ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನಗರ ಹೃದಯ ಭಾಗದ ಗನ್ ಹೌಸ್ ಸರ್ಕಲ್ ಹತ್ತಿರವಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸರಳವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಹಾಗೂ ನಗರ ಘಟಕದ ವತಿಯಿಂದ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು.
ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ತುಂಬಲ ಲೋಕೇಶ್ ಮಾತನಾಡಿ, ಕೊರೊನಾದಿಂದ ಸಾವಿರಾರು ಜನರು ಸಾಯುತ್ತಿರುವ ದುರಂತದ ದಿನದಲ್ಲಿ ನಾವೆಲ್ಲರೂ ಸರಳವಾಗಿ ಬಸವಣ್ಣನಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸುತ್ತಿದ್ದೇವೆ. ಆದಷ್ಟು ಬೇಗ ಎಲ್ಲಾ ರೊರೊನಾ ರೋಗಿಗಳು ಗುಣಮುಖರಾಗಲೆಂದು ಪ್ರಾರ್ಥಿಸಿದರು.
ರಾಜ್ಯ ಘಟಕದ ಕೋಶಾಧ್ಯಕ್ಷ ವರುಣ ಮಹೇಶ ಮಾತನಾಡಿ, ಕಾಯಕಯೋಗಿ ಬಸವಣ್ಣ ಕಾಯಕವೇ ಕೈಲಾಸ ಎಂದು ದುಡಿಯುವ ಕೈಗಳಿಗೆ ಸಮಾನತೆ ಸಿಗಲಿ ಎಂದು ಹೋರಾಡಿದರು. ಸಾವಿರಾರು ವಚನಗಳ ಸಾಹಿತ್ಯ ಗ್ರಂಥಗಳನ್ನು ಇಂದಿನ ಪೀಳಿಗೆಗೆ ಕೊಟ್ಟು ಹೋದಂತಹ ಮಹಾನ್ ಜಗಜ್ಯೋತಿ ಬಸವೇಶ್ವರರು ಎಂದರು.
ರಾಜ್ಯ ಸಮಿತಿಯ ಸದಸ್ಯರಾದ ಗುರುಸ್ವಾಮಿ ಸೋಮಶೇಖರ್, ಜಿಲ್ಲಾ ನಿರ್ದೇಶಕರಾದ ಲಿಂಗರಾಜು, ಶಿವಕುಮಾರ್, ಕಂಡೇಸ್, ನಟರಾಜ್ , ಎಚ್.ಎಸ್.ವೀರೇಶ್, ಲೋಕೇಶ್, ಕುರಟ್ಟಿ ಮಹೇಶ್, ಕೆಂಪಣ್ಣ, ಹಡಜನ ಚಂದ್ರು, ಕುಮಾರ್, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್, ನಗರಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾಗೂ ಶ್ರೀಕಂಠಮೂರ್ತಿ, ಸುರೇಶ್ ಇದ್ದರು.