ಪಿರಿಯಾಪಟ್ಟಣ: ದನ ತೊಳೆಯುವಾಗ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಹಸುವಿನ ಕಾವಲು ಗ್ರಾಮದ ಬೀರೇಗೌಡನ ಮಗ ದರ್ಶನ್ (21) ಮತ್ತು ಮೈಲಾರೇಗೌಡರ ಮಗ ರಂಜಿತ್ (19) ಎಂಬುವರೇ ಮೃತಪಟ್ಟ ಯುವಕರು.
ಹಸುವಿನ ಕಾವಲು ಗ್ರಾಮದ ಬಾಲಕೆರೆಯಲ್ಲಿ ಸೋಮವಾರ ಮಧ್ಯಾಹ್ನ 12ರ ಸಮಯದಲ್ಲಿ ತಮ್ಮದೇ ದನಗಳ ಮೈ ತೊಳೆಯಲು ಹೋಗಿ ಸಾವನ್ನಪ್ಪಿದ್ದಾರೆ.
ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ದೇಹಗಳನ್ನು ಕುಟುಂಬದವರಿಗೆ ಒಪ್ಪಿಸಲಾಯಿತು.
ಪ್ರಕರಣ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.