Breaking NewsNEWSನಮ್ಮಜಿಲ್ಲೆ

ಕೋವಿಡ್‌ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕನ ಮೇಲೆ ಬನ್ನೂರು ಪೊಲೀಸಪ್ಪನಿಂದ ಹಲ್ಲೆ ಆರೋಪ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬನ್ನೂರು : ಕೋವಿಡ್‌ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕನಿಗೆ ಲಾಕ್‌ಡೌನ್‌ ನೆಪದಲ್ಲಿ ಬನ್ನೂರು ಪೊಲೀಸ್‌ಠಾಣೆ ದಪೇದಾರ್‌ ಮಹದೇವಯ್ಯ ಮನ ಬಂದಂತೆ ತಳಿಸಿದ್ದಾರೆ.

ಪಟ್ಟಣದಲ್ಲಿ ಕೋವಿಡ್‌ ಸಂಬಂಧಿತ ಕರ್ತವ್ಯಕ್ಕೆ ಹಾಜರಾಗಲು ಬುಧವಾರ ಬೆಳಗ್ಗೆ ಶಿಕ್ಷಕ ಬಿ.ಆರ್‌.ವಿಜೇಂದ್ರಪ್ರಭು ಸೈಕಲ್‌ನಲ್ಲಿ ಪುರಸಭೆಗೆ ತೆರಳುತ್ತಿದ್ದ ವೇಳೆ ಎಸ್‌ಆರ್‌ಪಿ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಮುಖ್ಯಪೇದೆ ಮಹದೇವಯ್ಯ ತಡೆದು ನನ್ನ ಮಾತನ್ನು ಕೇಳಿಸಿಕೊಳ್ಳದೆ ಮನಸೋ ಇಚ್ಛೆ ತಳಿಸುವ ಮೂಲಕ ತನ್ನ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಕೋವಿಡ್‌ ಕರ್ತವ್ಯ ಸಂಬಂಧ ಪುರಸಭೆಗೆ ತೆರಳುತ್ತಿದ್ದು, ಈ ಸಂಬಂಧ ನನ್ನ ಬಳಿ ಪತ್ರ ಇದೆ ಎಂದರೂ ಅದನ್ನು ಲೆಕ್ಕಿಸದೆ ತನ್ನ ದರ್ಪವನ್ನು ತೋರಿ ಹಲ್ಲೆ ಮಾಡಿದ್ದಾರೆ. ನಂತರ ಅಲ್ಲೇ ಇದ್ದಂತ ವಾಹನ ಚಾಲಕ ಪೊಲೀಸ್‌ ಪುಟ್ಟಸ್ವಾಮಿ ಮಧ್ಯ ಪ್ರವೇಶ ಮಾಡಿ ನನ್ನನ್ನು ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.

ಅಷ್ಟರಲ್ಲೇ ಶಿಕ್ಷಕನಿಗೆ ಹಲವು ಬಾರಿ ಲಾಠಿ ಬೀಸಿದ್ದರು. ಶಿಕ್ಷಕ ತನ್ನದಲ್ಲದ ತಪ್ಪಿಗೆ ಪೆಟ್ಟು ತಿಂದು ನೋವು ಅನುಭವಿಸುವಂತಾಗಿದೆ. ಈ ಸಂಬಂಧ ಪಟ್ಟಣದ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿದರೆ ಅವರು, ಕರ್ತವ್ಯಕ್ಕೆ ಗೈರಾಗಿದ್ದು, ಅವರ ಜಾಗದಲ್ಲಿದ್ದ ಅರೆಕಾಲಿಕ ಕರ್ತವ್ಯ ನಿರ್ವಹಿಸುತ್ತಿದ್ದ ಕಾಂತರಾಜು ಅವರು ಇದು ಶಿಕ್ಷಣಾಧಿಕಾರಿಗೆ ಸಂಬಂಧಿಸಿದ ವಿಚಾರ ಎಂದು ತಿಳಿಸಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕೇಳಿದರೆ ಇದು ನನ್ನ ಗಮನಕ್ಕೆ ಬಂದಿಲ್ಲ. ಈ ತರಹ ಮಾಡುವುದು ಸರಿಯಲ್ಲ. ಕೋವಿಡ್‌ ಸಂಬಂಧ ಬನ್ನೂರು ವ್ಯಾಪ್ತಿಯಲ್ಲಿ 6 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಸಿಆರ್‌ಪಿಯಿಂದ ಐಡಿ ಕಾರ್ಡ್‌ ನೀಡಲಾಗಿದೆ ಎಂದು ತಿಳಿಸಿದರು.

ಕೋವಿಡ್‌ ಕರ್ತವ್ಯಕ್ಕೆ ಲಾಕ್‌ಡೌನ್ ಸಮಯದಲ್ಲಿ ಶಿಕ್ಷಕರನ್ನು ನೇಮಿಸಿ ಈ ತರಹದ ಅತಾಚುರ್ಯಗಳು ನಡೆದರೆ ಮುಂದಿನ ದಿನದಲ್ಲಿ ಯಾವ ಶಿಕ್ಷಕರು ಕರ್ತವ್ಯ ಮಾಡಲು ಮುಂದೆ ಬರುವರು. ಇದನ್ನು ಜಿಲ್ಲಾಧಿಕಾರಿಯವರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು  ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು