ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ಜನಜಾಗೃತಿ ಜಾಥಾ ನಡೆಯಿತು.
ಜಾಥಾದಲ್ಲಿ ಸೆಕ್ಟರ್ ಆಫಿಸರ್, ಕೃಷಿ ಇಲಾಖೆ ತಾಲೂಕು ಅಧಿಕಾರಿಯಾದ ಗಿರಿಜಾ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಮಾರಕ ಕೊರೊನಾ ರೋಗದ ಬಗ್ಗೆ ಜಾಗ್ರತೆ ವಹಿಸಲು ಕರೆ .
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು. ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದು ಕೊರೊನಾ ವಾರಿಯರ್ಸ್ ಮಲ್ಲಿಕಾರ್ಜುನ ಬಿರಾದಾರ ಮನವಿ ಮಾಡಿದರು.
ಇದೇ ವೇಳೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಯಿತು. ಜಾಥಾದಲ್ಲಿ ಪಿಡಿಒ ಭೀಮನಗೌಡ ಪಾಟೀಲ, ಕಂಪ್ಯೂಟರ್ ಆಪರೇಟರ್ ಗುರುಲಿಂಗಪ್ಪಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರಯ್ಯ ಹಿರೇಮಠ, ನಾಗಣಗೌಡ ಪಾಟೀಲ, ಸಿದ್ದು ಹಡಪದ, ಯಲ್ಲಪ್ಪ ನೈಕೋಡಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಸಿಬ್ಬಂದಿ ಇದ್ದರು.