ಬೆಂಗಳೂರು: ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲೂ ಬಿಬಿಎಂಪಿಗೆ ಮಂತ್ರಿ ಮಾಲ್ ದೊಡ್ಡ ತಲೆ ನೋವಾಗಿದೆ.
ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರ ಬಳಿಕ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.
ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ ಬರೋಬ್ಬರಿ 20,33,34,828 ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಕಟ್ಟಿ ಕಟ್ಟೀ ಅಂತಾ ಮಂತ್ರಿ ಮಾಲ್ ಗೆ ಬಿಬಿಎಂಪಿ ನೋಟಿಸ್ ನೀಡುತ್ತಾ ಬಂದಿದೆ. ಬಾಕಿ ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನೂ ನೀಡಿದೆ. ಆದರೂ ಮಂತ್ರಿ ಮಾಲ್ ಕಡೆಯಿಂದ ಡೋಂಟ್ ಕೇರ್.
ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಂತ್ರಿ ಮಾಲ್ನಿಂದ ಮೊದಲು ಮಾಲ್‌ನ ಪೀಠೋಪಕರಣ ನಂತರ, ಮಾಲ್‌ಗೆ ಬೀಗ ಜಡಿಯಲು ಬಿಬಿಎಂಪಿ ಇದೀಗ ನಿರ್ಧಾರ ಮಾಡಿದೆ.