ಬೆಂಗಳೂರು: ಈಗ ನಡೆಯುತ್ತಿರುವ ಎರಡೂ ಕ್ಷೇತ್ರಗಳ ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ. ಜತೆಗೆ ನನ್ನ ಮಾತಿಗೆ ಗೌರವ ಸಿಗುತ್ತದೆ ಅನ್ನೋ ವಿಶ್ವಾಸ ನನಗೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಕಡೆ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ. ಬಸವಕಲ್ಯಾಣದಲ್ಲೂ ನಾವು ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ.
ನಾರಾಯಣರಾವ್ ನನ್ನ ಶಿಷ್ಯನೇ ಆಗಿದ್ದಾನೆ. ಆದರೆ ನಾನು ಯಾರನ್ನು ಜಾತಿ ಮೇಲೆ ಬೆಳೆಸಲಿಲ್ಲ. ಅವತ್ತು ಕೂಬಾ ಅನ್ನೋರನ್ನ ಚುನಾವಣೆ ನಿಲ್ಲಲು ಹೇಳಿದ್ದೆವು. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದು ಯಾವುದೇ ಜಾತಿ ಆಧಾರದಲ್ಲಿ ಹಾಕಿಲ್ಲ ಎಂದು ಹೇಳಿದರು.
ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇ ತ್ರ ಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಮಾಡಿಕೊಡಲು ಜೆಡಿಎಸ್ ಮುಸ್ಲಿಂ ಅಭ್ಯ ರ್ಥಿಗಳನ್ನು ಕಣಕ್ಕಿ ಳಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಮ್ಮ ಅಭ್ಯ ರ್ಥಿಗಳನ್ನು ಕಾಂಗ್ರೆಸ್‌ನವರು ಹೊತ್ತೊಯ್ದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.
ಸಿಂದಗಿಯಲ್ಲಿ ಎಂ.ಸಿ. ಮನಗೂಳಿ ಅವರಿಗೆ ಅವಕಾಶ ನೀಡಿದ್ದೇ ನಾನು. ಸಂಕಷ್ಟದಲ್ಲೂ ಅವರನ್ನು ಮಂತ್ರಿ ಮಾಡಿದ್ದೆವು. ಮನೆಯ ಮಗನಂತೆ ಬೆಳೆಸಿದ್ದೆ . ಆದರೆ, ಅವರ ಮಗ ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಕಾಂಗ್ರೆಸ್‌ನವರಿಗೆ ನಮ್ಮ ಅಭ್ಯ ರ್ಥಿಯೇಬೇಕಾ ಎಂದು ಕೇಳಿದರು.
ನೀವು ನಮ್ಮ ಅಭ್ಯ ರ್ಥಿಯನ್ನು ಹೊತ್ತುಕೊಂಡುಹೋದರೆ ನಾವು ಸುಮ್ಮನಿರಬೇಕಾ? ಬಿಜೆಪಿಯನ್ನು ಗೆಲ್ಲಿಸಲು ಮುಸ್ಲಿಂ ಅಭ್ಯ ರ್ಥಿ ಕಣಕ್ಕಿಳಿಸಿದ್ದೇವೆ ಎಂಬುದು ಸುಳ್ಳು. ನಮ್ಮ ಅಭ್ಯ ರ್ಥಿಯನ್ನು ನಾವು ಸ್ಪರ್ಧೆಗಿಳಿಸಿದ್ದೇವೆ’ ಎಂದರು.
ಮುಸ್ಲಿಮರನ್ನು ನೀವು ಗುತ್ತಿಗೆಗೆ ಪಡೆದಿಲ್ಲ. ನಾನು ಬೆಳೆಸಿದ ಮುಸ್ಲಿಂ ಮುಖಂಡ ಈಗ ನಿಮಗೆ ಬಲಗೈ ಆಗಿ ಶಕ್ತಿ ತುಂಬಿದ್ದಾರೆ. ಅವರಿಗೆ ಬಲಗೈ ಬಂಟ ಎನ್ನುವುದಿಲ್ಲ ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ ಖಾನ್ ವಿಷಯ ಪ್ರಸ್ತಾಪಿಸಿದರು.
2023ರ ಚುನಾವಣೆಗೆ ಮುಸ್ಲಿಂಮರ ಒಲೈಕೆಗೆ ನಾವು ಮುಸ್ಲಿಂರಿಗೆ ಟಿಕೆಟ್ ಕೊಟ್ಟಿಲ್ಲ. ಎರಡು ಕ್ಷೇತ್ರದ ಸನ್ನಿವೇಶ ನಾನು ಈಗಾಗಲೇ ಹೇಳಿದ್ದೇನೆ. ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ.
ಇನ್ನು ರಾಮನಗರ, ಮಂಡ್ಯ, ಹಾಸನದಲ್ಲಿ ಯಾಕೆ ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ನಮಗೆ ಈ ಕ್ಷೇತ್ರದಲ್ಲಿ ಸರಿಯಾದ ಅಭ್ಯರ್ಥಿ ಸಿಗಲಿಲ್ಲ ಅದಕ್ಕೆ ಹಾಕಿಲ್ಲ. ಆದರೆ ಎಂಎಲ್ಸಿ ಮಾಡಿದ್ದೇವೆ.
ಜಮೀರ್‌ಗೆ ಟಿಕೆಟ್ ಕೊಟ್ಟಿದ್ದೇವೆ, ಇಬ್ರಾಹಿಂ ಸ್ಥಾನ ಕೊಟ್ಟಿದ್ದೇವೆ. ನನ್ನ ಬಳಿ ಮಾತಾಡೋವಾಗ ಯೋಚನೆ ಮಾಡಿ ಮಾತಾಡಬೇಕು. ಇವತ್ತು ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ನೋಡಿ.
ನೆಹರು ಕಾಲದ ಕಾಂಗ್ರೆಸ್ ಏನಾಗಿದೆ ನೋಡಿ. ನಾನು ಯಾರ ಬಗ್ಗೆಯೂ ಮಾತಾಡೊಲ್ಲ. ಯಾವ ಮುಸ್ಲಿಂ ನಾಯಕನ ಬಗ್ಗೆಯೂ ನಾನು ಮಾತಾಡಿಲ್ಲ. ಜಮೀರ್ ಬಗ್ಗೆಯೂ ಮಾತಾಡಿಲ್ಲ. ಬಿಜೆಪಿ ಗೆಲ್ಲಿಸೋಕೆ ನಾವು ಅಭ್ಯರ್ಥಿ ಹಾಕಿಲ್ಲ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.