ವಿಜಯಪಥ ಸಮಗ್ರ ಸುದ್ದಿ
ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ತಾತ್ಕಾಲಿಕವಾಗಿ ಸ್ವಚ್ಛತಾ ಕೆಲಸ ವಾಡುತ್ತಿರುವ ದಲಿತ ಮಹಿಳೆ ಎಂ.ಮಂಜುಳಾ ಎಂಬುವರಿಂದ ತಾಲೂಕಿನ ವಿಶ್ವೇಶ್ವರನಗರ ಬಡಾವಣೆಯ ಪಿಎಸ್‌ಎಸ್‌ಕೆ ಕ್ವಾಟ್ರಸ್‌ನಲ್ಲಿರುವ ವ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛತೆ ಕೆಲಸ ವಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಹತ್ತು ದಿನಗಳ ಹಿಂದೆ ನಡೆದಿದ್ದು, ಇಂಥ ಕೆಲಸಗಳಿಗೆ ಕಾನೂನಿನಡಿ ಅವಕಾಶ ಇಲ್ಲದಿದ್ದರೂ ಈ ರೀತಿ ಮಾಡಿಸುತ್ತಿರುವುದು ಈಗ ಕಾನೂನಿನ ಕೆಂಗಣ್ಣಿಗೆ ಗುರಿಯಾಗಿದೆ.
ಸಚಿವ ಮುರುಗೇಶ್ ನಿರಾಣಿ ಒಡೆತನಕ್ಕೆ ಸೇರಿದ ಎಂಆರ್‌ಎನ್ ಸಂಸ್ಥೆ ಹಾಗೂ ಪಿಎಸ್‌ಎಸ್‌ಕೆ ಸಿವಿಲ್ ಇಂಜಿನಿಯರ್ ನಾಗೇಶ್ ಎಂಬುವರು ಕೆನ್ನಾಳು ಗ್ರಾಮದ ದಲಿತ ಮಹಿಳೆ ಮಂಜುಳಾಗೆ ವಿಶ್ವೇಶ್ವರ ನಗರ ಬಡಾವಣೆಯಲ್ಲಿರುವ ಒಣ ಮಲದ ಫಿಟ್ ಸ್ವಚ್ಛತೆ ವಾಡಿಕೊಂಡು ಬಾ ಎಂದು ಸೂಚಿಸಿದ್ದರು ಎನ್ನಲಾಗಿದೆ.
ದಲಿತ ಮಹಿಳೆ ಸೇರಿ ಮೂರು ಮಂದಿ ದಬ್ಬೆ ಸೇರಿದಂತೆ ಇತರ ಸಾಮಗ್ರಿಗಳಿಂದ ಒಣ ಮಲ ತುಂಬಿಕೊಂಡಿದ್ದನ್ನು ಮೇಲೆ ನಿಂತುಕೊಂಡು ಸ್ವಚ್ಛತೆ ವಾಡಿದ್ದಾರೆ. ಆದರೆ ಒಣ ಮಲ ಗುಂಡಿ ಒಳಗೆ ಇದ್ದ ಪರಿಣಾಮಗುಂಡಿ (ಫಿಟ್) ಒಳಗೆ ಇಳಿದು ಸ್ವಚ್ಛ ಮಾಡುವಂತೆ ಸಂಸ್ಥೆಯ ರಾಜಶಾಸ್ತ್ರಿ ಎಂಬುವರು ಸೂಚಿಸಿದ್ದಾರೆ.
ವಿಧಿಯಿಲ್ಲದೆ ದಲಿತ ಮಹಿಳೆ ಸಂಸ್ಥೆಯ ಅಧಿಕಾರಿ ಸೂಚನೆಯನ್ನು ಪಾಲಿಸಬೇಕೆಂಬ ಉದ್ದೇಶದಿಂದ ಒಣ ಮಲ ತುಂಬಿಕೊಂಡಿದ್ದ ಗುಂಡಿಗೆ ಇಳಿದು ಕೈಗೆ ಗ್ಲೌಸ್ ಹಾಕಿಕೊಂಡು ಸಂಪೂರ್ಣ ಸ್ವಚ್ಛ ವಾಡಿದ್ದಾರೆ. ಗುಂಡಿಗೆ ಇಳಿದು ಸ್ವಚ್ಛತೆ ಕೆಲಸ ವಾಡುವಾಗ ಜೊತೆಗಿದ್ದವರು ತಮ್ಮ ಮೊಬೈಲ್‌ನಲ್ಲಿ ಫೋಟೊ ತೆಗೆದಿದ್ದಾರೆ.
ವಿದ್ಯಾವಂತರೆ ಈರೀತಿಯ ಕೆಲಸ ಮಾಡಿಸಲು ಮುಂದಾಗುತ್ತಿರುವುದಕ್ಕೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾಗಿ ಬಂದಿದೆ. ಅಲ್ಲದೆ ಈ ರೀತಿ ಮಾಡಿಸುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.