ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಾಳೆ (ಜೂನ್ 11) ನಡೆಯಬೇಕಿತ್ತು. ಆದರೆ ಕೊವಿಡ್-19 ಮಾರ್ಗಸೂಚಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಚುನಾವಣೆ ಮುಂದೂಡಿ ಅದೇಶಿಸಿದೆ.
ಕಾಂಗ್ರೆಸ್ನ ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ ಚುನಾವಣೆ ನಡೆಸುವುದು ಈಗ ಸೂಕ್ತವಲ್ಲ ಅದಕ್ಕೆ ತಡನಿಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಕೈಗೆತ್ತಿಕೊಂಡ ಹೈಕೋರ್ಟ್ ಏಕಸದಸ್ಯ ಪೀಠ ಜೂನ್ 21ರವರೆಗೆ ಪಾಲಿಕೆ ಮೇಯರ್ ಚುನಾವಣೆ ಸೂಕ್ತವಲ್ಲ. ಬಳಿಕ ಪರಿಸ್ಥಿತಿ ಪರಾಮರ್ಶಿಸಿ ಚುನಾವಣೆ ದಿನಾಂಕ ನಿಗದಿಪಡಿಸಿ ಎಂದು ಮಧ್ಯಂತರ ಆದೇಶ ನೀಡಿದೆ.
ಮೈಸೂರಿನಲ್ಲಿ ಕೊವಿಡ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪ ಕಾಯ್ದೆ ಅಡಿಯೂ ನಿರ್ಬಂಧವಿದೆ. ಚುನಾವಣೆ ನಡೆಸಿದರೆ ಪಾಲಿಕೆ ಸದಸ್ಯರು ಹಾಗೂ ಬೆಂಬಲಿಗರು ಒಂದೆಡೆ ಸೇರುತ್ತಾರೆ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಅರ್ಜಿದಾರರ ಪರ ವಕೀಲ ಎಲ್.ಎಂ.ಚಿದಾನಂದಯ್ಯ ಮನವಿ ಮಾಡಿದ್ದರು. ಈ ವಾದವನ್ನಾಲಿಸಿದ ಹೈಕೋರ್ಟ್ ಜೂನ್ 21ರವರೆಗೆ ಪಾಲಿಕೆ ಮೇಯರ್ ಚುನಾವಣೆ ಸೂಕ್ತವಲ್ಲ. ಬಳಿಕ ಪರಿಸ್ಥಿತಿ ಪರಾಮರ್ಶಿಸಿ ಚುನಾವಣೆ ದಿನಾಂಕ ನಿಗದಿಪಡಿಸಿ ಎಂದು ಸೂಚಿಸಿದೆ.