Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಕೆಕೆಆರ್‌ಟಿಸಿಗೆ 2 ಕೋಟಿ ರೂ. ಆದಾಯ ಕುಂಟಿತಗೊಳಿಸಿರುವ ಅಧಿಕಾರಿಗಳ ಅಮಾನತಿಗೆ ಬಿ.ಎನ್. ಹುಂಡೇಕರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ನಡೆದಿರುವ ಭ್ರಷ್ಟಾರ, ದುರಾಡಳಿತ, ಜಾತೀಯತೆ ಹಾಗೂ ಸಂಸ್ಥೆಗೆ ಸುಮಾರು 2 ಕೋಟಿ ರೂ.ಗಳಷ್ಟು ಬರುವ ಆದಾಯ ಕುಂಟಿತಗೊಳಿಸಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ವಿಜಯಪುರ ಅಲ್ಪ ಸಂಖ್ಯಾತರ ಮೋರ್ಚಾದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಹುಂಡೇಕರ ಒತ್ತಾಯಿಸಿದ್ದಾರೆ.

ನಿರ್ಗಮಿತ ಕಾರ್ಮಿಕ ವಿರೋಧಿ ಅಧಿಕಾರಿ ನಾರಾಯಣಪ್ಪ ಕುರಬರ, ವಿಭಾಗೀಯ ಸಂಚಾರಿ ಅಧಿಕಾರಿ ದೇವಾನಂದ ಬಿರಾದಾರ ಹಾಗೂ ವಿಷಯ ನಿರ್ವಾಹಕ ಶ್ರೀಕಾಂತ ಕೊಪ್ಪಳ ಅವರು ಸೇರಿ ಸಂಸ್ಥೆಗೆ ನಷ್ಟ ಮಾಡಿರುವ ಬಗ್ಗೆ ಈ ಮೂವರು ಅಧಿಕಾರಿಗಳ ವಿರುದ್ಧ ದೂರನ್ನು ದಾಖಲು ಮಾಡಲಾಗಿದೆ.

ಈ ಮೂರು ಜನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳನ್ನು ದೂರಿನಲ್ಲಿರುವ ಅಂಶಗಳ ಕುರಿತು ನಿಷ್ಪಕ್ಷವಾಗಿ ತನಿಖೆ ನಡೆಸಿ ವರದಿ ಸಲ್ಲಿಸಲು ತಂಡವನ್ನು ರಚನೆ ಮಾಡಿರುತ್ತೀರಿ.

ಆ ತಂಡದ ಅಧಿಕಾರಿಗಳು ಸುಮಾರು 2 ದಿನಗಳಂತೆ 2 ಸಲ ವಿಜಯಪುರ ವಿಭಾಗಕ್ಕೆ ಬಂದು ನನಗೆ ಹಾಗೂ ಇನ್ನುಳಿದ ದೂರುದಾರರಿಗೆ ವಿಚಾರಣೆ ಮಾಡಿ ನಮ್ಮಿಂದ ಹೇಳಿಕೆಯನ್ನು ಸಹ ಪಡೆದಿದ್ದಾರೆ.

ದೂರಿನಲ್ಲಿರುವ ಎಲ್ಲಾ ಅಂಶಗಳು ಸಾಕ್ಷಿ ಸಮೇತವಾಗಿ ರುಜುವಾತು ಆಗಿವೆ. ಆದರೆ ತಪ್ಪಿತಸ್ಥರು ಸಾಕ್ಷಿದಾರರಿಗೆ ಹೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಆದ್ದರಿಂದ ಎಂಡಿ ಅವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಮಧ್ಯತರ ವರದಿ ತರಿಸಿ ತಪ್ಪಿತಸ್ತರನ್ನು ನಡತೆ ಮತ್ತು ಶಿಸ್ತು ನಿಯಮಗಳ ಪ್ರಕಾರ ಈ ಕೊಡಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಮುಂದಿನ ಸಂಪೂರ್ಣ ತನಿಖೆ ಮಾಡಲು ಆದೇಶಿಸಲು ಸಮಸ್ತ ನೊಂದ ಕಾರ್ಮಿಕರ ಪರವಾಗಿ ಬೇಡಿಕೊಳ್ಳುತ್ತಿದ್ದೇನೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರಲ್ಲೂ ಬಿ.ಎನ್. ಹುಂಡೇಕರ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
4 ವರ್ಷಕ್ಕೊಮ್ಮೆ ಚೌಕಾಸಿ ನಡೆಸುವ ಬದಲು 7ನೇ ವೇತನ ಆಯೋಗ ಜಾರಿಮಾಡಿ: ನೌಕರರ ಸೇನೆ ಆಗ್ರಹ ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌