Vijayapatha – ವಿಜಯಪಥ
Friday, November 1, 2024
Breaking NewsNEWSನಮ್ಮಜಿಲ್ಲೆ

ಕಲಬುರಗಿ: ಮನೆಮನೆಗೆ ತೆರಳಿ ಕೋವಿಡ್‌ ಲಸಿಕೆ – ಜಿಲ್ಲಾಡಳಿತ ಅಭಿಯಾನಕ್ಕೆ NEKRTC ಸಾಥ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಕಲಬುರಗಿ: ಜಿಲ್ಲೆಯ ಕೆಲ ತಾಂಡಾ ಮತ್ತು ಹಳ್ಳಿಗಳಲ್ಲಿ ಇನ್ನು ಒಬ್ಬರು ಕೂಡಾ ಲಸಿಕೆ ಹಾಕಿಸಿಕೊಂಡಿಲ್ಲಾ. ಹೀಗಾಗಿ ಜನರ ಮನೆಬಾಗಿಲಿಗೆ ಹೋಗಿ ಲಸಿಕೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತದ ಈ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( NEKRTC) ಹೆಗಲು ನೀಡಿದ್ದು, ಲಸಿಕಾ ಬಸ್​ಗಳನ್ನು ಸಿದ್ಧಗೊಳಿಸಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇನ್ನು ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ. ಬೇರೆ ರೀತಿಯ ಸಮಸ್ಯೆಗಳು ಬರುತ್ತವೆ ಎನ್ನುವ ಕಲಬುರಗಿ ಜನರಲ್ಲಿ ಇದೆ. ಜತೆಗೆ ಇನ್ನು ಕೆಲವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಹೋಗಲು ಸರಿಯಾದ ವಾಹನಗಳ ವ್ಯವಸ್ಥೆ ಇಲ್ಲಾ. ಬಸ್​ಗಳು ಬಂದಾಗಿರೋದರಿಂದ ಜನರಿಗೆ ಮನೆಯಿಂದ ಹೊರಬರಲು ತೊಂದರೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಆಳಂದ ತಾಲೂಕಿನ 1 ಹಳ್ಳಿ, 10 ತಾಂಡಾ ಮತ್ತು ಅಫಜಲಪುರ ತಾಲೂಕಿನ 11 ಹಳ್ಳಿ 4 ತಾಂಡಾಗಳ ಜನರು ಇಲ್ಲಿವರಗೆ ಲಸಿಕೆಯನ್ನೆ ಹಾಕಿಸಿಕೊಂಡಿಲ್ಲಾ.

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗ್ರಾಮಗಳು ದೂರ ಇರುವುದರಿಂದ ಜನರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಂಡಿಲ್ಲಾ. ಹೀಗಾಗಿ ಜಿಲ್ಲೆಯಲ್ಲಿ 21 ಲಕ್ಷ ಜನರಿಗೆ ಲಸಿಕೆ ಹಾಕಬೇಕು. ಆದರೆ ಇಲ್ಲಿವರಗೆ ಸರಿಸುಮಾರು 4 ಲಕ್ಷ ಜನರು ಮಾತ್ರ ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾಡಿತ ತಿಳಿಸಿದೆ.

ಜನರ ಮನೆ ಬಾಗಿಲಿಗೆ ಲಸಿಕಾ ವಾಹನ
ಗ್ರಾಮೀಣ ಭಾಗದ ಜನರು ಲಸಿಕಾ ಕೇಂದ್ರಕ್ಕೆ ಬಂದು ಹೋಗಲು ಸರಿಯಾದ ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ಜನರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಮೂಲಕ ಗ್ರಾಮೀಣ ಭಾಗದಲ್ಲಿ ಲಸಿಕಾಕರಣಕ್ಕೆ ವೇಗವನ್ನು ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಅದಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಬಸ್​ಗಳನ್ನು ನೀಡುವಂತೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರಿಗೆ ಜಿಲ್ಲಾಡಳಿತ ಮನವಿ ಮಾಡಿತ್ತು. ಮನವಿಯನ್ನು ಪರಿಗಣಿಸಿರುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕೇವಲ 24 ಗಂಟೆಯಲ್ಲಿ ಎರಡು ಬಸ್​ಗಳನ್ನು ಲಸಿಕಾ ವಾಹನಗಳನ್ನಾಗಿ ಪರಿವರ್ತಿಸಿದೆ. ಹೀಗಾಗಿ ಇಂದು ಕಲಬುರಗಿ ಜಿಲ್ಲಾಡಳಿತಕ್ಕೆ ಎರಡು ಬಸ್​ಗಳನ್ನು ಸಂಸ್ಥೆಯಿಂದ ನೀಡಲಾಗುತ್ತಿದ್ದು, ನಾಳೆ ಲಸಿಕಾ ಬಸ್​ಗಳಿಗೆ ಚಾಲನೆ ಸಿಗಲಿದೆ.

ಬಸ್​ಗಳು ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೂರದಲ್ಲಿರುವ ಹಳ್ಳಿಗಳು, ತಾಂಡಾಗಳಿಗೆ ಮೊದಲು ಹೋಗಲಿವೆ. ಅನೇಕರಿಗೆ ಆಸ್ಪತ್ರೆಗೆ ಬಂದು ಲಸಿಕೆ ಹಾಕಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲಾ. ಹೀಗಾಗಿ ಜನರ ಮನೆಬಾಗಿಲಿಗೆ ಹೋಗಿ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಸಾರಿಗೆ ಸಂಸ್ಥೆಯ ಬಸ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ತಿಳಿಸಿದ್ದಾರೆ.

ಆಸ್ಪತ್ರೆ ರೀತಿ ಸಿದ್ಧವಾಗಿರುವ ಬಸ್​ಗಳು
ಜಿಲ್ಲಾಡಳಿತ ನಮ್ಮ ಸಂಸ್ಥೆಗೆ ಲಸಿಕಾ ವಾಹನಗಳನ್ನು ಸಿದ್ಧಗೊಳಿಸಿ ನೀಡಲು ಹೇಳಿತ್ತು. ಅದರಂತೆ ಕೇವಲ 24 ಗಂಟೆಯಲ್ಲಿ ನಮ್ಮ ಸಿಬ್ಬಂದಿ, ಸಾರಿಗೆ ಬಸ್​ಗಳನ್ನು ಲಸಿಕಾ ಬಸ್​ಗಳನ್ನಾಗಿ ಮಾರ್ಪಾಟು ಮಾಡಿದ್ದಾರೆ. ಜಿಲ್ಲಾಡಳಿತ ಕೇಳಿದರೆ ಇನ್ನು ಕೂಡಾ ಹೆಚ್ಚಿನ ಬಸ್​ಗಳನ್ನು ನೀಡುತ್ತೇವೆ. ಗ್ರಾಮೀಣ ಭಾಗದ ಜನರಿಗೆ ಲಸಿಕೆಗಳು ಸಿಗಲು ನಮ್ಮ ಸಂಸ್ಥೆ ಕೂಡಾ ಪ್ರಯತ್ನ ಮಾಡುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜುಕಮಾರ್ ಪಾಟೀಲ್ ತಿಳಿಸಿದ್ದಾರೆ.

ಸಾರಿಗೆ ಸಂಸ್ಥೆಯ ಕಲಬುರಗಿ ನಗರದ ವರ್ಕ್ ಶಾಪ್​ನಲ್ಲಿ ಎರಡು ಲಸಿಕಾ ಬಸ್​ಗಳನ್ನು ಸಿದ್ಧಗೊಳಿಸಲಾಗಿದೆ. ವಿಶೇಷವೆಂದರೆ, ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೇಂದ್ರದ ರೀತಿಯಲ್ಲಿಯೇ ಬಸ್​ಗಳನ್ನು ಸಿದ್ಧಪಡಿಸಲಾಗಿದೆ. ಆಸ್ಪತ್ರೆಯಲ್ಲಿರುವಂತೆ ನೋಂದಣಿ, ವೇಟಿಂಗ್​ ರೂಮ್, ಲಸಿಕಾ ಕೋಣೆ, ಅಬ್ಸ್​​ರ್​ವೇಶನ್ ರೂಮ್​ನಂತೆ ಬಸ್​ನಲ್ಲಿ ಕೂಡಾ ವ್ಯವಸ್ಥೆ ಮಾಡಲಾಗಿದೆ. ಬಸ್​ನಲ್ಲಿ ಓರ್ವ ವೈದ್ಯ ಮತ್ತು ನರ್ಸಿಂಗ್ ಸ್ಟಾಫ್ ಕೂಡಾ ಇರಲಿದ್ದಾರೆ.

ಬಸ್​ನ ಚಾಲಕ ಕೂಡಾ ಸಂಸ್ಥೆಯವರೇ ಇರಲಿದ್ದಾರೆ. ಬಸ್​ನ ಡೀಸೆಲ್ ಕೂಡಾ ಸಂಸ್ಥೆ ವತಿಯಿಂದಲೇ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆಯವರು ವ್ಯಾಕ್ಸಿನ್ ಮತ್ತು ಆರೋಗ್ಯ ಸಿಬ್ಬಂದಿಯನ್ನು ಮಾತ್ರ ನೀಡಲಿದ್ದಾರೆ. ಬಸ್​ಗಳು ಮುಂಜಾನೆ ಆರು ಗಂಟೆಯಿಂದ ರಾತ್ರಿವರಗೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚರಿಸಲಿವೆ. ಕಳೆದ ತಿಂಗಳು ಸಂಸ್ಥೆ, ಆಕ್ಸಿಜನ್ ಬಸ್​ಗಳನ್ನು ಸಿದ್ಧ ಮಾಡಿ ಜಿಲ್ಲಾಡಳಿತಕ್ಕೆ ನೀಡಿತ್ತು. ಅವು ಕೂಡಾ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿವೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ