NEWSನಮ್ಮಜಿಲ್ಲೆ

60 ಕೋಟಿ ರೂ. ಮೌಲ್ಯದ 27 ಎಕರೆ ಒತ್ತುವರಿ ತೆರವು: ಜಿಲ್ಲಾಧಿಕಾರಿ ಮಂಜುನಾಥ್

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಂಜುನಾಥ್, ಒಟ್ಟು 60,71,20,000 ರೂ. ಮೌಲ್ಯದ ಒಟ್ಟು 27-25.08 ಎ/ಗು ವಿಸ್ತೀರ್ಣದ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಯಲಹಂಕ ತಾಲೂಕಿನ ಜಾಲ ಹೋಬಳಿಯ ಬಾಗಲೂರು ಗ್ರಾಮದ ಸರ್ವೇ ನಂ.175 ರಲ್ಲಿ 1-20 ಎ/ಗು ವಿಸ್ತೀರ್ಣದ ಸರ್ಕಾರಿ ಖರಾಬು, ಯಲಹಂಕ-03 ಹೋಬಳಿಯ ಅಮೃತಹಳ್ಳಿ ಗ್ರಾಮದ ಸರ್ವೇ ನಂ.115 ರಲ್ಲಿ 0-20 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಹಾಗೂ ಜಾಲ ಹೋಬಳಿಯ ಬಿ.ಕೆ.ಪಾಳ್ಯ ಗ್ರಾಮದ ಸರ್ವೇ ನಂ.7 ರಲ್ಲಿ 4-00 ಎ/ಗು ವಿಸ್ತೀರ್ಣದ ಸರ್ಕಾರಿ ಗೋಮಾಳದ ಜಮೀನು ಸೇರಿದಂತೆ ರೂ. 35,28,20,000 ಮೌಲ್ಯದ ಒಟ್ಟು 6-00 ಎ/ಗು ವಿಸ್ತೀರ್ಣದ ಜಮೀನು ವಶಪಡಿಸಿಕೊಳ್ಳಲಾಯಿತು ಎಂದರು.

ಇನ್ನು ಆನೇಕಲ್ ತಾಲೂಕಿನ ಕಸಬಾ ಹೋಬಳಿಯ ಹೊನ್ನಕಳಸಾಪುರ ಗ್ರಾಮದ ಸರ್ವೇ ನಂ. 33 ರಲ್ಲಿ 3-25 ಎ/ಗು ವಿಸ್ತೀರ್ಣದ, ರಾಚಮಾನಹಳ್ಳಿ ಗ್ರಾಮದ ಸರ್ವೇ ನಂ.12 ರಲ್ಲಿ 0-27 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆಗಳು, ಅತ್ತಿಬೆಲೆ ಹೋಬಳಿಯ ಗಿಡ್ಡೇನಹಳ್ಳೀ ಗ್ರಾಮದ ಸರ್ವೇ ನಂ.21 ರಲ್ಲಿ 0-12.08 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ಜಿಗಣಿ ಹೋಬಳಿಯ ಹುಲ್ಲಹಳ್ಳಿ ಗ್ರಾಮದ ಸರ್ವೇ ನಂ.54ರಲ್ಲಿ 6-20 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಹುಲಿಮಂಗಲ ಗ್ರಾಮದ ಸರ್ವೇ ನಂ. 15,51,56,343 ರಲ್ಲಿ 2-17 ಎ/ಗು ವಿಸ್ತೀರ್ಣದ ಗೋಮಾಳ ಜಮೀನು.

ಸರ್ಜಾಪುರ ಹೋಬಳಿಯ ದೊಡ್ಡ ತಿಮ್ಮಸಂದ್ರ ಗ್ರಾಮದ ಸರ್ವೇ ನಂ.202 ರಲ್ಲಿ 1-18 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಕೊಮ್ಮಸಂದ್ರ ಗ್ರಾಮದ ಸರ್ವೇ ನಂ.94 ರಲ್ಲಿ 0-28 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಚೊಕ್ಕಸಂದ್ರ ಗ್ರಾಮದ ಸರ್ವೇ ನಂ. 20 ರಲ್ಲಿ 1-00 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಹಾಗೂ ಅತ್ತಿಬೆಲೆ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ 0-25 ಎ/ಗು ವಿಸ್ತೀರ್ಣದ ರಾಜಕಾಲುವೆ ಸೇರಿದಂತೆ ರೂ.19,61,00,000 ಮೌಲ್ಯದ ಒಟ್ಟು 17-12.08 ಎ/ಗು ವಿಸ್ತೀರ್ಣದ ಜಮೀನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಸರ್ವೇ ನಂ. 20 ರಲ್ಲಿ 0-02 ಎ/ಗು ವಿಸ್ತೀರ್ಣದ ಒಟ್ಟು ರೂ. 5,00,000 ಮೌಲ್ಯದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು.

ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ತಟ್ಟಗುಪ್ಪೆ ಗ್ರಾಮದ ಸರ್ವೇ ನಂ. 26 ರಲ್ಲಿ 2-02 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೇ ನಂ. 36 ರಲ್ಲಿ 1-17.08 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ.

ತಾವರೆಕೆರೆ ಹೋಬಳಿಯ ಹೊನ್ನಿಗನಹಟ್ಟಿ ಗ್ರಾಮದ ಸರ್ವೇ ನಂ. 11 ರಲ್ಲಿ 0-01 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಚನ್ನೇನಹಳ್ಳಿ ಗ್ರಾಮದ ಸರ್ವೇ ನಂ. 20 ರಲ್ಲಿ 0-30 ಎ/ಗು ವಿಸ್ತೀರ್ಣದ ಗೋಮಾಳ ಜಮೀನು ಸೇರಿದಂತೆ ರೂ. 5,77,00,000 ಮೌಲ್ಯದ ಒಟ್ಟು 4-10.08 ಎ/ಗು ವಿಸ್ತೀರ್ಣದ ಸರ್ಕಾರಿ ಪ್ರದೇಶದ ಒತ್ತುವರಿ ತೆರವುಗೊಳಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ತಾಲೂಕಿನ ತಹಸೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...