NEWSನಮ್ಮಜಿಲ್ಲೆ

ರೈತರ ಪರ ಮಾತನಾಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಯೋಗ್ಯತೆ ಇಲ್ಲ: ಕರ್ನಾಟಕ ಪ್ರಾಂತ ರೈತ ಸಂಘ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಮಳವಳ್ಳಿ: ಬ್ರಿಟಿಷರಿಂದ ಹಿಡಿದು ಬಂಡವಾಳಶಾಹಿವರೆಗೂ ಬಿಜೆಪಿಯದು ಬ್ರೋಕರ್ ಸಂಸ್ಕೃತಿನೆ. ರೈತರ ಪರ ದೇಶಪ್ರೇಮಿ ಹೋರಾಟದ ಬಗ್ಗೆ ಮಾತನಾಡಲು ಶೋಭಾ ಕರಂದ್ಲಾಜೆಗೆ ಯಾವ ಯೋಗ್ಯತೆಯು ಇಲ್ಲವೆಂದು ಕರ್ನಾಟಕ ಪ್ರಾಂತ ರೈತ ಸಂಘ ಕಿಡಿಕಾರಿದೆ.

ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಶೋಭ ಕರಾಂದ್ಲಾಜೆ ರಾಜಿನಾಮೆ ನೀಡಬೇಕೆಂದು ಮಳವಳ್ಳಿಯಲ್ಲಿ ಪ್ರಾಂತ ರೈತ ಸಂಘ ಡಿವೈಎಫ್‌ಐ ಸಂಘಟನೆಗಳು ಹಮ್ಮಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರತ್ ರಾಜ್, ಇವರಿಗೆ ರೈತ ಕಾರ್ಮಿಕ ಮಹಿಳೆಯರು ಹಾಗೂ ದೇಶಪ್ರೇಮಿ ಹೋರಾಟ ನಡೆಸಿದ ಹಿನ್ನೆಲೆಯಿಲ್ಲದ ಶೋಭಾ ಕರಂದ್ಲಾಜೆಗೆ ರೈತ ಚಳವಳಿಯ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದರು.

ಒಕ್ಕೂಟ ಸರ್ಕಾರ ಲೂಟಿಕೋರ ಕಾರ್ಪೊರೇಟ್‌ ಕಂಪನಿಗಳ ಪರವಾದ ರೈತ ಕಾರ್ಮಿಕ ವಿರೋಧಿ, ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ , ವಿದ್ಯುತ್ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಮರಣಶಾಸನ ಬರೆದಿದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡದ ಸರ್ಕಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೆಹಲಿಯಲ್ಲಿ 9 ತಿಂಗಳಿಂದ ಹೋರಾಟ ನಡೆಸುತ್ತಿರುವ ಸ್ವಾತಂತ್ರ್ಯ ನಂತರದ ಐತಿಹಾಸಿಕ ಚಳವಳಿಯನ್ನು ಅಪಮಾನ ಮಾಡಿರುವ ಕರಾಂದ್ಲಾಜೆ ಈ ನಾಡಿನ ಮಂತ್ರಿಯಾಗಲು ಜನಪ್ರತಿನಿಧಿಯಾಗಲು ಯೋಗ್ಯತೆಯಿಲ್ಲ. ಹಾಗಾಗಿ ರಾಜೀನಾಮೆ ನೀಡಿ ರೈತರನ್ನು ಅಪಮಾನ ಮಾಡಿರುವುದರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ನರೇಂದ್ರ ಮೋದಿ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳಲ್ಲಿ ರೈತರ ಆದಾಯ ದ್ವೀಗುಣಗೊಳಿಸುವುದು ಡಾ. ಸ್ವಾಮಿನಾಥನ್ ವರದಿ ಆಧಾರದ ಮೇಲೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಮಾಡುವುದು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದು, ಕಪ್ಪು ಹಣ ತಂದು ತಲಾ ಕುಟುಂಬಕ್ಕೆ 15 ಲಕ್ಷ ಹಣ ಹಾಕುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದು ದೇಶದ ಜನತೆಗೆ ವಂಚನೆ ಮಾಡಿದ್ದಾರೆ.

ಈಗ ಕಾರ್ಪೊರೇಟ್ ಕುಳಗಳಾದ ಗೌತಮ್ ಅದಾನಿ, ಅನಿಲ್ ಅಂಬಾನಿ, ಕಿಸಾನ್ ದಮಾನಿ ಇಂಥವರಿಗೆ ಬ್ರೋಕರ್ ಆಗಿ ಸಾರ್ವಜನಿಕ ಕಂಪನಿಗಳನ್ನು ಕವಡೆ ಕಾಸಿಗೆ ಮಾರಾಟ ಮಾಡಿ ನಿರುದ್ಯೋಗ, ಬಡತನ, ಹಸಿವು, ಆತ್ಮಹತ್ಯೆ ಮಾಡಿಕೊಳ್ಳುವ ದಾರಿಯನು ಬಿಜೆಪಿಯ ನರೇಂದ್ರ ಮೋದಿ ಸರ್ಕಾರ ತೋರಿಸುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಆನಂದ್, ಲಿಂಗರಾಜ್ ಆನಂದಸ್ವಾಮಿ ಡಿ ಕೆ ಹಳ್ಳಿ, ಶಿವಪ್ಪ, ಡಿವೈಎಫ್ ಐನ ಗುರುಸ್ವಾಮಿ, ಶಿವಕುಮಾರ್, ಮರಿಗೌಡ, ಚನ್ನಬಸಪ್ಪ. ಮಯೂರ, ಡಿಎಸ್ಎಸ್ ನ ಮಹೇಶ್, ಯತೀಶ್, ಜಯರಾಜ್, ಪ್ರಸಾದ್, ಡಿಎಚ್ಎಸ್ ನ ಶಂಕರ್, ಮಲ್ಲಿಕಾರ್ಜುನ ಮತ್ತಿತರರು ಇದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ