Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

“ಮಾತು ತಪ್ಪದ ಶ್ರೀರಾಮು”ಲು ಸಾರಿಗೆ ನೌಕರರ ವಜಾ, ವರ್ಗಾವಣೆ, ಅಮಾನತು ಆದೇಶ ವಾಪಸ್‌ : ಸಚಿವ ಶ್ರೀರಾಮುಲು ಘೋಷಣೆ- ಕ್ವಾರ್ಟರ್ಸ್‌ ಬಿಡಬೇಕಿಲ್ಲ

ಶಿಕ್ಷೆಗೆ ಒಳಗಾಗಿದ್ದವರು 6 ಸಾವಿರ ನೌಕರರು l 4 ಸಾವಿರ ನೌಕರರ ಮೇಲಿನ ಶಿಕ್ಷೆ ಆದೇಶ ವಾಪಸ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರ ವೇಳೆ ಮಾಡಿದ ಸಾರಿಗೆ ನೌಕರರ ವಜಾ, ವರ್ಗಾವಣೆ, ಅಮಾನತು ಆದೇಶವನ್ನು ವಾಪಸ್‌ ಪಡೆದಿರುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

ಸೋಮವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರದ ಸಮಯದಲ್ಲಿ ಆಗಿರುವ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್‌ ಪ್ರಕರಣಗಳನ್ನು ವಾಪಸ್‌ ಪಡೆದಿರುವುದಾಗಿ ತಿಳಿಸಿದರು.

6 ಸಾವಿರ ನೌಕರರು ಶಿಕ್ಷೆಗೆ ಒಳಗಾಗಿದ್ದರು. ಅವರಲ್ಲಿ 4 ಸಾವಿರ ನೌಕರರ ಮೇಲಿನ ಶಿಕ್ಷೆ ಆದೇಶವನ್ನು ವಾಪಸ್‌ ಪಡೆಯಲಾಗಿದೆ ಎಂದು ವಿವರಿಸಿದರು.

ಇನ್ನು ಉಳಿದ 2 ಸಾವಿರ ನೌಕರರ ಮೇಲಿನ ಶಿಕ್ಷೆ ಆದೇಶ ವಾಪಸ್‌ ಪಡೆಯುವ ಕುರಿತು ನಾಳೆ ಸಭೆ ನಡೆಸುವುದಾಗಿ ಹೇಳಿದರು.

ಇನ್ನು ಯಾರು ಕೂಡ ಕ್ವಾರ್ಟ ರ್ಸ್‌ಗಳನ್ನು ಖಾಲಿ ಮಾಡಬೇಕಿಲ್ಲ. ಜತೆಗೆ ಅವರ ಮನೆಗಳಿಗೆ ಅಂಟಿಸಿರುವ ನೋಟಿಸ್‌ಗಳನ್ನು ಕೂಟ ತೆಗೆದು ಹಾಕುವಂತೆ ನಾಲಕೂ ನಿಗಮಗಳ ಎಂಡಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಮುಷ್ಕರದ ಸಮಯದಲ್ಲಿ ಎಫ್‌ಐಆರ್‌ ಆಗಿರುವ ನೌಕರರ ಬಗ್ಗೆ ಮುಂದಿನ ದಿನಗಳಲ್ಲಿ ಒಳ್ಳೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ ಬಗ್ಗೆಯೂ ಯಾವ ನೌಕರರು ಭಯ ಪಡುವ ಅಗತ್ಯವಿಲ್ಲ ಎನ್ನವನ್ನು ಸರಿಪಡಿಸಿಕೊಡುತ್ತೇವೆ ಎಂದು ತಿಳಿಸಿದರು.

ಶಿಕ್ಷೆಗೆ ಒಳಗಾಗಿರುವ ಎಲ್ಲ ನೌಕರರ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಸಚಿವರು ಹೋದ ಕಡೆ ಅವರನ್ನು ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು ಮತ್ತು ಇತರ ಸಂಘಟನೆಗಳ ಪದಾಧಿಕಾರಿಗಳು ಮಾಡಿಕೊಂಡಿದ್ದ ಮನವಿ ವೇಳೆ ಭರಸವೆ ನೀಡಿದ್ದರು. ಅದರಂತೆ ಇಂದು ಸಚಿವರು ನಡೆದು ಕೊಂಡಿದ್ದಾರೆ.

ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳೊಂದಿಗೆ ಈ ಹಿಂದೆ ಚರ್ಚಿಸಿದ್ದರು. ಜತೆಗೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಒಂದು ಶಾಶ್ವತವಾದ ಪರಿಹಾರಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದರು.

ಕಳೆದ ಸೋಮವಾರವೇ ಸುದ್ದಿಗೋಷ್ಠಿ ನಡೆಸಿ ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ನೌಕರರು ಭರವಸೆ ಇಟ್ಟುಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬದಲಾವಣೆಯಾದ ಹಿನ್ನೆಲೆಯಲ್ಲಿ ಇಂದು (ಸೆ.20) ಮಧ್ಯಾಹ್ನದ ಬಳಿಕ ಸುದ್ದಿಗೋಷ್ಠಿ ನಡೆಸುವ ಮೂಲಕ ಎಲ್ಲ ವಿಷಯವನ್ನು ತಿಳಿಸುವುದಾಗಿ ಸಚಿವರು ಹೇಳಿದ್ದರು ಅದರಂತೆ  ಇಂದು  ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.

 

 

 

Leave a Reply

error: Content is protected !!
LATEST
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ