Please assign a menu to the primary menu location under menu

CrimeNEWSನಮ್ಮಜಿಲ್ಲೆ

ಬೆಳಗ್ಗೆಯಾದ ಮದುವೆ ಸಂಜೆವೇಳೆಗೆ ಠಾಣೆ ಮೆಟ್ಟಿಲೇರಿತು: ಬಿಗ್‌ಬಾಸ್‌ ಸ್ಪರ್ಧಿ ಚೈತ್ರ ಸಂಸಾರದಲ್ಲಿ ಬಿರುಕು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಕೋಲಾರ: ಬಿಗ್ ಬಾಸ್ ಏಳನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಚೈತ್ರ ಕೋಟೂರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್‌ ಮದುವೆಯಾದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನವ ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ.

ಕೋಲಾರ ಜಿಲ್ಲೆಯ ಚೈತ್ರಾ ಮತ್ತು ಮಂಡ್ಯ ಜಿಲ್ಲೆಯ ನಾಗಾರ್ಜುನ್ ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಭಾನುವಾರ (ಮಾ.28) ಬೆಳಗ್ಗೆಯಷ್ಟೇ ಮದುವೆಯಾಗಿದ್ದರು. ಕೋಲಾರಕ್ಕೆ ಬಂದ ನವದಂಪತಿಯು ಸಂಜೆ ವೇಳೆಗೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಪರಸ್ಪರ ದೂರು ದಾಖಲಿಸಿದ್ದಾರೆ.

ನನಗೆ ಚೈತ್ರಾ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಕೆಲ ಸಂಘಟನೆಗಳ ಸದಸ್ಯರು ನನ್ನನ್ನು ಗೃಹಬಂಧನದಲ್ಲಿರಿಸಿ ಬೆದರಿಸಿ, ಬಲವಂತವಾಗಿ ಅವರೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿ ದೂರು ನೀಡಿರುವ ಚೈತ್ರ ನಾನು ಮತ್ತು ನಾಗರ್ಜುನ್‌ ಹಲವು ವರ್ಷಗಳಿಂದ ಪರಿಚಿತರು. ಪರಸ್ಪರರು ಪ್ರೀತಿಸಿ ಮದುವೆಯಾಗಿದ್ದೇವೆ. ನಾಗರ್ಜುನ್ ನನಗೆ ತುಂಬಾ ಇಷ್ಟ ನಾನು ಅವರೊಂದಿಗೆ ಬದುಕುತ್ತೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಈ ನಡುವೆ ನಾಗಾರ್ಜುನ್ ಕುಟುಂಬ ಸದಸ್ಯರು ಕೋಲಾರದಲ್ಲಿರುವ ಚೈತ್ರ ಅವರ ಮನೆ ಬಳಿ ಬಂದು ಜಗಳವಾಡಿದ್ದಾರೆ. ಈ ಸಂಬಂಧ ಮಹಿಳಾ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಳಗ್ಗೆ ನಡೆದ ಮದುವೆ ಸಂಜೆ ವೇಳೆಗೆ ಬಿರುಕು ಕಾಣಿಸಿಕೊಂಡಿರುವುದಕ್ಕೆ ಸಮಾಜ ಎತ್ತ ಸಾಗುತ್ತಿದೆ ಎಂದು ಹಿರಿಯರು ನೋವಿನ ನುಡಿಗಳನ್ನಾಡುತ್ತಿದ್ದಾರೆ.

ನಮ್ಮ ಹಿರಿಯರು ನಮಗೆ ಸಂಸ್ಕಾರ, ಮಾನವೀಯತೆಯ ಮೌಲ್ಯಗಳನ್ನು ತುಂಬಿ ಬೆಳೆಸುತ್ತಿದ್ದರು. ಇಂದಿನ ಪೀಳಿಗೆಯಲ್ಲಿ ಅವುಗಳು ನಶಿಸಿ ಹೋಗಿವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Leave a Reply

error: Content is protected !!
LATEST
KSRTC: ಸರಿ ಸಮಾನ ವೇತನಕ್ಕಾಗಿ ಮತ್ತೊಮ್ಮೆ ನಾಲ್ಕೂ ನಿಗಮಗಳ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಒತ್ತಾಯ ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..!