NEWSನಮ್ಮಜಿಲ್ಲೆಶಿಕ್ಷಣ-

ಪಾಲಕರ ಕಾನ್ವೆಂಟ್ ಗೀಳಿಗೆ ಮುಚ್ಚಿದ್ದ 84 ವರ್ಷಗಳ ಇತಿಹಾಸವಿದ್ದ ಸರ್ಕಾರಿ ಶಾಲೆ ಮತ್ತೇ ಆರಂಭ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಪಾಲಕರ ಕಾನ್ವೆಂಟ್ ಶಾಲೆಗಳ ಮೇಲಿನ ಪ್ರೀತಿಯಿಂದಾಗಿ ವಿದ್ಯಾರ್ಥಿಗಳಿಲ್ಲದೆ 84 ವರ್ಷಗಳ ಇತಿಹಾಸವಿದ್ದ ಸರ್ಕಾರಿ ಶಾಲೆ ಮಕ್ಕಳಿಲ್ಲದೆ ಮುಚ್ಚಿತ್ತು. ಇನ್ನೇನು ಸರ್ಕಾರಿ ಶಾಲೆ ನಮ್ಮೂರಿನಿಂದ ಮಾಯವಾಯ್ತೆನೋ ಅಂದುಕೊಳ್ಳುತ್ತಿದ್ದ ವೇಳೆಯಲ್ಲಿ ಅದೊಂದು ಮ್ಯಾಜಿಕ್ ನಡೆದಿದೆ.

ಕಳೆದ ನಾಲ್ಕು ವರ್ಷಗಳಿಂದ ಬಾಗಿಲು ಮುಚ್ಚಿ ಮೌನ ಆವರಿಸಿದ್ದ ಸರ್ಕಾರಿ ಶಾಲೆಯಲ್ಲಿ ಇದೀಗ ಮಕ್ಕಳ ಕಲರವ ಮತ್ತೆ ಕೇಳಿಬಂದಿದೆ. ರಂಗು ರಂಗಾಗಿರೋ ನಮ್ಮ ಶಾಲೆಯನ್ನು ಬಿಟ್ಟು ನಾವು ಕಾನ್ವೆಂಟ್​ಗೆ ಹೋಗಲ್ಲ ಎಂದಿರುವ ಚಿಣ್ಣರು ಎಂಟು ದಶಕಕ್ಕೂ ಹೆಚ್ಚು ಹಳೆಯದಾದ ಶಾಲೆಗೆ ಜೀವಕಳೆ ತುಂಬಿದ್ದಾರೆ.

ಮುಚ್ಚಿಹೋಗಿದ್ದ ಈ ಸರ್ಕಾರಿ ಶಾಲೆ ಇದೀಗ ಬಣ್ಣ ಬಣ್ಣಗಳಿಂದ ಕಂಗೊಳಿಸ್ತಿದೆ. ತರಗತಿಯಲ್ಲಿ ಕುಳಿತುಕೊಂಡು ಮಕ್ಕಳು ಖುಷಿ ಖುಷಿಯಿಂದ ಪಾಠ ಕೇಳ್ತಿದ್ದಾರೆ. ನಮ್ಮೂರ ಶಾಲೆಯೇ ನಮಗೆ ಹೆಮ್ಮೆ ಅಂತಿದ್ದಾರೆ ಪುಟಾಣಿಗಳು.

ತಮ್ಮ ಗ್ರಾಮದಲ್ಲಿ ಮತ್ತೆ ಶಾಲೆ ಪುನಾರಂಭ ಆಗಿದ್ದನ್ನು ನೋಡಿ ಊರಿನ ಹಿರಿಯರು ಸಂತಸಗೊಂಡಿದ್ದಾರೆ. ಅಂದಹಾಗೆ ಇಂತಹ ಅಪರೂಪದ ಕ್ಷಣಗಳು ಮತ್ತೆ ಮರಕಳಿಸಿರುವುದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಎಂ ಚೋಮನಹಳ್ಳಿ ಗ್ರಾಮದಲ್ಲಿ.

ಪಾಲಕರ ಇಂಗ್ಲಿಷ್ ಮೇಲಿನ ಪ್ರೀತಿಯಿಂದ ಕಾನ್ವೆಂಟ್​ಗಳ ಮೇಲೆ ಮೋಹ ಮೂಡಿತ್ತು. ಕ್ರಮೇಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ರು. ಹೀಗಾಗಿ 84 ವರ್ಷಗಳ ಇತಿಹಾಸವಿದ್ದ ಈ ಶಾಲೆಗೆ ನಾಲ್ಕು ವರ್ಷಗಳಿಂದ ಶಾಶ್ವತವಾಗಿ ಬೀಗ ಬಿದ್ದಿತ್ತು. ವಿದ್ಯಾರ್ಥಿಗಳ ಕೊರತೆ ಉಂಟಾದ ಹಿನ್ನೆಲೆ ಏನೂ ಮಾಡಲಾಗದೇ, ವಿಧಿಯಿಲ್ಲದೇ ಈ ಶಾಲೆಯನ್ನು ಮುಚ್ಚಲೇಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಆ ಬಳಿಕ ಎಂ.ಚೋಮನಹಳ್ಳಿ ಶಾಲೆ ವಿದ್ಯಾರ್ಥಿಗಳಿಲ್ಲದೇ ಪಾಳು ಬಿದ್ದು ಹೋಗಿತ್ತು. ಆಸರೆ ಇಂದು ಯಾವ ಕಾನ್ವೆಂಟ್ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿದ್ರೋ ಅದೇ ಶಾಲೆಗಳಿಂದ ಪುಟಾಣಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಕಾನ್ವೆಂಟ್​ಗಿಂತ ಚೆನ್ನಾಗಿ ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತು ಪುಟಾಣಿಗಳು ಪಾಠ ಕೇಳುತ್ತಿದ್ದಾರೆ. ತರಲೆ-ತುಂಟಾಟ ಮಾಡಿಕೊಂಡು ತಮ್ಮ ಸ್ನೇಹಿತರೊಂದಿಗೆ ನಲಿಯುತ್ತಿದ್ದಾರೆ. ಮಕ್ಕಳಿಲ್ಲದೇ ಮುಚ್ಚಿದ್ದ ಶಾಲೆ ಮತ್ತೆ ತೆರೆಯಲು ಎಂ ಚೋಮನಹಳ್ಳಿ ಗ್ರಾಮಸ್ಥರು, ಬಸವೇಶ್ವರ ಯುವಕ ಸಂಘ, ಸ್ನೇಹ ಸಿಂಚನ ಟ್ರಸ್ಟ್ ಎಲ್ಲರ ಸಾಂಘಿಕ ಶ್ರಮವಿದೆ ಎಂದು ಮುಖ್ಯಶಿಕ್ಷಕ ಶುಭಕರ್ ತಿಳಿಸಿದ್ದಾರೆ.

ಮಾಯವಾಗಿದ್ದ ಮಕ್ಕಳ ಕಲರವ, ತುಂಟಾಟ, ಆಟಾಟೋಪ, ಎಲ್ಲವೂ ಎಂ ಚೋಮನಹಳ್ಳಿ ಶಾಲೆಯಲ್ಲಿ ಮತ್ತೆ ಕೇಳುತ್ತಿರುವುದರಿಂದ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ವಿಶೇಷ ಅಂದ್ರೆ ಸಿಬಿಎಸ್ಇ ಸಿಲಬಸ್​ನಲ್ಲಿ ಕಲಿಯುತ್ತಿದ್ದ ಪುಟಾಣಿಗಳು ಕೂಡ ಇದೀಗ ಸರ್ಕಾರಿ ಶಾಲೆಗೆ ಸೇರಿ ನಾವು ಇಲ್ಲೇ ವಿದ್ಯಾಭ್ಯಾಸ ಮುಂದುವರಿಸ್ತೀವಿ ಅಂತಾ ಹೇಳುತ್ತಿದ್ದಾರೆ.

ಈಗಿನ ಕಾಲದಲ್ಲಿ ಹೊಸದಾಗಿ ಸರ್ಕಾರಿ ಶಾಲೆಯನ್ನು ಊರಿಗೆ ಮಾಡಿಸಿಕೊಳ್ಳಬೇಕು ಅಂದ್ರೆ ಪಡಬೇಕಾದ ಪಡಿಪಾಟಲು ಅಷ್ಟಿಷ್ಟಲ್ಲ. ಅಂಥದ್ದರಲ್ಲಿ 8 ದಶಕಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಲೆ ಮುಚ್ಚುತ್ತೆ ಅಂದ್ರೆ ನಮ್ಮಂತಹ ಅವಿವೇಕಿಗಳು ಯಾರು ಇರಲಾರರು ಎಂದು ಎಚ್ಚೆತ್ತು ಗ್ರಾಮಸ್ಥರೇ ಮತ್ತೆ ಶಾಲೆ ಪುನಾರಂಭಕ್ಕೂ ಕಾರಣರಾಗಿದ್ದಾರೆ.

ಈ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸದ್ಯ 15 ಮಕ್ಕಳು ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸೇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಪುಟಾಣಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ.

ಪುಟಾಣಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವಂತೆ ಶಾಲೆ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಚಿತ್ರ, ಪ್ರಾಣಿ-ಪಕ್ಷಿಗಳ ಚಿತ್ರ, ಅಕ್ಷರ ಮಾಲೆ, ಜ್ಞಾನಪೀಠ ಪುರಸ್ಕಾರ ಸಾಹಿತಿಗಳ ಚಿತ್ರ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬರೆಯಲಾಗಿದೆ.

ರಾಜ್ಯದ ಬೇರೆ ಬೇರೆ ಕಡೆ ಇದೇ ರೀತಿ ಕಾನ್ವೆಂಟ್ ಮೋಹದಿಂದ ಮಕ್ಕಳ ಕೊರತೆ ಉಂಟಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕಣ್ಣ ಮುಂದೆಯೇ ಸರ್ಕಾರಿ ಶಾಲೆಗಳು ಬಾಗಿಲು ಹಾಕಿಕೊಳ್ಳುತ್ತಾ ಇದ್ದರೂ ಪೋಷಕರು, ಗ್ರಾಮಸ್ಥರು ಉಳಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತಿಲ್ಲ. ಈ ಮಧ್ಯೆ ಮರೆಯಾಗುತ್ತಿರುವ ಕನ್ನಡ ಶಾಲೆಗಳ ನಡುವೆ ಮುಚ್ಚಿದ್ದ ಎಂ ಚೋಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪುನಾರಂಭಗೊಂಡು ರಾಜ್ಯಕ್ಕೆ ಮಾದರಿಯಾಗಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ