Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

5ನೇ ದಿನ ಮುಂದುವರಿದ ಸಾರಿಗೆ ನೌಕರರ ಪಾದಯಾತ್ರೆ : ಮಾರ್ಗಮಧ್ಯೆ ಗ್ರಾಮಸ್ಥರ ಸಾಥ್‌ – ಎಳನೀರು, ಊಟದ ವ್ಯವಸ್ಥೆ

ವಿಜಯಪಥ ಸಮಗ್ರ ಸುದ್ದಿ

ತಾವರೇಕೆರೆ : ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ (ನ.29) ಆರಂಭಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಪಾದಯಾತ್ರೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ಮಹಿಳೆಯರೂ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನೌಕರರು ಭಾಗವಹಿಸುತ್ತಿದ್ದಾರೆ.

ಕೇವಲ ಇಬ್ಬರು ನೌಕರರಿಂದ ಆರಂಭವಾದ ಪಾದಯಾತ್ರೆ ವೇಳೆ ವಿಜಯಪಥ ವರದಿ ಮಾಡುವ ಮೂಲಕ ಇಬ್ಬರಿಂದ ಆರಂಭವಾಗಿರುವ ಇದು ಬೆಂಗಳೂರು ತಲುಪುವ ವೇಳೆಗೆ ಮೂರು ಸಾವಿರಕ್ಕೂ ಹೆಚ್ಚಾಗಲಿ ಎಂದು ಆಶಿಸಿತು.  ಜತೆಗೆ ನೌಕರರ ದೃಢ ನಿರ್ಧಾರವನ್ನು ಪ್ರತಿನಿತ್ಯವೂ ಸಾರ್ವಜನಿಕರಿಗೆ, ಮುಖ್ಯವಾಗಿ ಸಾರಿಗೆ ನೌಕರರಿಗೆ ತಲುಪಿಸುವ ಕೆಲಸ ಮಾಡಿತು, ಈಗಲೂ ಮಾಡುತ್ತಿದೆ.

ಇದರ ಪರಿಣಾಮ ಇಂದು (ಡಿ.3) ಸಾರಿಗೆಯ ಹಲವಾರು ನೌಕರರು ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ನಾವು ಒಗ್ಗಟ್ಟಾಗಿದ್ದೇವೆ ಎಂಬುದರ ಧ್ಯೋತಕವಾಗಿ ನಿಲ್ಲುತ್ತಿದ್ದಾರೆ.  ಯಾವುದೇ ತಪ್ಪನ್ನು ಮಾಡದಿದ್ದರೂ ವಜಾದಂತ ಶಿಕ್ಷೆ ಅನುಭವಿಸುತ್ತಿರುವ ಈ ನೌಕರರಿಗೆ ಕಾನೂನಾತ್ಮಕವಾಗಿ ನ್ಯಾಯ ಸಿಗಬೇಕು ಮತ್ತು ಅಸಂವಿಧಾನಾತ್ಮಕವಾಗಿ ವಜಾ ಮಾಡಿರುವ ಅಧಿಕಾರಿಗಳಿಗೆ ಕಾನೂನಿನಡಿ ತಕ್ಕ ಶಿಕ್ಷೆ ಆಗಬೇಕಿದೆ.

ಇನ್ನು ಗುರುವಾರ ರಾತ್ರಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೇಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪುರುಷ ನೌಕರರ ವಾಸ್ತವ್ಯ, ಮಹಿಳಾ ನೌಕರರಿಗೆ ಇದೇ ಗ್ರಾಮದ ಕೆಎಸ್‌ಆರ್‌ಟಿಸಿ ನೌಕರರ ಮನೆಯಲ್ಲಿ ವಾಸ್ತವ್ಯ ಮತ್ತು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು.

ಶುಕ್ರವಾರ ಮುಂಜಾನೆ ಶಿರಾ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಉಪಾಹಾರ ವ್ಯವಸ್ಥೆ ನಾಡಿದ್ದರು. ಅದನ್ನು ಸೇವಿಸಿದ ಬಳಿಕ ಮತ್ತೆ ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಇನ್ನು ಇಂದು ಮಲ್ಲೇಹಳ್ಳಿ ಗ್ರಾಮಸ್ಥರು ನೌಕರರ ಸಮಸ್ಯೆ ಆಲಿಸಿ ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಮಾರ್ಗಮಧ್ಯೆ ಪಾದಯಾತ್ರೆ ಬರುತ್ತಿರುವ ನೌಕರರಿಗೆ ಕಾಫಿ, ತಂಪುಪಾನಿಗಳನ್ನು ಸೇವನೆ ಮಾಡಿ ಎಂದು ಆರ್ಥಿಕವಾಗಿಯೂ ಬೆಂಬಲ ನೀಡುತ್ತಿದ್ದಾರೆ. ಜತೆಗೆ ಎಳೆನೀರಿನ ವ್ಯವಸ್ಥೆಯನ್ನು ಪಾದಯಾತ್ರೆ ನಿರತ ನೌಕರರಿಗೆ ಹಲವು ಗ್ರಾಮಗಳ ಗ್ರಾಮಸ್ಥರು ಮಾಡುವ ಮೂಲಕ ಸರ್ಕಾರ ಮತ್ತು ನಿಗಮಗಳ ನಡೆಯ ವಿರುದ್ಧವೂ ಕಿಡಿಕಾರುತ್ತಿದ್ದಾರೆ.

ನೌಕರರ ನಿಜವಾದ ಸಮಸ್ಯೆ ಏನು? ಅವರಿಗೆ ಎಸಗುತ್ತಿರುವ ಅನ್ಯಾಯವೇನು ಎಂದು ತಿಳಿದುಕೊಳ್ಳುತ್ತಿರುವ ಮಾರ್ಗಮಧ್ಯೆ  ಸಿಗುವ ಗ್ರಾಮಸ್ಥರು ಅಮಾನುಷವಾಗಿ ನಿಗಮಗಳಲ್ಲಿ ನಡೆದುಕೊಂಡಿರುವ ಕೆಲ ನೀಚ ಅಧಿಕಾರಿಗಳ ವಿರುದ್ಧ ತಾವು 1-2ಕಿಮೀ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕಿಡಿಕಾರುತ್ತಿದ್ದಾರೆ.

ಇನ್ನು ಶುಕ್ರವಾರ ಮುಂಜಾನೆ 3ಗಂಟೆ ವೇಳೆಗೆ ಬಿಎಂಟಿಸಿಯ ವಜಾಗೊಂಡ ನೌಕರರು ಪಾದಯಾತ್ರೆಗೆ ಬಂದು ಸೇರಿದ್ದು, ಮುಂದಿನ ದಿನಗಳಲ್ಲಿ ಬರಿ ವಜಾ ಅಮಾನತು, ವರ್ಗಾವಣೆ ಆದವರು ಅಷ್ಟೇ ಅಲ್ಲದೆ ನಾಲ್ಕೂ ನಿಗಮಗಳ ಸಮಸ್ತ ನೌಕರರು, ಕನ್ನಡ ಪರ ಸಂಘಟನೆಗಳು ಈ ಪಾದಯಾತ್ರೆಯನ್ನು ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ ಬೆಂಬಲ ನೀಡಲಿದ್ದಾರೆ.

ಇನ್ನು ಕಳೆದ ನಾಲ್ಕು ದಿನಗಳಲ್ಲಿ ಪಾದಯಾತ್ರೆ ಸಾಗಿ ಬಂದ ಬಗ್ಗೆ: ಸೋಮವಾರ (ನ.29) ಬಳ್ಳಾರಿ ಸಾರಿಗೆ ಕೇಂದ್ರ ಬಸ್‌ ನಿಲ್ದಾಣದಿಂದ ಕೇವಲ ಇಬ್ಬರು ನೌಕರರಿಂದ ಪಾದಯಾತ್ರೆ ಆರಂಭ. ಮಂಗಳವಾರ (ನ.30) ಹಾನಗಲ್‌ಲ್ಲಿ ವಾಸ್ತವ್ಯ. ಮುಂಜಾನೆ 5ಗಂಟೆಗೆ ಹಾನಗಲ್‌ನಿಂದ ಮತ್ತೆ ಪಾದಯಾತ್ರೆ ಆರಂಭ.

ಇದಕ್ಕೂ ಮುನ್ನ ಹಾನಗಲ್‌ನಲ್ಲಿ ರಾತ್ರಿ ಉಳಿದುಕೊಳ್ಳಲು ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವ್ಯವಸ್ಥೆ ಮಾಡಿದ್ದರು. ಜತೆಗೆ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟು ಸತ್ಕರಿಸುವ ಮೂಲಕ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.

ಮಂಗಳವಾರ ಚಳ್ಳಕೆರೆ ತಲುಪಿದ ಪಾದಯಾತ್ರೆ ತಮ್ಮ ಸಹೋದ್ಯೋಗಿಯ ಮನೆಯಲ್ಲಿ ವಾಸ್ತವ್ಯ ಮಾಡಿತು. ಮೂರನೇ ದಿನವಾದ ಬುಧವಾರ ಬೆಳಗ್ಗೆ ತಿಂಡಿ ಮುಗಿಸಿ ಚಳ್ಳಕೆರೆಯಿಂದ ಪಾದಯಾತ್ರೆ ಮತ್ತೆಆರಂಭಿಸಿದರು.

ಬುಧವಾರ (ಡಿ.1) ರಾತ್ರಿ ಹಿರಿಯೂರು ತಲುಪಿದ ಪಾದಯಾತ್ರೆಗೆ ಸಾರಿಗೆ ಮಹಿಳಾ ನೌಕರರೊಬ್ಬರು  ತಮ್ಮ ಸಹೋದ್ಯೋಗಿಗಳು ಉಳಿದುಕೊಳ್ಳಲು ಲಾಡ್ಜ್‌ನಲ್ಲಿ ವ್ಯವಸ್ಥೆ ಮಾಡುವ ಮೂಲಕ ಬೆಂಬಲ ನೀಡಿದರು.

ಗುರುವಾರ (ಡಿ.2) ಬೆಳಗ್ಗೆ ಬಿಎಂಟಿಸಿಯ ನೌಕರರೊಬ್ಬರು ಹಿರಿಯೂರಿನಲ್ಲಿರುವ ತಮ್ಮ ಮನೆಯಲ್ಲಿಯೇ ಉಪಾಹಾರ ವ್ಯವಸ್ಥೆ ಮಾಡಿದ್ದರು. ಮತ್ತೆ 6 ಮಂದಿ ವಜಾಗೊಂಡ ನೌಕರರು ಸೇರಿ ಇತರ ನೌಕರರು ಪಾದಯಾತ್ರೆಗೆ ಸಾಥ್‌ ನೀಡುತ್ತಿದ್ದಾರೆ.

ಇನ್ನೂ ಅಧಿಕಾರಿಗಳಿಗೆ ಹೆದರಿ ಪಾದಯಾತ್ರೆ ಮಾಡಲು ಹಿಂದೆ ಸರಿಯುತ್ತಿದ್ದ ನೌಕರರು ಏನಾದರೂ ಆಗಲಿ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ ಎಂದು ಬರುತ್ತಿರುವುದು ಒಗ್ಗಟ್ಟಿನ ಸಂಕೇತವಾಗಿದೆ.

5 ನೇ ದಿನವಾದ ಇಂದು ದೊಡ್ಡಯ್ಯ, ನಿಂಗಪ್ಪ, ಸೆಲ್ವಂ, ರಾಮು ಮತ್ತು ಮಂಜೇಗೌಡ, ಇಬ್ಬರು ಮಹಿಳಾ ನೌಕರರು ಸೇರಿದಂತೆ 20ಕ್ಕೂ ಹೆಚ್ಚು ನೌಕರರು ಪಾದಯಾತ್ರೆ ಮಾಡುತ್ತಿದ್ದಾರೆ. ಮಾರ್ಗ ಮಧ್ಯೆ ಬರುವ ಗ್ರಾಮಗಳ ಗ್ರಾಮಸ್ಥರು ಈ ನೌಕರರಿಗೆ ಸಾಥ್‌ ನೀಡುತ್ತಿದ್ದಾರೆ.

ಪ್ರತಿ ನಿತ್ಯ 30 ಕಿಮೀ ಸಾಗುತ್ತಿದ್ದ ಪಾದಯಾತ್ರೆ ಇಂದಿನಿಂದ 20 ಕಿಮಿಗೆ ಸೀಮಿತವಾಗುತ್ತಿದೆ. ಕಾರಣ ಬಿಸಿನ ತಾಪ ಹೆಚ್ಚಗುತ್ತಿರುವುದರಿಂದ ಕೆಲ ನೌಕರರ ಪಾದಗಳಲ್ಲಿ ಬೊಬ್ಬೆಬರುತ್ತಿದೆ. ಹೀಗಾಗಿ 20 ಕಿಮೀಗೆ ಸೀಮಿತವಾಗಿದೆ.

ಪಾದಯಾತ್ರೆ ಬರುತ್ತಿರುವ ಮಾರ್ಗ: ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಿಂದ ಆರಂಭವಾದ ಪಾದಯಾತ್ರೆ ಹಾನಗಹಲ್‌- ಚಳ್ಳಕೆರೆ – ಹಿರಿಯೂರು ಬೈಪಾಸ್‌ – ತುಮಕೂರು – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್‌ಗುಟ್ಟಹಳ್ಳಿ ಮಾರ್ಗವಾಗಿ ಸಾಗುತ್ತಿದೆ.

Leave a Reply

error: Content is protected !!
LATEST
ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ