NEWSನಮ್ಮಜಿಲ್ಲೆಸಂಸ್ಕೃತಿ

ಮಸಣೀಕಮ್ಮ ಬ್ರಹ್ಮ ರಥೋತ್ಸವ: ಸಾಗರೋಪಾದಿಯಲ್ಲಿ ಬಂದ ಭಕ್ತರು 

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಚಂಗಾಳ್ವರ ನಾಡಿನ ಅಧಿದೇವತೆ, ಪಿರಿಯಾಪಟ್ಟಣದ ಗ್ರಾಮದೇವತೆ ಶ್ರೀ ಮಸಣೀಕಮ್ಮನವರ (ಪಿರಿಯಾಪಟ್ಟಣದಮ್ಮ) ಜಾತ್ರಾ ಮಹೋತ್ಸವವು ಗುರುವಾರ ಸಂಭ್ರಮ ಸಡಗರದಿಂದ  ಸಾವಿರಾರು ಭಕ್ತಧಿಗಳ ನಡುವೆ ವಿಜೃಂಭಣೆಯಿಂದ ನಡೆಯಿತು.

ಕಳೆದ 15 ದಿನಗಳ ಹಿಂದೆಯೇ ದೇವಾಲಯದ ವಿಧಿವಿಧಾನದಂತೆ ಮುಹೂರ್ತ ಕಾರ್ಯ ನೆರವೇರಿಸಿದ ನಂತರ ಪ್ರತಿದಿನ ದೇವಾಲಯದಲ್ಲಿ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿ ಕಳೆದ ಸೋಮವಾರದಿಂದ ಬೆಳಿಗಿನ ಜಾವ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಕೈಂಕರ್ಯ ಹಾಗೂ ವಿಶೇಷ ಪೂಜೆ ಹೋಮ ಹವನಾದಿಗಳು ನಡೆದಿದ್ದು. ಗುರುವಾರ ಬೆಳಗ್ಗೆ 10.30ರಿಂದ 12.15 ಗಂಟೆಯೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ಮಸನೀಕಮ್ಮನವರ ಬ್ರಹ್ಮರಥೋತ್ಸವವನ್ನು ಭಕ್ತ ಸಾಗರದ ನಡುವೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹೂಗಳಿಂದ ಅಂಲಕೃತಗೊಂಡ ರಥದಲ್ಲಿ ಮಸಣೀಕಮ್ಮ ದೇವಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮುಖಾಂತರ ಮೆರವಣಿಗೆ ನಡೆಸಲಾಯಿತು. ನಂತರ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನೆರೆದಿದ್ದ ಸಾವಿರಾರು ಭಕ್ತರು ಭಕ್ತಿಪರವಶತೆಯಿಂದ ತೇರನ್ನು ಎಳೆದು ಪುನೀತರಾದರು.

ಹರಿದು ಬಂದ ಭಕ್ತಸಾಗರ
ಪಿರಿಯಾಪಟ್ಟಣ ತಾಲೂಕಿನ ಅಧಿದೇವತೆಯಾದ ಶ್ರೀ (ಮಸಣೀಕಮ್ಮ) ದೇವರ ರಥೋತ್ಸವಕ್ಕೆ ಹೊರ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸರದಿ ಸಾಲಿನಿಂದ ದೇವಾಲಯದ ಅವರಣ ಜನಜಂಗುಳಿಯಿಂದ ಕೂಡಿತ್ತು.

ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ
ಪಟ್ಟಣದ ಬಿ.ಎಂ.ರಸ್ತೆಯ ಉಪ್ಪಾರಗೇರಿ ಗೇಟ್ ನಿಂದ ಹಿಡಿದು ಪಟ್ಟಣದ ಬೆಟ್ಟದಪುರ ವೃತ್ತದ ವರೆಗೆ ಪಟ್ಟಣದ ಉಪ್ಪಾರ ಬೀದಿ, ಒಳಕೋಟೆ, ಕರಿಬಸಪ್ಪ ಬಡಾವಣೆ, ದೇವೇಗೌಡನ ಕೊಪ್ಪಲು, ಮಸಣಿಕೇರಿ, ಕೆ.ವೆಂಕಟೇಶ್ ಅಭಿಮಾನಿ ಬಳಗ, ಆಟೋ ಚಾಲಕರ ಸಂಘ, ಪಿರಿಯಾಪಟ್ಟಣ ತರಕಾರಿ ಮಾರಾಟಗಾರರ ಸಂಘ, ಜೈನ್ ಸಮಾಜದ ಬಂಧುಗಳು ಹಾಗೂ ವಿವಿಧ ಭಾಗಗಳಿಂದ ಜಾತ್ರೆಗೆ ಬಂದಿದ್ದ ಅಮ್ಮನವರ ಭಕ್ತರು ಸೇರಿದಂತೆ ನೂರಾರು ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಜಾತ್ರೆಗೆ ಬಂದ ಭಕ್ತ ಸಮೂಹಕ್ಕೆ  ಅನ್ನದಾನ ಮತ್ತು ಪ್ರಸಾದ ವಿನಿಯೋಗ, ಬಾತು, ಮೊಸರನ್ನ, ಪುಳಿಯೋಗರೆ, ಮಜ್ಜಿಗೆ, ಪಾನಕ, ಕಲ್ಲಂಗಡಿ ಹಣ್ಣು ಮೈಸೂರು ಪಾಕ್, ಜಿಲೇಬಿ ಮತ್ತು ತಿಂಡಿ ವಿತರಿಸಿದರು.

ಬೆಟ್ಟದಪುರ ಸರ್ಕಲ್ ಯುವಕರ ಸಂಘ ಸೇರಿದಂತೆ ಹಲವು ಕಡೆಗಳಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಹಲವೆಡೆ ಪಾನಕ ಮಜ್ಜಿಗೆ ವಿತರಣೆ ಮಾಡಿದರಲ್ಲದೆ ಹಲವೆಡೆ ಜ್ಯೂಸ್ ಮತ್ತು ಐಸ್ಕ್ರೀಂಗಳನ್ನು ವಿತರಣೆ ಮಾಡುವ ಮೂಲಕ ದೇವರಿಗೆ ತಮ್ಮ ಭಕ್ತಿ ಮತ್ತು ಹರಕೆ ಸಮರ್ಪಿಸಿದರು.

ಸಂಚಾರ ನಿಯಂತ್ರಸಿಸಲು ಬಿಗಿ ಬಂದುಬಸ್ತ್
ಜಾತ್ರಾ ಮಹೋತ್ಸವಸ ಅಂಗವಾಗಿ ಬೆಳಿಗ್ಗಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಬರುತ್ತಿದ್ದ ಕಾರಣ ದೇವಾಲಯದ ಆವರಣ, ಸಂತೆಮಾಳ ಹಾಗೂ ಬಿ.ಎಂ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮದ್ಯಾಹ್ನ ರಥ ಬಿ.ಎಂ.ರಸ್ತೆಗೆ ಬಂದ ಕೂಡಲೇ ಮೈಸೂರು-ಮಡಿಕೇರಿ ಮುಖ್ಯರಸ್ತೆಯಲ್ಲಿ ಸಾಗರದರೀತಿಯಲ್ಲಿ ಜನಸಂದಣೆ ತುಂಬಿಹೋಯಿತು. ರಥವನ್ನು ಬಿ.ಎಂ.ರಸ್ತೆಯ ಬದಿಯಲ್ಲಿಯೇ ನಿಲುಗಡೆ ಮಾಡಿದ್ದರ ಪರಿಣಾಮ ಬಿ.ಎಂ.ರಸ್ತೆ ಭಾಗಶಃ ಬಂದ್ ಆಗಿತ್ತಾದರೂ. ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಕೈಗೊಂಡು ಪಾದಯಾತ್ರಿಗಳು, ವಾಹನ ಚಾಲಕರು ಸಂಚರಿಸಲು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅನುವು ಮಾಡಿಕೊಟ್ಟರು.

ಅಮ್ಮನವರ ಉತ್ಸವ ಹಾಗೂ ಮೆರವಣಿಗೆ
ಶ್ರೀ ಮಸಣೀಕಮ್ಮನವರ ಉತ್ಸವವು ಗುರುವಾರ ಸಂಜೆಯಿಂದ ಪಟ್ಟಣದಲ್ಲಿ ಹಾಗೂ ಮಾ.19ರ ಶುಕ್ರವಾರರಂದು ಪಟ್ಟಣದ ಒಳಕೋಟೆ, ಕರಿಬಸಪ್ಪ ಬಡಾವಣೆ, ಪೇಟೆಬೀದಿ, ಸಣ್ಣಯ್ಯನಬೀದಿ, ಬಿ.ಎಂ.ರಸ್ತೆ, ದೇವೇಗೌಡನಕೊಪ್ಪಲು, ಉಪ್ಪಾರಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿ ಮಾ.20 ರ ಶನಿವಾರರಂದು ರಾತ್ರಿ 8 ಗಂಟೆಗೆ ಪಟ್ಟಣದ ಚಿಕ್ಕಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್