Please assign a menu to the primary menu location under menu

NEWSಕೃಷಿನಮ್ಮರಾಜ್ಯ

ಮೆಣಸಿನಕಾಯಿ ಬೆಳೆಯಲು ಸಾಮಾನ್ಯ ಜ್ಞಾನ: ಹೆಚ್ಚಿನ ಆದಾಯಕ್ಕೆ ನಾಂದಿ- ಶಶಿ ಕುಮಾರ್

ವಿಜಯಪಥ ಸಮಗ್ರ ಸುದ್ದಿ

ಹೊನ್ನರಹಳ್ಳಿ: ಮೆಣಸಿನಕಾಯಿ ಬೆಳೆ ಬೆಳೆಯುವ ಮೊದಲು ರೈತರು ಉತ್ತಮ ಗುಣಮಟ್ಟದ ಬೀಜ ಖರೀದಿ, ತಂತ್ರಜ್ಞಾನದ ಅಳವಡಿಕೆ, ಈ ಬೆಳೆಯಲ್ಲಿ ಬರುವ ಸಾಮಾನ್ಯ ರೋಗ ಮತ್ತು ಕೀಟದ ನಿರ್ವಹಣೆ, ಇದರೊಂದಿಗೆ ಕೊಯ್ಲಿನ ನಂತರದ ವಿಧಾನಗಳ ಅಳವಡಿಕೆಯ ಬಗ್ಗೆ ಪ್ರತಿಯೊಬ್ಬ ರೈತರು ಕೂಡ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವುದರೊಂದಿಗೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆಯ ಪ್ರಾಧ್ಯಪಕರು ಮತ್ತು ವಿಸ್ತರಣಾ ಅಧಿಕಾರಿ ಡಾ. ಎಸ್. ಶಶಿ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ತೋಟಗಾರಿಕಾ ವಿಶ್ವ ವಿದ್ಯಾಲಯ , ಕೃಷಿ ಇಲಾಖೆ, ಕೆಬಿಜೆಎನ್‌ಎಲ್, ಹನಿಯಿಂದ ಮಾರುಕಟ್ಟೆಗೆ ಕೃಷಿ ಕಾರಿಡಾರ್ (ಡಿಮ್ಯಾಕ್), ಅಮೃತ ರೈತ ಉತ್ಪಾದಕರ ಸಂಘ ಸಂಯುಕ್ತಶ್ರಯದಲ್ಲಿ ಹೊನ್ನರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಮೆಣಸಿನಕಾಯಿ ಬೆಳೆಯ ಮೇಲೆ ಸಮಗ್ರ ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೆಣಸಿನಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದೆ ಮತ್ತು ಈ ಬೆಳೆಯಲ್ಲಿ ಮುಖ್ಯವಾಗಿ ಹೂ ಬಿಡುವ ಸಮಯದಲ್ಲಿ ಹೆಚ್ಚಿನ ಕೀಟಗಳು ಬರುವುದರಿಂದ ಸರಿಯಾದ ಸಮಯದಲ್ಲಿ ಮುನ್ನೆಚರಿಕೆ ಕ್ರಮ ತಗೆದುಕೊಳ್ಳುವುದರಿಂದ ಹೆಚ್ಚಿನ ಇಳುವರಿ ಪಡೆಯಬಹದು ಎಂದರು.

ತೋಟಗಾರಿಕ ವಿಶ್ವವಿದ್ಯಾಲಯ ಬಾಗಲಕೋಟೆಯ ಸಹ ಪ್ರಾಧ್ಯಪಕ ಡಾ.ಎಂ.ಎ.ವಾಸೀಮ್ ಸಮಗ್ರ ರೋಗ ನಿರ್ವಹಣೆ ಕುರಿತು ಮಾತನಾಡಿ ಮುಖ್ಯವಾಗಿ ನಮ್ಮ ಪಾರಂಪರಿಕ ಪದ್ದತಿಯಲ್ಲಿ ಉಪಯೋಗಿಸುವಂತಹ ಬೇವಿನ ಎಣ್ಣೆಯನ್ನು ಮೆಣಸಿನಕಾಯಿ ಗಿಡದ ಮೇಲೆ ಸಿಂಪಡಿಸುವುದರಿAದ ಕೀಟಗಳನ್ನು ಕಡಿಮೆ ಮಾಡಬಹುದು ಮತ್ತು ಇದರೊಂದಿಗೆ ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ನಂತರ ಔಷಧಿಗಳನ್ನು ಖರೀದಿ ಮಾಡುವುದು ಒಳಿತು ಎಂದರು.

ತೋಟಗಾರಿಕ ವಿಶ್ವವಿದ್ಯಾಲಯ ಬಾಗಲಕೋಟೆಯ ಸಹ ಪ್ರಾಧ್ಯಪಕರಾದ ಡಾ.ನೂರೂಲ್ಲಾ ಹಾವೇರಿ ಮಾತನಾಡಿ ಮುಖ್ಯವಾಗಿ ಕೀಟಗಳು ಬರುವುದು ಸಾಮಾನ್ಯ ಮುಖ್ಯವಾಗಿ ಬೆಳೆಯ¸ ಸುತ್ತ ಸಜ್ಜೆ ಮತ್ತು ಬೆಳೆಯ ಮಧ್ಯ ಚೆಂಡು ಹೂವಿನ ಗಿಡ ಹಾಕುವುದರಿಂದ ಕೀಟಗಳ ಬಾಧೆ ಕಡಿಮೆ ಮಾಡಬಹದು ಎಂದು ಸಲಹೆ ನೀಡಿದರು.

ವಿ-ಫಾರ್ಮ್ಸ್‌ನ ಡಾ. ಮಾನಸ್ ಮಾತನಾಡಿ ಇಂದು ಹೆಚ್ಚಾಗಿ ರಾಸಯಾನಿಕ ಉಪಯೋಗಿಸುತ್ತಿರುವುದರಿಂದ ಇಂದು ಇಂಡೋಲಫರ್‌Aತಹ ಹಾನಿಕಾರಕ ರಾಸಾಯಾನಿಕ ವಸ್ತುಗಳು ತಾಯಿಯ ಎದೆಯ ಹಾಲಿನಲ್ಲಿ ಕಾಣ ಬರುತ್ತಿರುವುದು ಆಘಾತಕಾರಿ ವಿಷಯ, ಇದಕ್ಕೆ ಮುಖ್ಯ ಕಾರಣ ನಾವು ಉಪಯೋಗಿಸುವ ರಾಸಾಯಾನಿಕ ರಸಗೊಬ್ಬರ ಮತ್ತು ಔಷಧಿಗಳು ರೈತರು ತಮ್ಮ ಮನಸೋ ಇಚ್ಛೆ ರಾಸಾಯಾನಿಕ ವಸ್ತುಗಳನ್ನು ತಮ್ಮ ಹೊಲದಲ್ಲಿ ಉಪಯೋಗಿಸಬಾರದು ಸಾಧ್ಯವಾದಷ್ಟು ಜೈವಿಕ ವಸ್ತುಗಳನ್ನು ಉಪಯೋಗಿಸುವುದು ಒಳಿತು ಎಂದರು.

ತರಬೇತಿಯ ಭಾಗವಾಗಿ ಸಮೀಪದ ಮೆಣಸಿನಕಾಯಿ ಹೊಲಕ್ಕೆ ವಿಜ್ಞಾನಿಗಳ ತಂಡ ಭೇಟಿ ನೀಡಿ ರೈತರೊಂದಿಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ತಿಳಿಸಿದರು ಮತ್ತು 80 ರೈತರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಕೋರಮಂಡಲ್ ಇಂಟರ್‌ನ್ಯಾಷನಲ್‌ನ ಬೀರೂರು ಎಸ್, ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ಸಲಹೆಗಾರರಾದ ಸಜ್ಜನ್, ರೈತರಾದ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯ ಹಿರೇಗೌಡ ಮಾಗಿ , ಡಿಮ್ಯಾಕ್ ಯೋಜನೆಯ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

error: Content is protected !!
LATEST
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ