NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಹಿತ  ಬಯಸದೆ ಸ್ವಹಿತಕ್ಕಾಗಿ  ಪರಿಸ್ಥಿತಿಯ ಲಾಭ ಪಡೆಯಲಿಕ್ಕೆ ಹೊರಟಿರುವುದು ಎಷ್ಟು ಸರಿ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಈ ಹಿಂದೆ ಕೈಗೊಂಡ ಮುಷ್ಕರದ ಸಂದರ್ಭದಲ್ಲಿ ಆಗಿರುವಂತಹ  ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳು, ಮತ್ತಿತರೆ ತೊಂದರೆಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಹತ್ತಿರ ಸುದೀರ್ಘವಾಗಿ ನಾವು ಮಾತುಕತೆ ನಡೆಸಿದ್ದೇವೆ.

ಈ ವೇಳೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದು, ಮನವಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಒಂದಷ್ಟು ದಿನಗಳಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುವುದಾಗಿ ಹೇಳಿರುತ್ತಾರೆ.

ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಮತ್ತು ಸಾರಿಗೆ ಸಚಿವರ ಭರವಸೆಗೆ ಮನ್ನಣೆ ಕೊಟ್ಟು, ಇಷ್ಟು ದಿನ ಕಾದು ನಮ್ಮ ಎಲ್ಲ ನೌಕರರನ್ನು ಮನವೊಲಿಸಿ ಕೊಂಡು ಬಂದಿದ್ದೇವೆ. ಆದರೆ ಈಗ ವಜಾಗೊಂಡು 6 ತಿಂಗಳು ಮುಗಿಯುತ್ತಾ ಬಂದಿದೆ. ಹಾಗಾಗಿ ನಮ್ಮ ನೌಕರರ ಸುರಕ್ಷತೆ ಗೋಸ್ಕರ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡ್ಲಿಕ್ಕೆ ಲೇಬರ್ ಕೋರ್ಟ್ ನಲ್ಲಿ  ಒಂದು  ಪ್ರಕರಣವನ್ನು  ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದೆವೆ. (ಇದು ಸರ್ಕಾರದ ವಿರುದ್ಧ ಅಲ್ಲಾ ನಮ್ಮ ನೌಕರರ ಭವಿಷ್ಯಕ್ಕಾಗಿ ).

ಈ ವಿಚಾರವಾಗಿ  ಕೇಲವೊಬ್ಬರು ಬೇರೆ ಬೇರೆ ರೂಪ ಕೊಟ್ಟು ಬೇರೆ  ಲೇಪನಹಚ್ಚಿ ನೌಕರರ ದಿಕ್ಕು ತಪ್ಪಿಸುವಂತಾ ಎಲ್ಲ ಕೆಲಸ  ಮಾಡುತ್ತಿರುವುದು ತುಂಬಾ  ನೋವಿನ ಸಂಗತಿ. ಇಂತಹ ಪರಿಸ್ಥಿತಿಯಲ್ಲೂ ನೌಕರರ ಹಿತ  ಬಯಸದೆ ತಮ್ಮ  ಸ್ವಹೀತಾಸಕ್ತಿಗಾಗಿ  ಪರಿಸ್ಥಿತಿಯ ಲಾಭ ಪಡೇಯಲಿಕ್ಕೆ ಹೊರಟಿರುವ ಕೆಲವು  ಮುಖಂಡರು ತಮ್ಮ ಬೇಳೆ ಬೆಯಿಸಿಕೊಳ್ಳಲಿಕ್ಕೆ ಹಲವಾರು ಪ್ರಯತ್ನ ಮಾಡುತ್ತಿರುವುದು, ಒಳ್ಳೆಯ ಬೇಳವಣಿಗೆಯಲ್ಲಾ!

ಸ್ನೇಹಿತರೇ ನಮ್ಮ ನೌಕರರ ಹಣ ಪೋಲಾಗಬಾರದು ಎನ್ನುವ ಕಾರಣಕ್ಕಾಗಿ ನಾವು ಇಷ್ಟು ದಿನ ಈ ವಿಚಾರವನ್ನು  ಮುಂದೂಡಿಕೊಂಡು ಬಂದಿರುವುದು ಸತ್ಯ .ಆದರೆ ಈಗಿನ ಸಂದರ್ಭದಲ್ಲಿ ನೌಕರರ  ಸುರಕ್ಷತೆಯ  ದೃಷ್ಟಿಕೋನದಿಂದ  ನಾವು ಲೇಬರ್ ಕೋರ್ಟ್ ನಲ್ಲಿ  ಪ್ರಕರಣವನ್ನು ದಾಖಲಿಸಲು ಸೂಚನೆಯನ್ನು ಕೊಟ್ಟಿದ್ದೇವೆ.

ವಕೀಲರಿಗೆ ಕೊಡುವಂಥ ಮೊತ್ತದ ವಿಚಾರವಾಗಿ  ನಾವೂ ಸಹ ಸಾಕಷ್ಟು ವಕೀಲರನ್ನು ಸಂಪರ್ಕ ಮಾಡಿ ಚರ್ಚಿಸಿ ಕೊನೆಯಲ್ಲಿ ನಿರ್ಧಾರಕ್ಕೆ  ಬಂದಿದ್ದೆವೆ, ಹಾಗಾಗಿ ಎಲ್ಲ ನೌಕರರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ. ನಿಮಗೆ ನಂಬಿಕೆ ಇದ್ದರೆ ನಮಗೆ ಸಹಕಾರ ಕೊಡಿ ಇಲ್ಲವಾದರೆ ನಿಮ್ಮ ವೈಯಕ್ತಿಕವಾಗಿ ನೀವು ಪ್ರಕರಣಗಳನ್ನು ದಾಖಲಿಸಿ (ಇಲ್ಲಿ ಬಲವಂತ ಏನೂ ಇಲ್ಲ ).

ಇದನ್ನೇ ಕಾರಣವಾಗಿಟ್ಟುಕೊಂಡು  ಕೆಲವೊಂದು ಸಂಘಟನೆಗಳು ಇವತ್ತು ಕೂಟದವರು ಹಣ ಮಾಡುವುದಕ್ಕೆ ಹೊರಟಿದ್ದಾರೆ. ಅನ್ನುವಂತಹ ಆರೋಪಗಳನ್ನು ಮಾಡುತ್ತಿದ್ದಾರೆ.  ಸ್ನೇಹಿತರೆ ಇವತ್ತು ಮಾತಾಡೋ ಎಲ್ಲ ನಾಯಕರೂ ಕೊರೊನಾಕ್ಕೆ ಹೆದರಿ ಮನೆಯಿಂದ ಹೊರಗಡೆ ಬಾರದೆ ಅಡಗಿ ಕುಳಿತುಕೊಂಡಿದ್ದರು.

ಕೂಟದ ಪದಾಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಓಡಾಡಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರ ಫಲವಾಗಿ ಸಾರಿಗೆ ಸಚಿವರು ಎಲ್ಲವನ್ನು ಸರಿಪಡಿಸಿಕೊಡುತ್ತೇನೆ ಎಂದು ಹೇಳಿದ್ದಲ್ಲದೆ ಆ ದಾರಿಯಲ್ಲಿ ನಡೆಯುತ್ತಿದ್ದಾರೆ.

ತಾವೆಲ್ಲರೂ ಗಮನಿಸಬಹುದು  ಕೂಟದ ಪದಾಧಿಕಾರಿಗಳು ನಿಮ್ಮಲ್ಲಿ ಕೇಳಿಕೊಳ್ಳುವುದಷ್ಟೇ ನಿಮ್ಮಿಂದ ಹಣ ಸಂಗ್ರಹಣೆ ಮಾಡಿ ನಿಮ್ಮನ್ನು ಸುಲಿಗೆ ಮಾಡುವಂತಹ ಕೆಲಸಕ್ಕೆ ಯಾರೂ ಸಹ ಇಳಿದಿರುವುದಿಲ್ಲ.

ಕೆಲವೊಂದು ಸಂಘಟನೆಗಳು ಪದಾಧಿಕಾರಿಗಳು ಹೇಳುತ್ತಿದ್ದಾರೆ. ಈ ದಿನ ಲೇಬರ್ ಕೋರ್ಟ್ ನಲ್ಲಿ ಕೇಸ್ ದಾಖಲಿಸುವಂತಾ ಅವಶ್ಯಕತೆ ಏನಿದೆ. ಸರ್ಕಾರ ನಮ್ಮ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ ಅಂತ. ಆದ್ರೆ ಇವರು ತಮ್ಮ ಬೆಂಬಲಿಗರಿಗೆ ಈಗಾಗ್ಲೇಕೇಸು ದಾಖಲೆ ಮಾಡ್ಲಿಕ್ಕೆ ಹೇಳಿದ್ದಾರೆ. ಅದರಂತೆ ಕೇಸ್  ದಾಖಲೆ ಸಹ ಮಾಡಿದ್ದಾರೆ.

ಇನ್ನುಳಿದ ನೌಕರರ ಭವಿಷ್ಯದ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ  ಹಾಗಾಗಿ ನಮ್ಮ ನೌಕರರ  ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು  ವಿನಂತಿಸಿಕೊಳ್ಳುತ್ತೇವೆ.

ಆದರೆ, ಕೂಟದಲ್ಲಿ ಇಷ್ಟು ದಿನ ಕಷ್ಟ ಬಿದ್ದು ಎಲ್ಲ ವಿಚಾರದಲ್ಲೂ ನಿಮಗೆಲ್ಲಾ ಸಹಕಾರ ಕೊಟ್ಟು ನಿಮ್ಮ ಏಳಿಗೆಗಾಗಿ ದುಡಿದಿರುವಂತಹ ಕೂಟದ ಧ್ಯೇಯೋದ್ದೇಶಗಳಿಗೆ  ಧಕ್ಕೆ ತರುವಂತಹ ಕಾರ್ಯವನ್ನು ನೀವು ಯಾರೂ ಸಹ ಮಾಡಬಾರದೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

l ಜಯಂತ್‌ ಮರ್ಗಿ

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ