NEWSದೇಶ-ವಿದೇಶವಿದೇಶ

ಟಿವಿ ನಿರೂಪಕನಿಗೆ ಗನ್‌ ಹಿಡಿದು ಬಲವಂತವಾಗಿ ಹೇಳಿಕೆ ಕೊಡಿಸಿದ ತಾಲಿಬಾನ್‌ ಉಗ್ರರು

ವಿಜಯಪಥ ಸಮಗ್ರ ಸುದ್ದಿ

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳ ಅಟ್ಟಹಾಸ ಇನ್ನು ನಿಂತಿಲ್ಲ ಒಂದು ಕಡೆ ನಾವು ಯಾರಿಗೂ ಏನು ಮಾಡುವುದಿಲ್ಲ. ಯಾರು ದೇ ಬಿಟ್ಟು ಹೋಗಬೇಡಿ ಎನ್ನುತ್ತಾರೆ ಮತ್ತೊಂದು ಕಡೆ ಹತ್ಯೆ ಮಾಡಲು ಸಿದ್ಧರಾಗುತ್ತಾರೆ. ಅವರ ಈ​ ನಡೆಯಿಂದ ಜನರಂತು ಹೈರಾಣಾಗಿ ಹೋಗಿದ್ದಾರೆ.

ಹೌದು ತಾಲಿಬಾನಿಗಳ ಆಡಳಿತ ಬಂದಿದ್ದೇಬಂದಿದ್ದು, ಅಲ್ಲಿಂದ ಪರಾರಿಯಾಗಲು ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ತಾಲಿಬಾನ್​ ಉಗ್ರರು ಜನರಿಗೆ ಭರವಸೆ ನೀಡುತ್ತಿದ್ದಾರೆ, ಯಾರೂ ದೇಶಬಿಟ್ಟು ಹೋಗಬೇಡಿ. ಇಸ್ಲಾಮಿಕ್​ ಆಡಳಿತಕ್ಕೆ ಹೆದರಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಮತ್ತೆಮತ್ತೆ ಭಯಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಇದೀಗ ತಾಲಿಬಾನಿಗಳು, ಸುದ್ದಿ ವಾಹಿನಿಯೊಂದರ ಕಚೇರಿಗೆ ನುಗ್ಗಿ, ಅಲ್ಲಿ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್​ ಹಿಡಿದು ನಿಂತು ಹೆದರಿಸುತ್ತಿರುವ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗಿದೆ. ಆ ನಿರೂಪಕನ ಸುತ್ತ 6-7 ಉಗ್ರರು ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು.

‘ತಾಲಿಬಾನಿಗಳಿಗೆ ಹೆದರಬೇಡಿ ಎಂದು ನಿಮ್ಮ ಸುದ್ದಿ ವಾಹಿನಿ ಮೂಲಕ ಹೇಳು..ಇಸ್ಲಾಮಿಕ್ ಆಡಳಿತಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳು, ತಾಲಿಬಾನಿಗಳನ್ನು ಹೊಗಳು’ಎಂದು ನಿರೂಪಕನಿಗೆ ಗನ್​ ತೋರಿಸಿ, ಬಲವಂತವಾಗಿ ಹೇಳಿಸಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅವರು ನಾವು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವು ಮಾಧ್ಯಮಗಳು ತಾಲಿಬಾನಿಗಳ ಆಡಳಿತ ಶುರುವಾಗುತ್ತಿದ್ದಂತೆ ತಮ್ಮಲ್ಲಿರುವ ಮಹಿಳಾ ಉದ್ಯೋಗಿಗಳನ್ನೆಲ್ಲ ಕೆಲಸದಿಂದ ತೆಗೆದುಹಾಕಿದ್ದಾರೆ.

ಕೆಲವೇ ದಿನಗಳ ಹಿಂದೆ, ಕಾಬೂಲ್​​ನಲ್ಲಿ ವರದಿ ಮಾಡುತ್ತಿದ್ದ ಟೋಲೋ ನ್ಯೂಸ್​ ವರದಿಗಾರ ಮತ್ತು ಕ್ಯಾಮರಾಮನ್​​ಗೆ ಉಗ್ರರು ಥಳಿಸಿದ್ದರು. ಕಾಬೂಲ್​ನ್ನು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಪತ್ರಕರ್ತರ ಮನೆಗಳನ್ನು ತಾಲಿಬಾನಿಗಳು ಹುಡುಕುತ್ತಿದ್ದಾರೆ. DW ಎಂಬ ನ್ಯೂಸ್​ ಚಾನಲ್​ನಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರನೊಬ್ಬನನ್ನು ಹತ್ಯೆ ಮಾಡಿದ್ದಾರೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ