NEWSನಮ್ಮಜಿಲ್ಲೆರಾಜಕೀಯ

ಬನ್ನಿ ಜವಾಬ್ದಾರಿ ಹೊತ್ತುಕೊಳ್ಳಿ ಎಚ್‌ಡಿಕೆ ಜತೆ ಸೇರಿ ಪಕ್ಷ ಬೆಳೆಸಿ: ಜಿಟಿಡಿ ಆಹ್ವಾನಿಸಿ ಕಣ್ಣೀರಿಟ್ಟ ಸಾರಾ ಮಹೇಶ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನೀವೆ ನಮ್ಮ ನಾಯಕರು ಅಂತಲೇ ಹೇಳುತ್ತಾ ಬಂದಿದ್ದೇನೆ ನಾನು ಯಾವತ್ತೂ ನಿಮ್ಮ ಜೊತೆ ಪೈಪೋಟಿ ಮಾಡಿಲ್ಲ ಬನ್ನಿ ನಾಳೆ ಜವಾಬ್ದಾರಿ ಹೊತ್ತುಕೊಳ್ಳಿ ಎಚ್ ಡಿ ಕುಮಾರಸ್ವಾಮಿ ಜೊತೆ ಸೇರಿಕೊಂಡು ಪಕ್ಷವನ್ನು ಕಟ್ಟಿ ಬೆಳೆಸಿ ಎಂದು ಶಾಸಕ ಸಾರಾ ಮಹೇಶ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿರುವ ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಪಕ್ಷದಲ್ಲಿ ಸಕ್ರಿಯವಾಗಿಲ್ಲ ಎಂಬ ಕಾರಣ ನಾನು ಸ್ವಲ್ಪ ಓಡಾಡುತ್ತಿದ್ದೇನೆ. ನನ್ನ ಓಡಾಟದಿಂದ ನಿಮಗೆ ನೋವಾಗಿದ್ದರೆ ದೂರ ಸರಿಯುತ್ತೇನೆ. ಇನ್ನು ಮುಂದೆ ಎಂದು ಚುನಾವಣೆಗೆ ನಿಲ್ಲಲ್ಲ ಎಂದು ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ ರಾಜಕೀಯದಿಂದ ನಿವೃತ್ತಿಯಾಗುತ್ತೇವೆ. ನೀವು ಕಾರ್ಯಕರ್ತರ ಜತೆ ಸೇರಿಕೊಂಡು ಪಕ್ಷವನ್ನು ಉಳಿಸುವ ಕೆಲಸ ಮಾಡಿ ಎಂದು ಭಾವುಕರಾಗಿ ಆಹ್ವಾನಿಸಿದರು.

ನೀವು ಪದೇಪದೇ ನನ್ನನ್ನು ಟೀಕಿಸುತ್ತಿದ್ದೀರಾ. ಆದರೆ, ಎಷ್ಟೇ ಟೀಕೆ ಮಾಡಿದರು ನಿಮ್ಮ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ನಾನು ಏನು ಅನ್ಯಾಯ ಮಾಡಿದ್ದೇನೆ. ನಿಮ್ಮ ಜತೆ ಇರುವ ಕಾರ್ಯಕರ್ತರಲ್ಲಿ ನಾನು ಒಬ್ಬ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ನನ್ನ ಮೇಲೆ ದ್ವೇಷ ಏಕೆ ಎಂದು ಭಾವುಕರಾಗಿಯೇ ಪ್ರಶ್ನಿಸಿದರು.

ಶಕುನಿ, ಮಂಥರೆ ಹೇಳಿಕೆಗೆ ತಿರುಗೇಟು
ಶಕುನಿ ಮಾತಿನಿಂದ ಜೆಡಿಎಸ್ ನಾಶ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿತ್ತಾ, ದುಷ್ಟಶಕ್ತಿಗಳ ನಿರ್ಣಾಮ ಆಗುತ್ತಿತ್ತ. ಮಂಥರೆ ಇಲ್ಲದಿದ್ದರೆ ರಾಮಾಯಣ ನಡೀತಿತ್ತ. ಶಬರಿ ಶಾಪ ವಿಮೋಚನೆ ಆಗುತ್ತಿತ್ತಾ. ರಾವಣನ ಸಂಹಾರ ರಾಜ್ಯದ ಸ್ಥಾಪನೆಯಾಗುತ್ತಿತ್ತಾ ಎಂದು ತಿರುಗೇಟು ನೀಡಿದರು.

ಪದೇ ಪದೇ ನಮ್ಮ ವಿರುದ್ಧ ಮಾತನಾಡಿದರೆ ಎಷ್ಟು ಅಂತ ಸಹಿಸುವುದು. ನನಗೂ ರಾಜಕಾರಣ ಬೇಸರ ಆಗಿದೆ. ಈ ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ನನ್ನಿಂದ ತಪ್ಪಾಗಿದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿದರು.

ಆಲದ ಮರ ತನ್ನ ಬೇರನ್ನು ಮಾತ್ರ ಬಿಟ್ಟು ಬೇರೆ ಯಾವುದೇ ಸಸಿಗಳನ್ನು ಬೆಳೆಯಲು ಬಿಡುವುದಿಲ್ಲ. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಚುನಾವಣೆಯಲ್ಲಿ ಇದೇ ಕಾರಣದಿಂದ ನಾವು ಅಭ್ಯರ್ಥಿಗಳನ್ನು ಹಾಕಿದ್ದೆವು. ಸಮಾಜಕ್ಕೆ ನೀಡುವಂತಹ ಸಸಿಗಳನ್ನು ನೆಡುವ ಕೆಲಸವನ್ನು ಕುಮಾರಣ್ಣ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಮಾಡಿದ್ದೇವೆ ಎಂದು ಹೇಳಿದರು.

ಮೈಮುಲ್‌ ಚುನಾವಣೆಯಲ್ಲಿ ನಾನು ಅಭ್ಯರ್ಥಿಗಳನ್ನು ಹಾಕದೆ ಇದ್ದರೆ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ ನಾವು ಕಣಕ್ಕಿಳಿಸಿದ ಕಾರಣ ಅದರಲ್ಲಿ ಮೂರು ಸ್ಥಾನಗಳು ಲಭಿಸಿವೆ. ಫಲಿತಾಂಶ ಸಮಾಧಾನ ನೀಡಿದೆ ಎಂದು ಇದೇ ವೇಳೆ ಸಮಾಧಾನದಿಂದಲೇ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು