Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯ

ಸಾಧನೆ ಸಂಭ್ರಮಾಚರಣೆ ವೇಳೆಗೆ ನೋವಿನ ಉಡುಗೊರೆ ಕೊಡುತ್ತಿದೆ ಬಿಜೆಪಿ : ಎಂಕೆಎಸ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಬಿಜೆಪಿ ಸರ್ಕಾರ ಪ್ರತಿ ವರ್ಷದ ಸಾಧನೆ ಸಂಭ್ರಮಾಚರಣೆ ವೇಳೆಗೆ ಒಂದೊಂದು ನೋವಿನ ಉಡುಗೊರೆ ನೀಡುವ ಮೂಲಕ ಸಂಭ್ರಮಿಸುತ್ತಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಕಿಡಿಕಾರಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅಧಿಕಾರಕ್ಕೆ ಬಂದು 7 ವರ್ಷ ಪೂರೈಸಿದ ಈ ವರ್ಷ ಸಾವಿನ ಸುಳ್ಳುಗಳನ್ನು ಹೇಳುವ ಮೂಲಕ, ಕೊರೊನಾ ನಿಯಂತ್ರಣ ವಿಫಲತೆ, ನಾಗರಿಕರ ಬದುಕಿನ ದುರ್ಬಲತೆಯ ಮೂಲಕ ಸಂಭ್ರಮ ಆಚರಿಸುತ್ತಿದೆ ಎಂದು ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯನ್ನೂ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಚ್ಚಿಡುತ್ತಿವೆ. ಮೃತರಪಟ್ಟವರ ಸಂಖ್ಯೆಯನ್ನೇ ಕಡಿಮೆ ತೋರಿಸಿ ಸುಳ್ಳು ಹೇಳುತ್ತಿರುವುದು ಯಾವ ಸಾಧನೆ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೊ? ದೇಶದ ಉದ್ದಗಲಕ್ಕೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಿನ್ನೆ ಮೈಸೂರು ನಗರದಲ್ಲಿ ಕೋವಿಡ್‌ನಿಂದಲೇ ಸತ್ತವರ ಸಂಖ್ಯೆ 34. ಆದರೆ, ಜಿಲ್ಲಾಡಳಿತ ಹೇಳಿರುವ ಸಾವಿನ ಸಂಖ್ಯೆ 12. ಏಕೆ ಈ ರೀತಿ ಸಾವನ್ನು ಮುಚ್ಚಿಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಗುಜರಾತಿನಲ್ಲಿ ಸಾವಿನ ಸಂಖ್ಯೆಗಳನ್ನು ಸರ್ಕಾರ ಹೇಳುವುದಕ್ಕೂ ಮರಣ ಪತ್ರಗಳನ್ನು ವಿತರಣೆ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇತರ ಸಾಕ್ಷಿ ಆಧಾರಗಳನ್ನು ಗಮನಿಸಿದಾಗ 61 ಸಾವಿರ ವ್ಯತ್ಯಾಸ ಬರುತ್ತದೆ. ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಲೇ ಇದೆ. ಈ ಬಿಜೆಪಿಯವರು ಸುಳ್ಳಿನ ಕಾರ್ಖಾನೆ ಎನ್ನುವುದು ಗೊತ್ತಿದೆ. ಆದರೆ ಸಾವಿನಲ್ಲೂ ಈ ಬಗೆಯ ದೊಡ್ಡ ಸುಳ್ಳು ಹೇಳುತ್ತಿರುವುದು ದೇಶದ ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಪಾಸಿಟಿವ್ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಪರೀಕ್ಷೆ ಕೇಂದ್ರಗಳನ್ನೇ ಮುಚ್ಚುತ್ತಿದ್ದಾರೆ. ಜನ ಸೋಂಕಿನ ಲಕ್ಷಣಗಳಿಂದ ಬಳಲಿ ಆಸ್ಪತ್ರೆ, ಪರೀಕ್ಷಾ ಕೇಂದ್ರಗಳ ಬಾಗಿಲಿನ ಬಳಿ ಅಲೆಯುತ್ತಿರುವುದರಿಂದಲೇ ತಿಳಿಯುತ್ತಿದೆ. 75 ಜನಕ್ಕೆ ಟೋಕನ್ ಕೊಟ್ಟರೆ 25 ಜನಕ್ಕೆ ಪರೀಕ್ಷೆಯನ್ನೇ ಮಾಡಲ್ಲ. ಇನ್ನು ಪ್ರತಿ ಗುರುವಾರ ಬಾಣಂತಿ ದಿನ ಎಂದು ಹೇಳಿ ಕೆಲವು ಕಡೇ ಆರ್‌ಟಿಪಿಸಿಆರ್‌ ಕೋವಿಡ್‌ ಪರೀಕ್ಷೆ ಮಾಡುವುದೇ ಇಲ್ಲ ಎಂದು ಆರೋಪಿಸಿದರು.

ಇನ್ನು ಗ್ರಾಮೀಣಾ ಭಾಗದಲ್ಲಿ ಇನ್ನೂ ಕಷ್ಟ, ಪೂರ್ಣ ಪರೀಕ್ಷೆ ಮಾಡುತ್ತಲೇ ಇಲ್ಲ. ಅದನ್ನೂ ಮೀರಿ ಪರೀಕ್ಷೆ ಮಾಡಿದರೂ ವರದಿ ನೀಡಲು 3 ದಿನ ಬೇಕಾಗುತ್ತದೆ. ಅಲ್ಲಿಯವರೆಗೆ ಸೋಂಕಿತ ಎಲ್ಲಾ ಕಡೆ ಸುತ್ತಾಡಿ ಸೋಂಕು ಹರಡಿ, ಮನೆಯವರಿಗೂ ಹರಡಿ ಕಾಯಿಲೆ ಅಂಟಿಸುತ್ತಿದ್ದಾರೆ ಎಂದು ತಿಳಿಸಿದರು.

ನಗರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ, ಪಾಲಿಕೆ ಸದಸ್ಯ ಜೆ. ಗೋಪಿ, ಮಾಜಿ ಸದಸ್ಯ ಎಂ.ಸುನೀಲ್, ಸೇವಾದಳ ಗಿರೀಶ್, ಐಟಿ ಸೆಲ್ ಅಧ್ಯಕ್ಷ ನಿರಾಲ್ ಶಾ, ಎಂಎಎಸ್‌ಐಎಲ್ ಮಾಜಿ ನಿರ್ದೇಶಕ ಗುಣಶೇಖರ್ ಇದ್ದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ