Please assign a menu to the primary menu location under menu

CrimeNEWSನಮ್ಮಜಿಲ್ಲೆನಮ್ಮರಾಜ್ಯ

15 ವರ್ಷದ ಹಿಂದೆ ಪತಿ ಕೊಲೆ ಮಾಡಿ ಮನೆಯಲ್ಲೇ ಹೂತುಹಾಕಿದ್ದ ಪತ್ನಿ ಸೇರಿ ಐವರ ಬಂಧನ

15 ವರ್ಷದ ಬಳಿಕ ಕೊಲೆ ವಿಷಯ ಮಗಳಿಂದಲೇ ಬಯಲಾಯಿತು   

ವಿಜಯಪಥ ಸಮಗ್ರ ಸುದ್ದಿ

ಗಂಗಾವತಿ: ಪತಿಯ ಕಿರುಕುಳಕ್ಕೆ ಪತ್ನಿ ಬೇಸತ್ತು ಅಥವಾ ನೊಂದು ಇಲ್ಲ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಇಲ್ಲ ಪತಿ ಸೇರಿ ಅವರ ಕುಟುಂಬದವರು ಕೊಲೆ ಮಾಡುವ ಹಲವಾರು ಸತ್ಯ  ಘಟನೆಗಳು ನಮ್ಮ ಎದುರಿಗಿವೆ.

ಅಲ್ಲದೇ ಪತಿಯನ್ನು ಕೊಲೆ ಮಾಡಿ ಎಲ್ಲೋ ದೂರಲ್ಲಿ ಬಾಡಿಯನ್ನು ಎಸೆದೋ ಅಥವಾ ಹೂತುಹಾಕಿ ಬರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ವಿಶೇಷ ಮತ್ತು ವಿಚಿತ್ದರ ಜತೆಗೆ ಆಶ್ಚರ್ಯಕರವಾದ ಘಟನೆಯೊಂದು ಅದರಲ್ಲೂ ಸತ್ಯ ಘಟನೆಯೊಂದು ಜರುಗಿರುವುದನ್ನು ನಿಮಗೇ ಹೇಳಲೇ ಬೇಕಿದೆ.

ಅದೆಂದರೆ. ಪತಿಯನ್ನು ಐದು ಜನರೊಂದಿಗೆ ಸೇರಿಕೊಂಡು ಹತ್ಯಮಾಡಿ ಬಳಿಕ ಆ ಮೃತದೇಹವನ್ನು ಮನೆಯಿಂದ ಹೊರಗೇ ತರದೆ ಮಣ್ಣು ಮಾಡಿರುವುದು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಹೌದು ಗಂಗಾವತಿಯಲ್ಲೊಬ್ಬಳು ಕಿರಾತಕಿ ತನ್ನ ಪತಿಯನ್ನು ಐದು ಜನರೊಂದಿಗೇ ಸೇರಿಕೊಂಡು ಕೊಲೆ ಮಾಡಿದ್ದಾಳೆ ಬಳಿಕ ಆ ಮೃತ ದೇಹವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋದರೆ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಒಂದು ದೊಡ್ಡ ಉಪಾಯವನ್ನು ಮಾಡಿದ್ದಾಳೆ.  ಮನೆಯಿಂದ ಹೊರಗೆ ಬಾಡಿ ಸಾಗಿಸಿದರೆ ಕಷ್ಟ  ಆದ್ದರಿಂದ ಮನೆಯೊಳಗೆ ಹೂತು ಹಾಕಿದರೆ ಹೇಗೆ ಎಂದು ಯೋಚಿಸಿ ಆ ಕೆಲಸವನ್ನೇ ಮಾಡಿದ್ದಾಳೆ.

ಮನೆಯೊಳಗೆ ಕೊಲೆ ಮಾಡಿದ ಗಂಡನ ಅತ್ಯಕ್ರಿಯೆ ಮಾಡಿ ಮುಗಿಸಿದ ಕಿರಾತಕಿ ಕಂಡು ಕಾಣದಂತೆ ಸುಮ್ಮನಾಗಿದ್ದಾಳೆ. ಇನ್ನು ಈ ವಿಷಯದ ಬಗ್ಗೆ ಯಾರು ಚಕಾರವೆತ್ತಿಲ್ಲ. ಆದರೆ ಇದನ್ನು ಕಂಡಿದ್ದ ಹತ್ಯೆಯಾದವನ ಮಗಳು ಇಂದು ಆ ಸತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ದೂರುಕೂಡ ದಾಖಲಿಸಿ ನಮ್ಮ ತಂದೆಯ ಹತ್ಯೆ ಮಾಡಿದವರಿಗೆ ಶಿಕ್ಷೆಕೊಡಿ ಎಂದು ಬೇಡಿಕೊಂಡಿದ್ದಾರೆ.

ಆಕೆಯ ದೂರನ್ನು ಸ್ವೀಕರಿಸಿದ ಗಂಗಾವತಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಗೀತಾ ಈ ಸಂಬಂಧ ಆರೋಪಿಗಳ ಪತ್ತೆಗೆ ಒಂದು ವಿಶೇಷ ತಂಡವನ್ನು ರಚಿಸಿದ್ದರು.  ಆ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಸದ್ಯ ಐದು ಮಂದಿಯನ್ನು ಕಂಬಿಹಿಂದೆ ನಿಲ್ಲಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಆರೋಪಿಗಳ ಬೇಟೆಯಾಡಿದ ಪೂರ್ಣ ವಿವರ
15 ವರ್ಷದ ಹಿಂದೆ ಜಯನಗರದಲ್ಲಿರುವ ಲಕ್ಷ್ಮೀ ಸಿಂಗ್ ತನ್ನ ಗಂಡ ಪಂಪಾಪತಿ ಅಲಿಯಾಸ್ ಶಂಕರ ಸಿಂಗ್ ಎಂಬುವರನ್ನು ಕೊಲೆ ಮಾಡಿರುವ ಬಗ್ಗೆ ಆಕೆಯ  ಪುತ್ರಿ ವಿದ್ಯಾಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಈ ದೂರಿನ ಮೇರೆಗೆ ಎಸ್ಪಿ ಜಿ.ಸಂಗೀತಾ ಅರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿದರು. ಕಾರ್ಯಾಚರಣೆ ಮಾಡಿದ ತಂಡ ಲಕ್ಷ್ಮಿಸಿಂಗ್, ರಾಂಪುರ ಪೇಟೆಯ ಅಮ್ಜಾದ್ ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್, ಬಾಬಾ ಜಾಕಿರ್ ಭಾಷಾ, ಶಿವನಗೌಡ ಈಳಿಗನೂರು ಎಂಬುವವರನ್ನು ಬಂಧಿಸಿದೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ನಗರ ಪೊಲೀಸ್ ಠಾಣೆ ಪಿಐ ವೆಂಕಟಸ್ವಾಮಿ, ಪಿಎಸ್ಐ ಶೈಲಾಜ ಬೇಗಂ, ಸಿಬ್ಬಂದಿಗಳಾದ ಚಿರಂಜೀವಿ, ಅನಿಲ್ ಕುಮಾರ, ವೀರೇಶ್, ಮಹೇಶ, ಮೈಲಾರಪ್ಪ, ರಾಘವೇಂದ್ರ, ಪ್ರಭಾಕರ್, ನರಸಪ್ಪ ಭಾಗವಹಿಸಿದ್ದರು.

ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಈ ಪೊಲೀಸ್‌ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ ಎಂದು ಡಿವೈಎಸ್ಪಿ ಡಾ.ಚಂದ್ರಶೇಖರ  ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ