ಬಳ್ಳಾ ರಿ: ಮುಂದಿನ ವಿಧಾನಸಭಾ ಚುನಾವಣೆಗೂ ಈಗ ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ವೀರಶೈವ ವಿದ್ಯಾ ವರ್ಧಕ ಸಂಘಕ್ಕೆ ಉದ್ಯಮಿ ಎಸ್.ಕೆ. ಮೋದಿ ದಾನವಾಗಿ ನೀಡಿರುವ ನ್ಯಾಷನಲ್ ಸ್ಕೂಲ್ ಮತ್ತು ಕಿಂಡರ್ ಗಾರ್ಟನ್ ಶಾಲೆಯನೂತನ ಕಟ್ಟ ಡಗಳ ಉದ್ಘಾ ಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೃರೊಂದಿಗೆ ಮಾತನಾಡಿದರು.
ನಂಜನಗೂಡು ಮತ್ತು ಚಾಮರಾಜನಗರ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಂದಿನ ಚುನಾವಣೆಯಲ್ಲಿ ಅದಕ್ಕೆ ಸೋಲಾಯಿತು. ಹಾನಗಲ್ ಬಿಜೆಪಿ ಕ್ಷೇತ್ರ , ಸಿಂದಗಿ ಜೆಡಿಎಸ್ ಗೆದ್ದಿರುವ ಕ್ಷೇತ್ರ . ಇವೆರಡೂ ಕಡೆ ಬಿಜೆಪಿ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮುಖ್ಯ ಮಂತ್ರಿ ಭವಿಷ್ಯ ನುಡಿದರು.
ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುವುದೋ ಆ ಪಕ್ಷದಲ್ಲಿ ಆಕಾಂಕ್ಷಿ ಗಳ ಪಟ್ಟಿ ದೊಡ್ಡ ದಿರುತ್ತದೆ. ನಮ್ಮದು ಬೂತ್ ಮಟ್ಟದಿಂದ ಹಿಡಿದು ಕೇಂದ್ರ ಮಟ್ಟ ದವರೆಗೂ ಶಿಸ್ತಿನ ಪಕ್ಷ. ನಾವುಮಾಡುವ ತೀರ್ಮಾನಕ್ಕೆ ಪಕ್ಷದ ಕಾರ್ಯಕರ್ತರು, ನಾಯಕರು ಬದ್ಧ ರಾಗಿ, ಒಟ್ಟಾಗಿ ಕೆಲಸಮಾಡುತ್ತಾರೆ ಎಂದರು.