ಮೈಸೂರು: ತಾಲೂಕಿನ ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿರುವ ಜ್ವಾಲಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಹತ್ತಿರ ಮದ್ಯದಂಗಡಿ ತೆರೆಯುವುದನ್ನು ಖಂಡಿಸಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯದಂಗಡಿಯನ್ನು ತೆರೆಯಲು ಪರವಾನಗಿ ನೀಡಬಾರದು ಎಂದು ಗ್ರಾಮಸ್ಥರು ಜಿಲ್ಲಾಡಳಿ, ಅಬಕಾರಿ ಇಲಾಖೆ ಹಾಗೂ ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದಾರೆ.
ಪ್ರತಿದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಪೂಜೆಗೆ ಬರುತ್ತಾರೆ. ಹೀಗಿರುವಾಗ ದೇವಸ್ಥಾನದ ಕಮಾನ್‌ಗೇಟ್ ಬಳಿಯೇ ಮದ್ಯದಂಗಡಿ ತೆರೆಯುವುದು ಸರಿಯಲ್ಲ. ಇದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತದೆ. ಹೀಗಾಗಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎಪಿಎಂಸಿ ಅಧ್ಯಕ್ಷ ಬಸವರಾಜು, ಉತ್ತನಹಳ್ಳಿ ಕೆ.ಶಿವಣ್ಣ, ಗ್ರಾಪಂ ಮಾಜಿ ಸದಸ್ಯರಾದ ಶಿವಬೀರ, ರಂಗಸ್ವಾಮಿ, ಬಸವರಾಜು, ಲಿಂಗರಾಜು, ಪಿಯು ಕಾಲೇಜು ಪ್ರಾಂಶುಪಾಲ ನಂಜುಂಡಸ್ವಾಮಿ.
ಗ್ರಾಮಸ್ಥರಾದ ದೇವರಾಜು, ಕುಳ್ಳೇಗೌಡ, ಜಿ.ಗೋಪಿ, ಚಿಕ್ಕವೀರಯ್ಯ, ಹೆಬ್ಬಾಳೆಗೌಡ, ಗುಡ್ಡಪ್ಪ ಶಿವಣ್ಣ, ಶಿವರಾಮು, ಅಶ್ವಿನಿ ರೇವಣ್ಣ, ಯಶವಂತಕುಮಾರ್, ಪಿ.ರಾಜು, ಅಣ್ಣಪ್ಪ, ಮಂಜು, ಪಂಟಿ, ಏಳಿಗೆಹುಂಡಿ ಶಿವಣ್ಣ, ಡಿ.ಚಂದ್ರ ಇತರರು ಪ್ರತಿಭಟನೆಯಲ್ಲಿಇದ್ದರು.