳುವ ರಾಜಕೀಯ ಮತ್ತು ಅಧಿಕಾರದ ಬಲ ಹೊಂದಿರುವ ಸಮಾಜ ಉದ್ಧಾರ ಮಾಡುವ ಮುಖವಾಡ ಹಾಕಿಕೊಂಡಿರುವ ಕಿರತಕರ ಭೇಟಿ ಮಾಡಿದ್ದು, ಇನ್ನು ಕೆಲವರು ಭೇಟಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ ಸಿಸಿಬಿಯ ದಕ್ಷ ಅಧಿಕಾರಿಗಳು ಈ ದಂಧೆಯನ್ನು ಮಟ್ಟಹಾಕಲು ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ